ಪುಟ:ನಭಾ.djvu/೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

86 ಸತೀಹಿತೈರ್ಷಿಣಿ ಇಟ್ಟುಕೊಂಡಿರುವವರು ಇಂತಹ ಅತ್ಯಾಚಾರವನ್ನು ಸಹಿಸಿಕೊಂಡಿರಲಾ ರರು. ರಾಜ:-ನಭಾ ! ನಿನ್ನ ಹಠವನ್ನು ಬಿಡು, ನೀನಿನ್ನೂ ಕೋಮಲ ಬಾಲೆ; ನಿನ್ನ ಈ ರೂಪ, ಯೌವನ, ಲಾವಣ್ಯ, ವಿದ್ಯಾದಿಗಳನ್ನು ವ್ಯರ್ಥ ವಾಗಿ ಕಳೆದುಕೊಳ್ಳಬೇಡ, ನಟ್ಟಡವಿಯ ಚಂದ್ರಿಕೆಯಂತೇಕೆ, ಇವೆಲ್ಲ ನನ್ನೂ ಕೆಡಿಸಿಕೊಳ್ಳುವೆ ! ನಭಾ:-ಕೆಡಿಸಿಕೊಂಡಿಲ್ಲ. ಸಾರ್ಥಕವಾಗುವಂತೆ ನನ್ನ ರೂಪಾದಿ ಗಳ ವಿನಿಯೋಗವು ಅನ್ಯ ಮಾರ್ಗದಲ್ಲಿದೆ. ರಾಜ:-ಸರಿಯಾಗಿ ಹೇಳು. ನನಗೇನು ಉತ್ತರವನ್ನು ಕೊಡುವೆ? ನಭಾ:-ಉತ್ತರವೇನು? ಇಷ್ಟೆ, ನನ್ನ ವಯೋ, ರೂಪ, ವಿದ್ಯಾದಿ ಗಳಲ್ಲವನ್ನೂ ಪುರುಷಶ್ರೇಷ್ಟನೊಬ್ಬನಲ್ಲಿ ಅರ್ಪಿಸಿರುವೆನು, ಅವುಗಳ ಮೇಲಿನ ಅಧಿಕಾರವು ಮತ್ತಾರಿಗೂ ಪ್ರಾಪ್ತವಾಗಲಾರದು. ರಾಜ:- ಆತುರದಿಂದ- 11 ಆದಾರಿಗೆ” ? ನಭೆ:- ಅಗ್ನಿ ಸಾಕ್ಷಿಯಾಗಿ, ಧಾರಾವಿಧಿಯಿ೦ದ ಪಾಣಿಗ್ರಹಣ ಮಾಡಿದ ನನ್ನ ಪತಿಗೆ, ರಾಜ: – ಹೇಗೆ ? ಅವನೆಲ್ಲಿ ರುವನು ? ನಭಾ:- ಹೇಗೆಂದರೆ, ಆತ್ಮಯಜ್ಞರೂ ಪದಿಂದ, ಎಲ್ಲಿರುವನೆಂದರೆ, ನನ್ನಲ್ಲಿಯೇ-ತೇಜೋರೂಪದಿಂದಿರುವನು. ರಾಜಶೇಖರನು ದುಃಖಾತಿರೇಕದಿಂದ ಅಧೀರನಾದನು, ಗದ್ದದ ಕಂಠನಾಗಿ ಮತ್ತೆ ಪ್ರಾರ್ಥಿಸಿದನು:- ನಭಾ ! ಇಷ್ಟು ದಿನಗಳ ಮೇಲೆ ಇಂದು ಹೀಗೆ ತಿರಸ್ಕೃತನಾಗುವೆನೆಂದು ಭಾವಿಸಿರಲಿಲ್ಲ. ನಾನು ಖಂಡಿತ ವಾಗಿಯೂ ಸಾಯುವೆನು, ಸಾಯಲೆ ?” ರಾಜಶೇಖರನಿಂದ ಮುಂದೆ ಮಾತನಾಡಲಾಗಲಿಲ್ಲ. ಕಂಠವು ಕಟ್ಟಿತು, ಕಣ್ಣುಗಳಲ್ಲಿ ನೀರು ತುಂಬಿತು. ದೈನ್ಯ ದೃಷ್ಟಿಯಿಂದ ಅವಳನ್ನೇ ನೋಡುತ್ತ ನಿಂತನು. ನಭೆಯು ಧೈರ್ಯದಿಂದಲೂ ದರ್ಪಿತ ಸ್ವರದಿಂದಲೂ ಹೇಳತೊಡ ಗಿದಳು:-* ರಾಜಶೇಖರ ! ಈ ತೆರವಾದ ಕಾತರವು ಪುರುಷಧರ್ಮಕ