ಪುಟ:ನಾಸ್ತಿಕ ಕೊಟ್ಟ ದೇವರು.pdf/೧೨೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೧೧೮

ಕಥೆ : ಒ೦ಭತ್ತು
ಆ ಕಾಳ ರಾತ್ರಿ



ನಂತಯ್ಯ, ರುಕ್ಮಿಣಮ್ಮ, ಕಮಲ, ನಾಣಿ ಮತ್ತು ಬಾಲೂ ಈ ಐವರ ಕುಟು೦ಬದ ಕತೆ ಇದು. ಮೊದಲು ನಾಲ್ವರು ಕತೆಯ ಹೆಚ್ಚಿನಂಶ ಹೇಳಿದ್ದಾರೆ. ಡಾಕ್ಟರ್ ಮಾಧವರಾವ್ ಆ ಕಾಳರಾತ್ರಿಯ ಬಗೆಗೆ ಹೇಳಿದ್ದಾರೆ . ಕೊನೆಯ ಮಾತು ನನ್ನದು.

ಅನoತಯ್ಯ

ಬನ್ನಿ, ಸಮೀಪ ಬನ್ನಿ . . . ರುಕ್ಕೂ, ರಾಯರಿಗೆ ಒಂದಿಷ್ಟು ಕಾಫಿ . . . ಯಾಕೆ ಬೇಡ? ಯಾವಾಗಲೂ ಹಾಗೇನೇ ನೀವು . . . ಏನು? ಕಿಟಿಕಿ ಕೊಂಚ ತೆರೆಯೋಣ ಎಂದಿರಾ ? ಕಮ್ಲೂ ಕೊಂಚ ತೆರೆಯಮ್ಮಾ.
ಎನೀಮಿಯಾ ರಾಯರೇ...ಮೂವತ್ತೈದನೆ ವಯಸ್ಸಿನಿಂದ ಬೆಳೆಸ್ಕೊಂಡು ಬಂದಿದೇನೆ... ನಿಧಾನವಾಗಿ, ಕ್ರಮ ಪ್ರಕಾರ... ಈ ಹತ್ತು ವರ್ಷ ಕಾಲ. ಈ ರೆಕಾರ್ಡ್ ಕೀಪರ ಜೀವನ... ಎಷ್ಟು ಸಹಸ್ರ ಕುಟುಂಬಗಳ ಎಷ್ಟು ಸಹಸ್ರ ರೆಕಾರ್ಡ್ಗಳು... ಎಷ್ಟು ಮನೆಮುರಿದು ಹೋದುದನ್ನು ಈ ಕಣ್ಣಲ್ಲೇ ಕಂಡೆನೋ! ಆತ್ಮಹತ್ಯೆ ಮಾಡಿಕೊಂಡಿರುವವರು ಎಷ್ಟು ಜನವೋ...
ಬಾಲೂ ಹುಟ್ಟಿದಾಗ ನನಗೆ, ಇಪ್ಪತ್ತೈದು-ರುಕ್ಕೂಗೆ ಹದಿನೆಂಟು . . . ಈಗ ನಮ್ಮ ಕಮ್ಲೂ ಇಲ್ವೇ . . . ಹಾಗೇನೆ ಅಷ್ಟೇ ಎತ್ತರ, ಅಷ್ಟೇ ಪ್ರಾಯ, ತದ್ರೂಪ . . . ಆ೦ ! ಆಯಾಸಾನಪ್ಪಾ . . . ಎಲ್ಲಿ, ಒಂದು ಚಮಚ ಬಾರ್ಲಿ ನೀರು . . .
ಸುಮ್ಮನಿರಿ ಅ೦ತೀರಾ? ಹೋಗಿ ಇವರೆ. ಎಷ್ಟೋ ದಿನ ಆದ್ಮೇಲೆ ಬಂದಿದೀರಾ. ಮಾತಾಡದೆ ಇರಲೆ? ಇಪ್ಪತ್ತೆರಡನೇ ದಿನ ಈ ಹೊತ್ತು. ನೆನ್ನೆ ತಾನೇ ಮುಖಕ್ಷೌರ ಮಾಡಿಸ್ಕೊಂಡೆ... ಸುಸ್ತಾಗಿದ್ದ ಜೀವ