ಪುಟ:ನಭಾ.djvu/೯೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ ದೊಡ್ಡ ಮನುಷ್ಯರ ಮಕ್ಕಳು ಅಲಂಕಾರ ವಿದ್ಯಾರ್ಥಿಗಳಾಗಿರುವರಲ್ಲದೆ, ಕ್ರಮವಾಗಿ ಓದುವುದೇ ಇಲ್ಲ. ಓದದಿದ್ದರೂ ಇರಲಿ, ಒಬ್ಬರಿಗೊಬ್ಬರಿಗೆ ಐಕಮತ್ಯವು ಕೂಡ ಇಲ್ಲ. ನಭಾ:-ಹಾಗಾಗುವುದು ಅವರ ಸ್ವಭಾವ ಸಹಜಗುಣವೇ ಸರಿ, ಅದ ರಿಂದಲೇ ಸಿರಿಗೂ ಸರಸ್ವತಿಗೂ ಬಹಳ ದೂರವೆಂದು ಬಲ್ಲವರಾಡುವರು. ಭಗ:- ಆ ವಿಷಯವಿರಲಿ, ಅಕ್ಕ? ಕೆಲವರು ಸ್ತ್ರೀವಿದ್ಯಾಭಾಸ ವನ್ನೇ ನಿಷೇಧಿಸುವರಲ್ಲ, ಅದೇಕೆ? ನಭಾ:- ಕಾರಣವು ಅನೇಕವಾಗಿರುವಂತೆ ತಿಳಿದಿದೆ, ಮುಖ್ಯ ವಾಗಿ, ಸ್ತ್ರೀಯರು ಕುಶಾಗ್ರಬುದ್ಧಿಯುಳ್ಳವರು, ವಿಷಯಗಳನ್ನು ಒಮ್ಮೆ ನೋಡಿದಮಾತ್ರದಿಂದಲೇ ತಿಳಿಯುವ ಸಾಮರ್ಥ್ಯವು ಅವರಲ್ಲಿದೆ, ಅವರು ವಿದ್ಯಾವತಿಯ ರಾದರೆ ವಿದ್ಯೆಯಿಂದ ಅಹಂಕೃತರಾದರೂ ಆಗಬಹುದು. ಸುಶಿಕ್ಷೆಯ ಸದ್ವಿದ್ಯಾಭ್ಯಾಸದಿಂದ ವಿವೇಕಿಗಳಾದರೂ ಆಗಬಹುದು. ಸ್ತ್ರೀಯರಿಗೆ ವಿದ್ಯೆಯೇ ಬೇಡವೆಂದರೇನರ್ಥ? (ವಿದ್ಯೆ' ಎಂಬುದಕ್ಕೆ ಮನು ಷ್ಯನು ಏನು ಅರ್ಥಮಾಡುವನೋ, ಅದಕ್ಕನುಸಾರವಾಗಿಯೇ 'ಬೇಕು' (ಬೇಡ' ಎಂಬ ಉತ್ತರವೂ ಹೊರಡುವುದು, ವಿದ್ಯೆಯೆಂದರೆ, ಪ್ರಪಂಚದ ತಿಳುವಳಿಕೆಯನ್ನು ತಿಳಿವುದಲ್ಲ; ದೊಡ್ಡ ದೊಡ್ಡ ಪರೀಕ್ಷೆಗಳಲ್ಲಿ ತೇರ್ಗಡೆ ಯನ್ನು ಹೊಂದಿ ಬಿರುದಾವಳಿಯ ಅಕ್ಷರಗಳನ್ನು ಹೆಸರಿನ ಮುಂದಿಟ್ಟು ಕೊಂಡು ಮೆರೆವುದಲ್ಲ; ಸಭಾ ಮುಖದಲ್ಲಿ ನಿಂತು ಸಭಿಕರು ಮರುಳಾಗು ವಂತ ಮಾತನಾಡಿ ಅವರಿಂದ ಪಂಡಿತರೆನಿಸಿಕೊಳ್ಳು ವುದಾಗಲಿ, ಗ್ರಂಥರ ಚನಾ ಕಾರ್ಯ ದಿಂದ ದೊಡ್ಡ ದೊಡ್ಡ ಬಹುಮಾನಪತ್ರಿಕೆಗಳನ್ನು ಪಡೆದು ಅವನ್ನು ಪ್ರಕಟಿಸಿ ದೊಡ್ಡವನೆಂದೆನಿಸಿಕೊಳ್ಳುವುದಾಗಲೀ, ವಿದ್ಯೆಯ ಶಕ್ತಿ ಯಲ್ಲ, ವಿದ್ಯೆಯೆಂದರೆ ಸರಿಯಾದ ತಿಳಿವಳಿಕೆ, ಇದು ಸರಿ; ಇದು ತಪ್ಪ; ಈ ಕೆಲಸವನ್ನು ಮಾಡಬಹುದು; ಈ ಕೆಲಸವನ್ನು ಮಾಡಬಾರದು; ಇದು ಸತ್ಯ; ಇದು ಅಸತ್ಯ; ' ಎಂಬಿವೇ ಮೊದಲಾದುವನ್ನು ವಿವೇಚನಾಶಕ್ತಿಯ ಮೂಲಕ ತಿಳಿವುದೇ 'ವಿದ್ಯೆ' ಇಂತಹ ಶಕ್ತಿ, ಪ್ರಪಂಚದಲ್ಲಿರುವ ಆವ ಪ್ರಾಣಿಗೆತಾನೇ ಬೇಡ? ಈಗಳಿನ ಸ್ತ್ರೀವಿದ್ಯಾಭ್ಯಾಸವು ಸ್ತ್ರೀಯರಿಗೆ ಬೇಕಾ ಗಿಲ್ಲವೆಂದೆನ್ನ ಬಹುದು, ವಿದ್ಯೆಯೆಂದರೆ, ಪರೀಕ್ಷೆಗಳಲ್ಲಿ ಹೇಗಾದರೂ