ಪುಟ:ನಭಾ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನpಾ 83, ದಶಮ ಪರಿಚ್ಛೇದ. ( ನಿಶಾಚರ ) ಇಲ್ಲ ಈ ಪ್ರಪಂಚದಲ್ಲಿರುವ ನಾನಾ ಜೀವರಾಶಿಗಳಲ್ಲಿ ಮಾನವ ಜನ್ಮವೇ ಶ್ರೇಷ್ಠವೆಂಬುದು ಸತ್ವಸಮ್ಮತವಷ್ಟೆ ! ಅಂತಹ ಮೇಲ್ಕೆಯನ್ನು ಮಾನವನಿಗೆ ಕೊಡಲು ಅವನಿಗಿರುವ ವಿವೇಚನಾಜ್ಞಾನವೇ ಪ್ರಬಲಕಾರ ಣವೆನ್ನುವುದರಲ್ಲಿ ಸಂಶಯವಿಲ್ಲ. ಅವನು, ವಿವೇಚನೆಯಿಂದ ನ್ಯಾಯಾ ನ್ಯಾಯಗಳನ್ನು ತಿಳಿಯುವ ಶಕ್ತಿಯನ್ನು ಹೊಂದಿರುವುದಿಲ್ಲವೊ-ಅವನು. ಮನುಷ್ಯ ರೂಪಧಾರಿಯಾದ ಪಶುವೆಂದೆನ್ನು ವುದರಲ್ಲಿ ಸಂಶಯ ತೋರದು, ಪ್ರತಿಯೊಂದು ವಸ್ತುವಿನಲ್ಲಿ ಯ ಗುಣ ದೋಷಗಳನ್ನು ಹೇಗೆ ಇಟ್ಟರು ವನೋ, ಹಾಗೆಯೇ ಪ್ರಪಂಚದಲ್ಲಿ ಪಶುಪ್ರಾಯನಾದ ಮನುಷ್ಯನನ್ನೂ . ವಿವೇಚನಾಶಕ್ತಿಯುಳ್ಳ ಮನುಷ್ಯನನ್ನೂ ಸೃಷ್ಟಿಸಿರುವುದು ಪರಮಾತ್ಮನ ಇಚ್ಛೆಗೆ ವ್ಯತಿರಿಕ್ತವಾದುದಲ್ಲ. ಆದರೆ, ದುಷ್ಟನು ತನ್ನಂತೆಯೇ ಪ್ರಪಂಚ ದಲ್ಲಿರುವರೆಲ್ಲ ದುಷ್ಟರೆಂದೂ , “ ತಾನು ಕಳ್ಳ, ಪರರ ನಂಬ ” ಎಂಬಂತೆ ತಾನು ಕಳ್ಳನಾದಮಾತ್ರದಿಂದಲೇ ಪ್ರಪಂಚದವರೆಲ್ಲರೂ ಕಳ್ಳರೆಂದು ಭಾವಿಸುವುದು ಎಷ್ಟು ಮಾತ್ರಕ್ಕೆ ನ್ಯಾಯಸಮ್ಮತವಾ ಗದು, ಆವಾ ವನಿಗೆ ಆವಾವ ದುರ್ಗುಣಗಳಲ್ಲಿ ಹೆಚ್ಚು ಅನುಭವವಿರುವುದೋ ಅವನವನು ಅದರದರ ಗುಣದೋಷಗಳನ್ನು ಚೆನ್ನಾಗಿ ಬಲ್ಲನು. ಅಂಥವನು ಆವಾ ಗಲೂ ವಸ್ತುಗಳ ಛಿದ್ರಾನ್ವೇಷಣವನ್ನೆ ಮಾಡುತಿರುವನು. ಸ್ವಲ್ಪ ಮಾತ್ರ ದೋಷವು ದೊರೆವುದರಿಂದಲೇ ಅದನ್ನು ದೊಡ್ಡದನ್ನಾಗಿ ಮಾಡಿ ಚರ್ಚಿ ಸ ಬಲ್ಲನು. ಅದರಿಂದಲೇ ತನ್ನ ಬುದ್ಧಿಗೆ ತೋರಿದುದನ್ನು ಕಲ್ಪಿಸಿ ಅನರ್ಥ ಪರಂಪರೆಗಳನ್ನೂ ಉಂಟುಮಾಡಿಕೊಳ್ಳುವನು. ನಭೆಯು ಕುರ್ಚಿಯಮೇಲೆ ಮಲಗಿದ್ದಳಷ್ಟೆ, ಒಂದೆರಡು ನಿಮಿಷ ಗಳಲ್ಲಿಯೇ ಹೊಂಚಿನಿಂತಿದ್ದ ನಿದ್ರಾಂಗನೆಗೂ ವತವಾದಳು. ನಭೆಯು ಅಜಾಗರೂಕತೆಯಿಂದ ಆ ಕಿರುಮನೆಗೆ ಬೇಕಾದವರು ಪ್ರವೇಶಿಸಲು ಅವಕಾಶವಿದ್ದಿತು. ಸುಮಾರು ಇಪ್ಪತ್ತು ವರ್ಷದ ಯುವಕನೊಬ್ಬನು