ಪುಟ:ನಾಸ್ತಿಕ ಕೊಟ್ಟ ದೇವರು.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ



೭೩

ಕಥೆ: ಆರು
ಯಾವ ಜನ್ಮದ ಶಾಪ?



“ಏಳೀಂದ್ರೆ..."
" ಊ...."
"ಕಾಫಿ ಆರೋಯ್ತು...."
"ಆ೦?"
-ಎಂಟೂಕಾಲು ಘ೦ಟೆಗೆ ನಾವು ಮತ್ತು ನಮ್ಮವರು, ಶ್ರೋತೃಗಳ ಪತ್ರಗಳಿಗೆ ನಮ್ಮ ಉತ್ತರ; ಎಂಟೂವರೆ ಘಂಟೆಗೆ ದೆಹಲಿ ಕೇಂದ್ರದಿಂದ ಪುನಃ ಪ್ರಸಾರ; ಎಂಟೂ ಐವತ್ತೈದಕ್ಕೆ To-day in Parliament ... ಪಾರ್ಲಿಮೆಂಟಿನ ...
ಏಳು ಘಂಟೆ ಆಗಿಹೋಯಿತು ಹಾಗಾದರೆ. ಬೆಳಕು ಹರಿಯುವುದಕ್ಕೆ ಮುನ್ನವೇ, ಮೂವತ್ತು ವರ್ಷಗಳ ಕಾಲ ಪ್ರತಿದಿನವೂ ಏಳುತ್ತಲಿದ್ದ ಮನುಷ್ಯ ತಾನು. ಈಗ ಈ ಆರೆಂಟು ದಿನಗಳಿ೦ದ ಹೀಗೆ... ಅల్ల,- ಎದ್ದು ತಾನು ಮಾಡಬೇಕಾದುದಾದರೂ ಏನು? ತಡವಾಯಿತು ಅಂತ ಚಡಪಡಿಸುತ್ತ, ಹೊಗೆ ತುಂಬಿದ ಸ್ನಾನದ ಮನೆಯಲ್ಲಿ ಮೈಗೆ ತಣ್ಣೀರು ಸುರಿದುಕೊಳ್ಳಬೇಕೆ? ಹೆಂಡತಿಯ ಮೇಲೆ ರೇಗಾಡಿ ಚೀರಾಡಿ, ಆವಿ ಏಳುವ ಬಿಸಿ ಅನ್ನ ಗಂಟಲಿನೊಳಕ್ಕೆ ತುರುಕಬೇಕೆ? ಸೈಕಲು ಹತ್ತಿ ತುಳಿದು ತುಳಿದು, ಬೆವರು ಸುರಿಸಿಕೊಂಡು ಅಠಾರಾ ಕಚೇರಿ ತಲುಪಿ, ಅಲ್ಲಿ ಏದುಸಿರು ಬಿಡಬೇಕೆ? ಯಾವುದೂ ಇಲ್ಲ. ಅಂದಮೇಲೆ, ಏಳಲು ಅವಸರವಾದರೂ ಯಾಕೆ? ಕತ್ತಿನವರೆಗೂ ಕಂಬಳಿ ಹೊದೆದು, ನೀಳವಾಗಿ ಮೈಚಾಚಿ ಮಲಗಿರುವುದೇ ಹಿತಕರ . . .
ತಾರಸಿ ಛಾವಣಿಯಿಂದ ಕೆಳಮೊಗವಾಗಿದ್ದ ತೊಟ್ಟಿಲು ತೂಗುವ ಕೊಂಡಿಗಳು, ಮಲಗಿದ್ದ ವಿಶ್ವನಾಥಯ್ಯನವರನ್ನೇ ದಿಟ್ಟಿಸಿದುವು. ಬರಿದು