ಪುಟ:ನಭಾ.djvu/೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

12 ಸತೀಹಿತ್ಯಹೀನೇ ವಿಚಾರಮಾಡಿ ಈಗಲೇ ಎಚ್ಚರಗೊಳ್ಳು ವದು ಅಗತ್ಯ. - (ನಿಜ, ನಿಜ? ಹಾಗಾಗುವುದರಿಂದ ಭಾರತಭೂಮಿಯ ಭದ್ರತೆಯೇ ಹೋಗಿ ಕಷ್ಟ ಕೇಶಗಳಿಗೆಡೆಯಾಗುವುದು.” ಎಂಬ ವಾಕ್ಯವು ಆಕಾಶವಾ ಟೆಯಂತೆ ಕೇಳಿಸಿತು, ಎಲ್ಲರೂ ಆಶ್ಚರ್ಯದಿಂದ ನೋಡಿದರು. ಚಿದಾ ನಂದನು ಬಂದು ಮುಂದೆನಿಂತು ಮತ್ತೆ ಮತ್ತೆ ಆ ವಾಕ್ಯಗಳನ್ನೇ ಹೇಳು ತ್ಯ, ನಭೆಯ ತಲೆಯಮೇಲೆ ಕಯ್ದಿರಿಸಿ ನಭಾ ! ಭಲೆ ಭಲೆ!! ತಹಸೀಲ ವಾರನ ಮಗಳಾದುದು ಸಾರ್ಥಕವಾಯ್ತು.” ಎಂದು ಹೇಳಿದನು. ರಮಾಮಣಿ ಪತಿಯ ಮುಖವನ್ನು ನೋಡಿ, ಯಾವದೋ ಕೆಲಸ ಕಾಗಿ ಎದ್ದು ಹೋಗಲನುವಾದಳು, ಅವಳ ಕೈಯನ್ನು ಚಿದಾನಂದನೇ ಹಿಡಿದು ಕುಳ್ಳಿರಿಸಿ, “ಈಗ ಹೋಗಕೂಡದು, ನಾನು ಅದನ್ನು ತೆಗೆದು ಕೊಂಡೇ ಬಂದೆನು, ಕುಳಿತುಕೊ” ಎಂದು ಆಜ್ಞೆ ಕೊಟ್ಟು, ನಿರಂಜನನ ಕಡೆಗೆ ತಿರುಗಿ (ನಿರಂಜನ? ನೀನು ಆವಾಗ ಬಂದೆ? ” ಎಂದನು. ನಿರಂಜನ:-ಇಂದು ನಾಳೆ ಮಾತ್ರ ವಿರಾಮವಿದ್ದಿತು. ಆದುದರಿಂದ ಬಂದೆನು, ಬರುವೆನೆಂದು ತಿಳಿಸಲೂ ಆಗಲಿಲ್ಲ. ತಮಾ:- ತಾವು ಮನೆಗೆ ಬಂದುದಾವಾಗ? ಚಿದಾನಂದ:- ಹೇಗೆತಾನೇ ತಿಳಿವುದು? ಪತ್ರ ಪುತ್ರಿಯರ ಸುಖ ಗೋಷ್ಠಿಯಲ್ಲಿ ರುವ ತಮಗೆ ನನ್ನ ಆಗಮನವು ತಿಳಿವುದೆ? ಹೇಗಾದರೂ ಆಗಲಿ; ವಿಶ್ವವಿದ್ಯಾಲಯದ ಬಿ. ಏ. ಪಟ್ಟಾಂಕಿತ ಮಹಾಶಯನೊಬ್ಬನೂ, ತಹಸಿಲ್ದಾರನ ಗೃಹರಾಜ್ಯಕ್ಕೆ ರಾಣಿಯಾದ ಪ್ರೌಢಾಂಗನೆಯೊಬ್ಬಳೂ ಸಾಧಾರಣ ಬಾಲೆಯ ವಾಕ್ಯಕ್ತಿಗೆ ಸೋತಿರಿ! ಇನ್ನೇನು? ರಮಾಮಣಿ ನಕ್ಕು ಹೇಳಿದಳು:- ಎಷ್ಟೇ ಆದರೂ ತಹಸೀಲ್ ದಾರರ ಮಗಳು, ಅದರಲ್ಲಿಯೂ ವಿದ್ಯಾವತಿ!” ಚಿದಾನಂದ:- ಅಹುದು; ತಹಸೀಲ್ದಾರರ ಮಗನಿಗಿಲ್ಲದ ಯೋ ಗ್ಯತೆ ಮಗಳಿಗಲ್ಲವೆ? ಆ ನನ್ನ ಶಕ್ತಿಯೆಲ್ಲವೂ ಅವಳೊಬ್ಬಳನ್ನು ಮಾತ್ರ ಸೇರಿರುವುದೇನೋ ? ನಭಾ:- ಗೆಲುವೇನು? ಸೋಲೇನು? ಅಪ್ಪಾ! ಇವರು ಏನೇನೋ ಪ್ರಶ್ನೆಗಳನ್ನು ಕೇಳಿದುದಕ್ಕೆ ನಾನು ನನಗೆ ತಿಳಿದ ಉತ್ತರವನ್ನು ಹೇಳಿ