ಪುಟ:ನಭಾ.djvu/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಭಾ 85 ರಾಜ:- ಅಷ್ಟರಿಂದಲೇ ಕುಂದೇನು ? ನಭಾ:-ರಾಜಶೇಖರ! ಶೀಲ, ಧರ್ಮ, ಕೀರ್ತಿಗಳಿಗೆ ಕಲಂಕವನ್ನು ತಂದುಕೊಳ್ಳಲಾರೆನು, ನನ್ನಂತಹರಿಗೆ ನಿನ್ನೀ ಅಕ್ರಮವು ರುಚಿಸಲಾರದು. ಅಪವಾದವು ಆತ್ಮಸಂತೋಷ ಕ್ಕೂ ಕೀರ್ತಿಚಂದ್ರಿಕಾ ಪ್ರಸಾರಕ್ಕೂ ಆತಂಕ ವನ್ನು ೦ಟುಮಾಡುವುದು. ರಾಜ:- ಎಷ್ಟೇಪವಿತ್ರರಾಗಿದ್ದರೂ ಜನರಾಡಿಕೊಳ್ಳುವುದು ಸ್ವಭಾವ. ನಭಾ:- ನಿಂದಿಸುವರೆಂದು ಕರ್ತವ್ಯವಿಮುಖರಾಗಬಹುದೇನು ? * ರಾಜ:- ವ್ಯಥಾ ನಿಂದೆಗೆ ಗುರಿಯಾಗುವುದಕ್ಕಿಂತ ವಿಷಯ ಸುಖ ಪ್ರಾಪ್ತಿಯಿಂದ ಇಂದ್ರಿಯತೃಪ್ತಿಯನ್ನು ಹೊಂದಿ, ನಿಂದೆಯನ್ನು ಸಹಿಸು ವದು ಮೇಲಲ್ಲವೆ ? ವೃಥಾ ನಿಷ್ಟುರವನ್ನಾ ದರೂ ಕೇಳುವುದೇಕೆ ? ನಭಾ:- ( ತಿರಸ್ಕಾರದಿಂದ ) ಭಲೆ ! ರಾಜಶೇಖರ ! ಇದೀಗ ನಿಜತತ್ವಬೋಧೆ!! ಹೀಗೆ ಮಾಡುವುದರಿಂದ ಮನಸ್ಸಿಗೆ ದ್ರೋಹಿಯಾಗು ವೆನೆಂದೇಕೆ ತಿಳಿಯಲಿಲ್ಲ? ( ಉಪ್ಪು ತಿಂದಷ್ಟೂ ನೀರಡಿಕೆ ಹೆಚ್ಚು, ” ಎಂಬ ಗಾಧೆಯನ್ನೇಕೆ ಸ್ಮರಿಸಲೊಲ್ಲೆ ? ರಾಜ:-ನಭಾ ! ಹಾಗಲ್ಲ.. ಭಗವಂತನು ಇಂದ್ರಿಯಗಳನ್ನು ಸೃಷ್ಟಿ ಸಿದುದರ ಉದ್ದೇಶವಾದರೂ ಏನು? ಇಚ್ಚಿತವಸ್ತು ಸೇವನೆಯಿಂದ ಇಂದಿ, ಯಗಳನ್ನು ಕಾಲಕಾಲದಲ್ಲಿ ಸಂತವಿಸದೆ ಹೋದರೆ, ಅವುಗಳಿದ್ದೂ ಫಲ ವೇನು ? ನಭಾ:- ಸಾಕು, ಸಾಕು; ಸಾರ್ಥಕವಾಯ್ತು ! ರಾಜಶೇಖರ ! ಕರಣಕಳೇಬರಾದಿಗಳ ಸಾರ್ಥಕ್ಯತೆಗೆ ನಿಯಮಿತ ಕರ್ತ ವ್ಯವೇ ಪ್ರತ್ಯೇ ಕವಾಗಿರುವುದೆಂದು ನಾನು ಭಾವಿಸುವೆನು. ಇನ್ನು ನನ್ನಲ್ಲಿ ಇಂತಹ ಪ್ರಸಂಗವನ್ನು ನಿಲ್ಲಿಸಿ, ಹೊರಟುಹೋಗು ! * ರಾಜ:- ಅದೇನು? ನೀನು ಸ್ತ್ರೀಸಾಮಾನ್ಯರಲ್ಲಿ ಸೇರಿದವಳಲ್ಲವೊ? ನಿನಗೇನಾದರೂ ಕೊಡುಗಳಿವೆಯೋ? ನಭಾ:- • ಕರ್ತವ್ಯನಿಷ್ಠೆ, ಪವಿತ್ರ ಪ್ರೇಮಪರಾಕಾಷ್ಠ ” ಎಂಬಿವು ಗಳು ಪ್ರತಿಯೊಬ್ಬರಿಗೂ ಇರಬೇಕಾದ ಕೋಡುಗಳಾಗಿವೆ, ಅವನ್ನು