ಪುಟ:ನಭಾ.djvu/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

78 ಸತೀಹಿತೈಷಿಗೇ। ತೇರ್ಗಡೆಹೊಂದಿ ಪದವಿಯನ್ನು ಪಡೆವುದಾಗಿ ಪರಿಣಮಿಸಿರುವುದು. ಮೊನ್ನೆ ಅಪ್ಪನು ವರ್ತಮಾನಪತ್ರಿಕೆಯನ್ನು ಓದುತ್ತಿದ್ದನು, ಅದರಲ್ಲಿದ್ದ ಒಂದು ಕೌತುಕವನ್ನು ಹೇಳಿದನು. ಅದು ಬಹು ಸ್ವಾರಸ್ಯವಾಗಿದೆ. ಅದನ್ನು ನಿಮಗೆ ನಾನು ಹೇಳುವೆನು, ಈಗ ಒಂದು ತಿಂಗಳಿಗೆ ಮುಂದೆ ಒಬ್ಬ ವಿದೇಶೀಯ ಅಧಿಕಾರಿಯು (ಇನಸ್ಪೆಕ್ಟರನು) ಒಂದು ಪಾಠಶಾಲೆಗೆ ಹೋಗಿದ್ದನಂತೆ! ಅವನು ಪರೀಕ್ಷೆಯನ್ನು ಮುಗಿಯಿಸಿದ ಬಳಿಕ ಆ ತರ ಗತಿಯಲ್ಲಿದ್ದ (150) ನೂರ ಅಯ್ಯತ್ತು ಹುಡುಗರನ್ನೂ “ ನೀನು ಓದಿ ಮುಗಿಸಿದ ಬಳಿಕ ಏನು ಮಾಡುವೆ? ” ಎಂದು ಕೇಳಿದನಂತೆ, ಅದಕ್ಕೆ “ ನಾನು ಮಾಮಲೇದಾರನಾಗುವೆನು.” ಎಂದು ಕೆಲವರ , 1 ನಾನು ಡಾಕ್ಟರನಾ ಗುವೆನು ” ಎಂದು ಮತ್ತೆ ಕೆಲವರೂ, ಡಿಪ್ಪಟಿಕಮಿಷ ನರ್ ಆಗುವೆನು.” ಎಂದು ಕೆಲವರೂ ಹೇಳಿದರಂತೆ. ಒಬ್ಬನಾದರೂ “ ನಾನು ಸ್ವತಂತ್ರ ಜೀವನಕ್ಕೆ ಪ್ರಯತ್ನಿಸುವೆನು; ಅಥವಾ ದೇಶಹಿತೈಷಿ ಯಾಗಿ ಕಾಠ್ಯಮಾಡುವೆನು.” ಎಂದು ಹೇಳಲಿಲ್ಲವಂತೆ: ಇಂತಹ ವಿದ್ಯಾ ರ್ಥಿಗಳ ವಿದ್ಯೆಯಿಂದ ಏನು ಫಲ? ವಿದ್ಯಾಭ್ಯಾಸಕ್ಕೆ ಆರಂಭಮಾಡುವಾಗ ಲೇ ಭಾವೀಪರಿಣಾಮವನ್ನು ಆಲೋಚಿಸಿ ತೀರ್ವ ನಮಾಡಿಯೇ ಆರಂಭ ಮಾಡಬೇಕು. ಉದ್ದೇಶವಿಲ್ಲದೆ ಆರಂಭಿಸಿದ ಕಾರ್ಯ ವು ಹೇಗೆ ನಿರರ್ಥ ಕವೋ, ಇದೂ ಹಾಗೆಯೇ ಸರಿ ಇನ್ನು ಸ್ತ್ರೀವಿದ್ಯಾಭ್ಯಾಸವೂ ಹಾಗೆಯೇ! ಸ್ತ್ರೀವಿದ್ಯೆಯ ಅಭ್ಯಾಸಕ್ಕೂ ಪುರುಷರ ವಿದ್ಯೆಯ ಅಭ್ಯಾಸಕ್ಕೂ ತಾರತಮ್ಯ ವಿಲ್ಲದಿರುವುದು ಸಲ್ಲದುದೆ: ಇನ್ನು ಎಲ್ಲರಿಗೂ ಸರಿಹೋಗುವಂತೆಂದರೆ, ಪ್ರಪಂಚದಲ್ಲಿರುವ ಪ್ರತಿಯೊಬ್ಬನೂ ವಿದ್ಯಾ ರ್ಥಿಯೇ! ಪ್ರತಿಯೊಬ್ಬನೂ ಒಂದಲ್ಲ-ಒಂದನ್ನು ಕಲಿಯಲೇಬೇಕಾಗಿರುವುದು, ಆವಿಷಯನ್ನು ಬಿಟ್ಟು ಪ್ರಕೃತ ಸ್ತ್ರೀವಿದ್ಯಾಭ್ಯಾಸ ವಿಚಾರವನ್ನು ಮಾಡುವುದಾದರೂ, ಒಂದೆರಡು ಘಂಟೆಗಳು ಕಳೆಯದಿರವೂ. ಭಗವಾನಂದ-ರಮಾನಂದರು, ಹುಟ್ಟರಂತೆ ಕೇಳುತ್ತ ಕಳಿತರು. ನಭೆಯು ಅವರ ಸ್ಥಿತಿಯನ್ನು ತಿಳಿದು “ ಈಗ ಮಲಗಿಕೊಳ್ಳಿರಿ. ನಾನು ಉಳಿದ ವಿಷಯವನ್ನು ಪ್ರಾತಃಕಾಲ ಹೇಳುವೆನು.” ಎಂದಳು. ಸೋದ ರರು ಸಮ್ಮತಿಸಲಿಲ್ಲ, ಅವರು “ ಈಗಲೇ ಹೇಳು, ಈ ವಿಷಯವನ್ನು