ಪುಟ:ನಿರ್ಮಲೆ.djvu/೧೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ರಾ ಮ ನಿಮ ೯ ಲೆ ಮೊದಲನೆಯ ಅಂಕ [ಹಳ್ಳಿಗಾಡಿನ ಪೂರ್ವಕಾಲದ ಮನೆಯಲ್ಲಿ ಒಂದುಕೋಣೆ, ಚಂಡಿಯು ದೇವದತ್ತಿನೆಡನೆ ಪ್ರವೇಶಿಸು Jಳು] ಚ೦ಡಿ:--.ಪ್ರಿಯ ! ನಿಮ್ಮವಿಚಿತ್ರವನ್ನು ಏನೆಂದು ಹೇಳಲಿ ? ಎಲ್ಲ ರಿಗೂ ಒಂದುದಾರಿಯಾದರೆ ನಿಮಗೇ ಬೇರೊಂದು ಪದೇಪದೇ ದೊಡ್ಡ ಪಟ್ಟ ಣಕ್ಕೆ ಹೋಗಿ, ಅಲ್ಲಿನ ಚಿತ್ರಗಳನ್ನು ನೋಡಿ ಬೇಸರವನ್ನು ಕಳೆದುಕೊಳ್ಳದೆ ಇರುವವರು ನಮ್ಮಂತೆ ಮತ್ತಾರಾದರೂ ಈ ಸುತ್ತಿನಲ್ಲಿ ಇರುವರೆ? ನೋಡಿರಿ! ವಿಚಿತ್ರವದನೆಯ ವಕಾ೦ಗಿಯೂ ಮಕ್ಕಳುಮರಿಗಳೊಡನೆ ಪ್ರತಿ ವರ್ಷವೂ ಒಂದು ತಿಂಗಳಾದರೂ ಪಟ್ಟಣದಲ್ಲಿದ್ದು ಬರುವರಲ್ಲವೆ? ದೇವ: ಅಹುದು, ಅವರು ಅಲ್ಲಿಂದ ಒಂದುವರ್ಷಕ್ಕೆ ಸಾಕಾಗು ವಷ್ಟು ದುರಹಂಕಾರ, ಆಡಂಬರಗಳನ್ನು ಸಂಪಾದಿಸಿಕೊಂಡು ಬರುತ್ತಾರೆ. ಪಟ್ಟಣವಾಸಿಗಳಾದ ಹೆಡ್ಡರು ಅಲ್ಲೇ ಇರಬಾರದೆ? ನಮ್ಮ ಕಾಲದಲ್ಲಿ, ಪಟ್ಟಣ ವಾಸಿಗಳ ಹುಚ್ಚಾಟವೂ, ತಿವಾದ ನಡೆನುಡಿಗಳೂ ಬಹಳ ನಿಧಾನವಾಗಿ ಹಳ್ಳಿಗಾಡಿಗೆ ಬರುತ್ತಿದ್ದು ವು: ಈಗಲಾದರೋ, ಅವು ರೈಲಿಗಿಂತ ವೇಗವಾಗಿ ಎಲ್ಲೆಲ್ಲೂ ವ್ಯಾಪಿಸುತ್ತಲಿವೆ.