ಪುಟ:ನಭಾ.djvu/೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

73 ದೆನು; ಅಷ್ಟೆ ! ಆದರೆ ನ್ಯಾಯಾನ್ಯಾಯ ವಿಮರ್ಶೆಯನ್ನು ನಿನಗೇ ವಹಿಸಿ ರುವೆನು. ಚಿದಾನಂದ:- ನಿಜ? ನೀನು ಹೇಳಿದುದೇ ನ್ಯಾಯ. ರಮಾ:- ನಿಜ, ಆದರೆ, ಕಾಲಸ್ಥಿತಿಯು ಒಂದೇಸಮನಾಗಿರದಷ್ಟೆ ! ಈಗ ಇರುವುದು ಹೇಗೆ ತಿರುಗುವುದೆ? ನಭಾ:- ಹೇಗಾದರೂ ತಿರುಗಲಿ! ನನ್ನ ಸ್ಥಿತಿ ಎಷ್ಟು ಕೆಟ್ಟ ರೂ ಶಂಕರಪೇಟೆಯಲ್ಲಿದ್ದ ಕೆಡದು, ಆಸ್ಥಿತಿಯನ್ನು ಒಮ್ಮೆ ಸ್ಮರಿಸಿ ಕೊಂಡಯಾತ್ರದಿಂದಲೇ ಎಂತಹ ಕಷ್ಟವಾದರೂ ಸುಖವಾಗದಿರದು. ಇಂತಹ ಕಷ್ಟ ಸುಖಗಳಿಗೆ ಹೆದರಿ, ಅಥವಾ ಮೆಚ್ಚಿ ಧರಕ್ಕೆ ಲೋಪಬರು ವಂತೆ ಮಾಡಿಕೊಳ್ಳು ವುದೇ ನೀತಿಯೊ? ಚಿದಾ:- ಎಂದಿಗೂ ಕೂಡದು, ಸಾಧಿಸು; ಈ ಧರ್ಮಮಾರ್ಗ ವನ್ನೇ ಅನುಸರಿಸಿ ನಡೆ, ನಿನಗೆ ಸುಖವಾಗುವುದು, ನಿನ್ನಲ್ಲಿರುವ ವಿದ್ಯಾ ಜ್ಞಾನ, ಬಲ, ಧೈರ್ಯ, ದೃಢಪ್ರಯತ್ನವೇ ಮೊದಲಾದ ಗುಣಗಳ ದಿವ್ಯ ಜ್ಯೋತಿಗಳು ನಿನ್ನ ಭವಿಷ್ಯ ಜೀವನ ಮಾರ್ಗಕ್ಕೆ ಸಹಕಾರಿಗಳಾಗಿದ್ದು, ನಿರ್ಮಲ ಪ್ರಕಾಶವನ್ನು ಕೊಡುವಂತಿರಲಿ! ನಭಾ:-ಆತುರದಿಂದ ನಿನ್ನ ಆಶೀರ್ವಾ ದಬಲದಿಂದಲ್ಲದೆ ನನಗದು ಸಾಧ್ಯವೆ? ಅಪ್ಪಾ ?” ಚಿದಾ:-ನಭಾ ! ಸಕಲವೂ ಸಾಧ್ಯವಾಗುವುದು, ನಿನ್ನಂತಹ ಸುಬ್ರಹ್ಮಚಾರಿಣಿಯರಾದ ಸ್ತ್ರೀಯರಿಂದಲೇ ಈ ಭಾರತವರ್ಷವು ಚಿರ ಕೀರ್ತಿಯನ್ನು ಪಡೆದು ಪ್ರಕಾಶಿಸಬೇಕಾಗಿದೆ. ಇಹ ಸೌಖ್ಯವನ್ನು ತೃಣ ವೆಂದು ನಂಬಿ ತಳ್ಳಿ ಬಿಡು; ಸ್ವಾಮಿಯಮೇಲಿನ ದೃಢ-ನಿರ್ಮಲಪ್ರೇಮ ದಿಂದ ಕಾರವನ್ನು ನಡೆಯಿಸು, ನಿನ್ನ ಸಂಕಲ್ಪಕ್ಕೆಂದಿಗೂ ಹಾನಿಬಾರ ದಿರಲಿ ! ನಿನ್ನ ಮಾರ್ಗದಲ್ಲಿ ಸ್ವಪ್ರಯಾಸದಿಂದ ಬೆಳಗುವ ಜ್ಞಾನ, ವಿದ್ಯಾ, ಬಲ, ಧೈರ, ಸೈಶ್ಯ, ಸಾಹಸಾದಿಗಳು ಸಾಕಾಗುವಷ್ಟು ಸಿದ್ಧವಾಗಿರಲಿ! ನಭೆಯು ಆನಂದಪರವಶಳಾದಳು, ಅವಳ ಹೃದಯಾಕಾಶದಲ್ಲಿ ಒಮ್ಮಿಂದೊಮ್ಮೆಯೇ ಸಾವಿರಾರು ಚಂದ್ರರು ಉದಯಿಸಿದ್ದರೂ ಆಗದ ಒಂದುವಿಧವಾದ ಅದ್ಭುತ, ಅಪೂರ್ವ ಪ್ರಕಾಶವು ಆವಿರ್ಭೂತವಾದಂತಾ