ಪುಟ:ನಭಾ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

84 ಸತೀ ಹಿತೈಷಿಣೀ ಆ ಕಿರುಮನೆಯೊಳಗೆ ಪ್ರವೇಶಿಸಿ, ಬಾಗಿಲ ಅಗಣಿಯನ್ನು ಹಾಕಿ, ನಭೆಯ ಮುಂದೆ ನಿಂತನು. ದೀಪವು ಉರಿಯುತ್ತಿತ್ತು, ನಭೆಯು ಕದಲದೆಯೇ ಕುಳಿತಿದ್ದುದನ್ನು ಬಹುಹೊತ್ತು ನೋಡಿದನು; ಮೆಲ್ಲನೆ ನಭಾ !ನಭಾ !! " ಎಂದು ಎರಡು ಬಾರಿ ಕೂಗಿದನು, ನಭೆಗೆ ಎಚ್ಚರವಾಗಲಿಲ್ಲ. ಆಗಂತು ಕನು € ಇದೇ ಸುಸಮಯವು; ಈ ಘಳಿಗೆಯನ್ನು ಕಳೆದುಕೊಳ್ಳಬಾರದು. ಅಹೋರಾತ್ರಿಯ ಹಂಬಲಿಸುತ್ತಿದ್ದುದು ಇದಕ್ಕೇ ! ಇಂತಹ ವೇಳೆ ದೊರೆಯದಿದ್ದುದರಿಂದಲೇ ಈಗ ಮೂರು ತಿಂಗಳಿಂದ ನಾನು ನಾನಾವಿಧ ರೋಗಗಳಿಂದ ಪೀಡಿತನಾಗಿದ್ದುದು, ” ಎಂದು ಮೊದಲಾಗಿ ಆಲೋಚಿ ಸುತ್ತ ಅವಳ ಕೆನ್ನೆಯಮೇಲಿದ್ದ ಕೈಯನ್ನು ಮೆಲ್ಲನೆ ಹಿಡಿದನು. - ನಭೆಯ ಚಕಿತೆಯಾಗಿ ಕಣ್ಣೆರೆದು ನೋಡಿದಳು, ತನ್ನ ಹಸ್ತವ ಯುವಕನ ಹಸ್ತದಲ್ಲಿದ್ದುದನ್ನು ಅವನು ತನ್ನನ್ನೇ ನೋಡುತ್ತಲಿದ್ದುದನ್ನೂ ಉನ್ಮತ್ತನಂತೆ ಅವನು ನಿಂತಿದ್ದುದನ್ನೂ ನೋಡಿ ತಪಿಸಿದಳು, ಅವಳ ಹೃದ. ಯುವ ಸಹಸ) ವೃಕ್ಲಿಕಗಳಿಂದ ಕಡಿಯಲ್ಪಟ್ಟರೆಷ್ಟು ಸಂಕಟಕ್ಕೊಳಗಾಗು ವುದೋ ಅಷ್ಟು ವ್ಯಥೆಗೀಡಾಯಿತು, ಆದರೂ ಆಲೋಚಿಸಿದಳು. ದುಡು ಕುವುದರಿಂದ ಕೆಡಕು ತಪ್ಪದಂದು ತಿಳಿದು ಬಹು ಕಷ್ಟದಿಂದ ತಾಳ್ಮೆಯನ್ನು ವಹಿಸಿ ಮೆಲ್ಲಮೆಲ್ಲನೆ ಕೇಳಿದಳು:- C ರಾಜಶೇಖರ ! ಇದೇನು, ಇಂತಹ ವೇಳೆಯಲ್ಲಿ ಇಲ್ಲಿ ಗೆಬಂದೆ ? ರಾಜಶೇಖರ:- ಕೆಲಸವಿರುವುದರಿಂದಲೇ ಬಂದೆನು. ನಭಾ:- ಇಂತಹ ರಾತ್ರಿಯಾದರೂ ಇಲ್ಲಿಗೆ ಬಂದು ನನ್ನನ್ನು ಎಚ್ಚರಿಸಿ, ಮಾಡಿಕೊಂಡುಹೋಗಬೇಕಾದಷ್ಟು ಬಲವತ್ತರ ಕಾರ್ಯವಾ ಇದು ? ರಾಜಶೇಖರ:- ಇದೆ. ನಭಾ:- (ಅಸಮಾಧಾನದಿಂದ ) ಎಂತಹ ಕೆಲಸವಿದ್ದರೂ ಬೆಳಿಗ್ಗೆ ಬರಬಹುದಾಗಿತ್ತು, ರಾತ್ರಿಯ ವೇಳೆಯಲ್ಲಿ ಇಲ್ಲಿಗೆ ಬರಲಾಗದು. ರಾಜ:- ಏಕೆ? ಬಂದರೇನು ? ನಭಾ:- ಬಂದರೆ, ನನ್ನ ನಿನ್ನ ವಿಷಯದಲ್ಲಿ ಜನರಿಗೆ ಅತೃಪ್ತಿಯಾ ಗವಡು.