ಪುಟ:ನಭಾ.djvu/೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಭಾ 81 ಆರಂಭದಿಂದಲೂ ನಮ್ಮ ಸ್ತ್ರೀಯರನ್ನು ಸುಶಿಕ್ಷಾರೂಪವಾದ ವಿದ್ಯೆಯಿಂದ ಪ್ರೋತ್ಸಾಹಿಸಿದ್ದರೆ ನಮ್ಮಿನಾಡಿನಲ್ಲಿ ಶಮದಮಾದಿಗಳಿಂದ ಪರಸ್ಪರ ಸನ್ನೈ ತ್ರಿಯ, ಸಹಜಸೌಹಾರ್ದಭಾವವೂ ಸದಾಚಾರನ ಸ್ಥಿರರಾಜ್ಯಭಾರದಿಂದ ದುರಾಚಾರನ ನಿಗ್ರಹವೂ ಸಹಜವಾಗಿಯೇ ಆಗುತ್ತಿದ್ದಿತು. ಈಗಲಾ ದರೂ, ಸುಶಿಕ್ಷೆಯು ಹೆಚ್ಚು ವಂತೆ ಮಾಡಿ ಸ್ತ್ರೀಯರಿಗೆ ಉಚಿತ ವಿದ್ಯಾಭ್ಯ ಸವನ್ನು ಮಾಡಿಸಿ, ದೇಶವು ಅಭಿವೃದ್ದಿಗೆ ಬರುವಂತೆ ಪ್ರಯತ್ನಿಸುವುದು ಶೇ ಯಸ್ಕರವು, ಈಗಳಿನ ವಿದ್ಯೆಯ ಸ್ವಚ್ಛಂದತೆಯ ದೆಸೆಯಿಂದ ಸತ್ತುರು ಷರ ಸಮಾಜವೂ ಅಪವಾದಾನಲದಿಂದ ದಹಿಸಿಹೋಗುವ ದುಷ್ಪಾಲವು ಬಂದೊದಗಿರುವುದು, ಪರಿಣಾಮವೀರೀತಿ ಯಾಗಿರುವುದರಿಂದಲೇ ಸ್ತ್ರೀ ವಿದ್ಯಾಭ್ಯಾಸಕ್ಕೆ ನಿಷೇಧವುಂಟಾಗಿರುವುದು. ಭಗ-ಹಾಗಾದರೆ, ದುಷ್ಟರಾದವರನ್ನು ಸರ್ಕಾರದವರು ಹಿಡಿದು ಶಿಕ್ಷಿಸಬಾರದೇಕೆ? ನಭಾ:-ಇವೆಲ್ಲ ಅಂತರಂಗದ ದೌಷ್ಟವು; ಗೊತ್ತಾಗುವುದೆಂತು ? ನೂರರಲ್ಲಿ ಒಂದು ಬಹಿರಂಗವಾದರೆ ಹೆಚ್ಚು, ಅಂತಹರಿಗೆ ಶಿಕ್ಷೆಯು ಇದ್ದೇ ಇರುವುದು, ಆದರೂ * ಸಾಯುವರಿಗೆ ಮದ್ದಿಲ್ಲ; ಕೆಡುವರಿಗೆ ಹಿತರಿಲ್ಲ,~ ಎಂಬ ಗಾಧೆಗನುಸಾರವಾಗಿ ಕೆಡುವರನ್ನು ಉದ್ಧರಿಸಲ್ಪ ಆರಿಗೂ ಶಕ್ತಿಯಿಲ್ಲವು, ಸರ್ಕಾರದವರೂ, “ಸ್ತ್ರೀವಿದ್ಯಾಭ್ಯಾಸವು ಅಭಿವೃ ದ್ವಿಗೆ ಬರಬೇಕು; ಸಕಲರೂ ದೇಶಸೌಖ್ಯಕ್ಕೆ ಬಡಿದಾಡಬೇಕೆಂಬ ಉದ್ದೇ ಶದಿಂದಲೇ ಪ್ರಯತ್ನ ಪಟ್ಟು ಅಸಂಖ್ಯಾಕ ದ್ರವ್ಯವನ್ನು ವ್ಯಯಮಾಡುತ್ತಿ ದ್ದರೂ, ಫಲವಿಲ್ಲವಾಗಿದೆ. ಭಂಡಯಾದ ಶರಾವತಿಚಿಕ್ಕಮ್ಮನೊಡನೆ ಬಾಳುವ ಶಂಕರನಾಥಚಿಕ್ಕಪ್ಪನ ಬಾಳಿನಂತೆಯೇ ಸದುದ್ದೇಶಪರರಾದ ಸರ್ಕಾರದವರ ಕಾಠ್ಯವು ತೃಷ್ಣಾ-ದುರಾಶಾ-ಪ್ರಭ್ಯತಿಗಳ ಪರಿಚಾರಕರಂತಿ ರುವ ಮಹಾಶಯರಾದ ನಮ್ಮ ದೇಶೀಯರಿಂದಲೇ ಭಂಗ ಹೊಂದುತ್ತಿರು ವುದು, « ಶಯ್ಯಯೇ ಸರ್ಪವಾದರೆ, ಸುಖಜೀವನದಾಶೆಯುಂಟೆ ? » ದುರಾಚಾರಪ್ರಚ್ಛತಿಗಳು ತಮ್ಮ ಕಾರಕ್ಕಾಗಿ ಎಂದೂ ಪರಿತಪಿಸಲಾರರು, ಅವರು ತಾವು ಮಾಡಿದ ಕಾರ್ಯಗಳೆಲ್ಲವೂ ಸರಿಯಾದುವೆಂದೇ ಭಾವಿಸು ವರು, ಅದರಂತಯೇ ಮಾಡಲು ಮೋಟಬಾಲದನರಿಯಂತ-ಉಪದೇಶಿ