ತಿ” ನಳಚರಿತ್ರೆ' hok ಮರುಳುತನ ಬೇಡಿನ್ನು ನೃಪನನು | ಕರೆಸಿ ಸಂಧಿಯಮಾಡಿ ಜೂಜಿನ | ಪರಮಪಂಥದಿ ಗೆಲುವುದುಚಿತವಿಗೆಂದನಾಮಂತ್ರಿ | - ವೀರಸೇನನ ತನಯ ನಿಷಧನ | ಸೌರಿಹಳು ಜಯಲಕ್ಷ್ಮಿ ಸೇನಾ ! ಭಾರದಲಿ ಮತುಪರ್ಣಚೈವ ವಿದರ್ಭ ಮೊದಲಾದ || ಭೂರಿನ್ನ ಸರೋಲೈಸುತಿರೆ ಸರಿ | ಯಾರು ಸಂಗ್ರಾಮದಲಿ ನಳನಲಿ | ವಿರಾಜ' ಕೈಮಾಡಿದರೆ ತಪ್ಪದು ಮರಣ ನಿನಗೆಂದ | ರ್೩ - ಎನಲು ಕೆಳಮಾತಿನಲಿ ಬಂ ! ದನು ನಳನ ಕಂಡನು ಮಹೀಪತಿ ಯೆನಗೆ ನಿಮ್ಮ ಕವನವೇತಕೆ ಸಾಕದಂತಿರಲಿ | ಜನಪತಿಗಳಿ೦ಕ್ಷಿಸಲಿ ಮನುಜ | ಜಿನಲಿ ನಿಪುಣರು ನಾವು ನಿಮ್ಮಲಿ || ಮನಕೆ ಹರುಷಿತವಾಗಲಾಡುವೆನೆಂದ ನಸುನಗುತ || ಎಲವೊ ಕೇಳಿನ್ನಾದುದಾಗಲಿ | ಕಲಹಕಂಜುವೆ ನೀನು ಜೂಜಿನ | ಬಳಕೆಯಲಿ ಬಲ್ಲಿದನು ನಮ್ಮನು ಕರೆದೆ ತಪ್ಪೇನು !! ಕಲಹವಾಗಲಿ ಜಜದಾಗಲಿ | ಗೆಲುವೆ ನಿನ್ನನು ಕುಟಿಲಪ್ಪದಯದ || ನೆಲೆಯ ಬಲ್ಲೆನು ನಿನಗೆ ಮನವೊಲಿದುದನು ಮಾಡೆಂದ ! ೪೧ ಅರಸ ಕೇಳಾಪುಷ್ಕರನು ತ | « ರಮನೆಗೆ ಕರೆತಂದನಾಕ | ಪುರುಷನಿಂದಲಿ ಮುನ್ನ ಗೆಲಿದಗ್ಗಳಿಕೆಯಲಿ ನೃಪನ | ಪಿರಿದು ತಾ ಗೆಲಬಲ್ಲೆನೆಂದಾ | ಸರನು ಕರೆಸಿದನೋಲಗದಿ ಕು | ೪ರಲು ತಂದರು ಸಾರಿಗಳ ನಿಲಿಸಿದರು ಸಮ್ಮುಖದಿ | ೪೦ ೬೧
ಪುಟ:ನಳ ಚರಿತೆ.djvu/೧೧೧
ಗೋಚರ