ಪುಟ:ನಭಾ.djvu/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಭಾ 79 79 ಕೇಳಲು ನನಗೆ ನಿದ್ದೆ ಬಾರದು.” ಎಂದರು ಸಭೆಯ ಪುನಃ ಹೇಳಲು ಉಪಕ್ರಮಿಸಿದಳು. (ಭಗವಂತನು ಸ್ತ್ರೀಯರಿಗೂ ಪುರುಷರಿಗೂ ರೂಪಾದಿಗಳಲ್ಲಿ ತಾರ ತಮ್ಯವನ್ನು ಕಲ್ಪಿಸಿರುವಂತೆಯೇ ಗುಣ, ಸ್ವಭಾವ, ಕೃತ್ಯಾದಿಗಳಲ್ಲಿ ಯ ತಾರತಮ್ಯವಿದ್ದೇ ಇರಬೇಕು, ಪುರುಷನು ಸಂಸಾರಕಾರ್ಯ ನಿರ್ವಾಹಕ್ಕೆ ದ್ರವ್ಯಾರ್ಜನೆಯಲ್ಲಿ ನಿರತನಾದರೆ, ಸ್ತ್ರೀಯು ಆ ದ್ರವ್ಯವನ್ನು ಸರಿಯಾದ ಮಾರ್ಗದಲ್ಲಿ ವ್ಯಯಮಾಡಿ ಗೃಹವನ್ನು ಸ್ವರ್ಗವನ್ನಾಗಿ ಮಾಡಲು ಸಮ ರ್ಥಳಾಗಬೇಕು. ಸ್ತ್ರೀಯು ವ್ಯಯಮಾಡಿದುದನ್ನು ಪುರುಷನು ಸಹನೆ ಯಿಂದ ಅನುಭವಿಸಿ, ತಾನೂ ತನ್ನನ್ನು ಸೇರಿದವರೂ ಸುಖವಾಗಿರುವಂತೆ ಮಾಡಬೇಕು, ಪುರುಷನು ಅತಿಥಿ ಅಭ್ಯಾಗತರನ್ನು ಆದರದಿಂದ ಬರಮಾ ಡಿದರೆ, ಅವರಿಗೆ ಆದರೋಪಚಾರಗಳಿಗೆ ಅಣಿ ಮಾಡಲು ಪಾದ್ರಿಯ ಕಲಿ ತಿರಬೇಕು, ಹೀಗೆಯೇ ಸತಿ ಪತಿಯರಿಗೆ ಪರಸ್ಪರ ಸಹಾಯವಿದ್ದೇ ಇರ ಬೇಕು, ಅವರಿಬ್ಬರೂ ದೇಹದಿಂದ ಒಬ್ಬರೇ ಇದ್ದರೆಂತೋ, ಅಂತೆಯೇ ಇದು ಕಾರವನ್ನು ನಿರ್ವಹಿಸಬೇಕು, ಸತಿಯ ಗುಣಾನುಸಾರವಾಗಿ ಪತಿಯೂ, ಪತಿಯ ಗುಣಾನುಸಾರವಾಗಿ ಸತಿಯೂ ಇಲ್ಲದೆಹೋದರೆ ಸಂಸಾರವು ಸುಲಲಿತವಾಗಿ ಸಾಗದು, ಉದಾಹರಣೆಗೆ ಒಂದು ಸಂಸಾರ ವನ್ನು ತೆಗೆದುಕೊಳ್ಳುವ, ಪತಿಯು ಸುಳ್ಳು ಹೇಳುವವನಾಗಿ, ಅದರಿಂದಲೇ ಜೀವನವನ್ನು ಕಳೆವನೆಂದು ಭಾವಿಸುವ ಅವನ ಸಂ ನಾರವು ಸುಖದಾ ಯಕವಾಗಿರಬೇಕಾದರೆ, ಅವನ ಹೆಂಡತಿಯು ಅವನ ಗುಣಗಳನ್ನು ತಿದ್ದ ಬಲ್ಲವಳಾಗಿ, ಇಲ್ಲವೇ ಅವನ ಗುಣಗಳಿಗೆ ಅನುಸಾರವಾಗಿ ನಡೆಯದಿದ್ದರೆ ತೀರದು. ಹಾಗೆಯೇ ಪ್ರತಿಯೊಂದನ್ನೂ ತಿಳಿಯಬೇಕು, ಮತ್ತೆ ಈಗಿನ ವಿದ್ಯಾಭ್ಯಾಸದ ದುರ್ಗುಣಗಳನ್ನು ಕೂಡ ಹೇಳಿತೀರದು. ಈಗ ನೋಡಿರಿ! ವಿದ್ಯಾಭ್ಯಾಸದ ಇಲಾಖೆಯ ಅಧಿಕಾರಿಗಳು ಗೊತ್ತು ಮಾಡಿಟ್ಟಿದ್ದ ಪಠ್ಯ ಪುಸ್ತಕವೊಂದನ್ನು ತೆಗೆದುಕೊಳ್ಳಿರಿ. ಅದರ ಒಂದು ಪಾಠವ ಹಜಾಮ ರವನ ವಿಚಾರವಾಗಿದೆ. ಅದರಲ್ಲಿ ಹಜಾಮನೊಬ್ಬನ ಚಿತ್ರವೂ ಅವನ ಮಗ್ಗುಲಿನಲ್ಲಿ ಯೇ ಹಡಪಮೊದಲಾದವೂ ಇವೆ. “ ಪಾಠವು : ಇವನು ಹಜಾಮ; ಇವನಬಳಿ ಕತ್ತಿ, ಚಾಕು, ಬಟ್ಟಲುಗಳಿವೆ, ಇವನು ನಮಗೆ