ಪುಟ:ನಭಾ.djvu/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

4] ಸತೀಹಿತೈಷಿಣೀ ಯಿತು, ತನ್ಮೂಲಕ ವರ್ಷಿಸಲ್ಪಟ್ಟ ಸುಧಾರಸವು ನೇತ್ರ ದ್ವಾರಾ, ವಾತಿ ಧಾರಾಕಾರವಾಗಿ ಹರಿಯಿತು. ನಭೆಯು ಆ ಸ್ಥಿತಿಯಲ್ಲಿ ಮಾತನಾಡ ಲಾರದಿದ್ದಳು. ರಮಾಮಣಿಯು ಆಶ್ಚರದಿಂದ (€ ನಭಾ? ಹೀಗೇಕೆ, ಅಳುವೆ? ” ಎಂದಳು. ನಿರಂಜನನು « ಸಭಾ ! ಇದೇನು? ನಡುಗುತಿರುವೆ ?” ಎಂದನ.. - ಚಿದಾನಂದನು ನಭೆಯ ಹಸ್ತವನ್ನು ಹಿಡಿದು ನಭಾ ! ಇಷ್ಟಕ್ಕೆ ನಿನಗೆ ಪರಮಾನಂದವಾದರೆ, ಭಾರತೋದ್ಧಾರಕ್ಕೆ ಬೇಕಾಗುವ ನಿನ್ನಂತಹ ಸ್ತ್ರೀಯರನ್ನು ಹೊಂದಬಹುದಾದ ಅನಾಥಾಲಯಕ್ಕೆ ನೀನ ಅಧಿಕಾರಿಣಿ ಯಾದರೋ ?” ಎಂದನು. ನಭೆ, ಕಂಪಿತಸ್ವರದಿಂದ ಹೇಳಿದಳು:-* ಅಪ್ಪ ? ನಾನಂತಹ ಪುಣ್ಯ ವತಿಯೇ? ನನಗಷ್ಟರ ಪ್ರಭಾವ-(ಶಕ್ತಿ ವಾದರೂ ಇದೆಯೇ? ಚಿದಾನಂದ:-ನಿಸ್ಸಂಶಯವಾಗಿಯೂ ಅಹುದು, ಧರ ಪ್ರತಿಪಾ ದನೆಗೆ ಆರೋಗದೃಢಕಾಯವು ಬೇಕಷ್ಟೆ ? ನಿನಗೆ ಅದಿರಲೆಂಬುದೇ ಭಗ ವಂತನಲ್ಲಿ ನನ್ನ ಮುಖ್ಯ ಪ್ರಾರ್ಥನೆ. ಈವೇಳೆಗೆ ಸರಿಯಾಗಿ ರಮಾನಂದ, ಭಗವಾನಂದರು ಬಂದು ನಭೆ ಯನ್ನು ಕುರಿತು “ ನಭಾ ! ಉಪಾಧ್ಯಾಯರು ಬಂದಿರುವರು, ಪಾಠಕ್ಕೆ ಬರುವುದಿಲ್ಲವೆ ? ” ಎಂದರು. ನಭೆಯು ಅವರಿಬ್ಬರ ಕಗ್ಗ ಳನ್ನೂ ಹಿಡಿದು : ಅಣ್ಣಾ ! ನಡೆಯಿರಿ' ಎಂದು ಹೊರಟುಹೋದಳು. ಚಿದಾನಂದನು ನಿರಂಜನನ ಕೈಹಿಡಿದು ವಾಯುಸೇವನೆಗೆ ಕರೆದೊ ಝೂನು, ರಮಾಮಣಿಯ II ಇದೇ ಸದ್ವಿದ್ಯೆಯ ಮಹಾತ್ಮ ! ಹೊಟ್ಟೆ ಹೊರೆಯಲು ಹೇಳುವ ವಿದ್ಯೆಯಲ್ಲಿ ಇದನ್ನು ಹೇಳುವರೇ ? " ಎನ್ನುತ್ತ ಮೇಜಿನಮೇಲಿದ್ದ “ ಭಕ್ತ ವಿಜಯ ” ಎಂಬ ಗ್ರಂಥವನ್ನು ಓದಲು ಪಕ್ರ ಮಿಸಿದಳು, ಈ ರೀತಿ ಆದಿನ ಎಲ್ಲರೂ ಆನಂದಲಹರಿಯಲ್ಲಿ ಮುಳುಗಿ ತೇಲಾಡುತಿದ್ದರು.