L [ ಸಂಧಿ ಕರ್ಣಾಟಕ ಕಾವ್ಯಕಲಾನಿಧಿ. ಬಂದ ಮುನಿಗವನಿತಚರಣ | ದ್ವಂದದಲಿ ಚಾಚಿದನು ಮಕುಟವ || ನಂದು ಪಿಡಿದೆತ್ತಿದನು ನಸುನಗುತಲ್ಲಿ ಕುಳ್ಳಿರ್ದು | ಎಂದನೆಲೆ ನಳನ್ನಸತಿ ನಿನಗೆ ಮು | ಕುಂದನೊಲವು ಸದಾವಕಾಲದಿ | ಸಂದಿರಲು ಯಿನ್ನಾವುದರಿದಿಲ್ಲೆಂದನಾಮುನಿಸ ! ಕಲಿಪುರುಷನಿಂದಾದುದುಪಹತಿ | ಲಲನೆಪುತ್ರರನಗಲಿ ಕಷ್ಟವ | ಬಳಸಿದೆಯಲಾನೊಂದು ಸತ್ಯವ ಬಿಡದೆ ಸಂಚರಿಸಿ | ಸುಲಭನಾದೆ ಕುಲಾಂಗನೆಯ ವ್ರತ | ಫಲದ ಪುಣದಯದಿ ನಿಜಸಿರಿ | ಫಲಿಸಿತಿಲೋಕದಲಿ ನಿನಗಾರು ಸರಿಯೆಂದ || ಹರಿಯ ನೆಲೆಗೆಡಿಸಿದನು ಪರಮೇ || ಶರನ ಭಿಕ್ಷವನೆತ್ತಿಸಿದ ಸರ | ನಿರುಹನವನನ ಶಿರವ ಪೊಗಾಡಿದನು ಪೂರದಲಿ || ಕರುಣಹೀನನು ನಿನ್ನ ಸೋಕಲು | ತೆಹನ ಕಾಣದೆ ಹಲವುದಿನ ಕಾ | ತರಿಸಿ ಛಲದಲಿ ತೊಡಚಿ ಬಿಟ್ಟನು ಮನದ ಭೀತಿಯಲಿ || ಎಲ್ಲ ನೃಪರಂತಲ್ಲಿ ಲಕ್ಷ್ಮಿ | ವಲ್ಲಭನ ಪ್ರತಿಬಿಂಬ ನಿನ್ನಲಿ | ನಿಲ್ಲ ಬಲ್ಲನೆ ಕಲಿಪುರುಷನತಿಬೇಗ ತೆರಳಿದನು ! ಸಲ್ಲಲಿತ ಸಾಮ್ರಾಜ್ಯ ಪದವಿಂ | ದೆಲ್ಲ ನಿನಗಹುದೆಂದು ಧರಣಿ | ವಲ್ಲಭನ ಸತ್ಕರಿಸಿ ಕೊಂಡಾಡಿದನು ಮೈತ್ರೀಯ | ಎಂದು ಹರಸಿದನವನಿಸಗೆ ಮುದ | ದಿಂದ ಮಂತ್ರಾಕ್ಷತೆಗಳಲಿ ಮುನಿ | ವೃಂದ ಸಂತೋಷಿಸಿತು ನೃಪನಿಂಹಾಸನದೊಳಿರಲು | L ಧಿಂ | ೧೦
ಪುಟ:ನಳ ಚರಿತೆ.djvu/೧೦೪
ಗೋಚರ