Ow ಕರ್ಣಾಟಕ ಕಾವ್ಯಕಲಾನಿಧಿ. [ ಸಂಧಿ ಹೈ ಹಸಾದವೆನುತ ವಂದಿಸಿ | ಬಾಹುಕನು ಮಂದಿರಕೆ ಬಂದು ವಿ | ವಾಹವುಂಟೇ ಮರಳಿ ದಮಯಂತಿಗೆ ಜಗನ್ನಾಥ || ಈ ಹದನವಾರಿಂದಲಾದುದೊ || ದೊಹಿ ದಮಯಂತಿಯಳೆ ಇದು ಸಂ | ದೇಹವಾಗಿದೆಯೆನುತ ಚಿಂತಿಸಿ ಒಂದನರಮನೆಗೆ || ಲಾಯದೊಳಗುತ ಮದ ತೇಜಿಯ | ನಾಲ್ಕು ಹೂಡಿದ ರಥಕೆ ಸೇರಿಸಿ | ವಾಯುವೇಗದ ತೇರ ನಿಲಿಸಿದ ತಂದು ನೃಪನೆಡೆಗೆ | ರಾಯನೇಕಲು ಕರಿತುರಗರಥ ! ಪಾಯದಳ ಸಂದಣಿಸಿದುದು ನೆಲ | ಬಾಯ ಬಿಡೆ ಹೊವಂಟ ನೃಪ ಘನವಾದ್ಯ ರಭಸದಲಿ | ರ್೨ ಜನಸನೆಂದನು ಬಾಹುಕಗೆ ಮಾ | ಸಿನಿಯ ನಿಕ್ಷಿಸಬೇಕು ನಿಲ್ಲದು | ಮನವಿಯೊಂದೇ ದಿನಕೆ ನಡೆಸು ವಿದರ್ಭ ಪ್ರರವರಕೆ || ಎನಲು ನಕ್ಕನು ಮನದೊಳಗೆ ತ . ೩ನಿಯಳಿಗೆ ವಿಧಿ ಬರೆದನೇ ಶಾ | ಸನವ ಊಾಲುವರಾರೆನುತ ಮಲುಗಿದನು ನಳನೃಪತಿ | ೩೦ ಕರದ ವಾಸ್ತು ಸಡಿಲ ಬಿಡೆ ಮುಂ | ಬರಿದು ಚಿಮ್ಮಿ ದುವಡಿಗಡಿಗೆ ರಥ | ತುರಗ ಹಾಯ್ಕುದು ತೇರು ಮುಂದಕೆ ಪವನವೇಗದಲಿ || ಭರದೊಳ್ಳಿತರೆ ನೃಪನ ಹಚ್ಚ ಡ | ಧರೆಗೆ ಬೀಳಲು ಸಾರಥಿಗೆ ಯೆ ! ಚ'ಸಿದನು ಋತುಪರ್ಣನಿದಕಿನ್ನೇನು ಹದನೆನುತ || ೩೧ ಜೀಯ ಚಿತ್ತೈಸುರವಣಿಸಿ ನಿ | ರ್ದಾಯದಲಿ ಹಿಂದುಳಿದುದಂಬರ | ವಾಯುಗತಿಯಲ್ಲಿ ದಾಟಿ ಬಂದೆವು ಹಲವು ಯೋಜನವ | ಒ
ಪುಟ:ನಳ ಚರಿತೆ.djvu/೯೪
ಗೋಚರ