ಪುಟ:ನಿರ್ಮಲೆ.djvu/೧೦೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ಕಮ:-ಇಗೋ, ಒಂದೆನು, ಬಂದೆನು. ರಾಮ:-(ಪ್ರಿಯಸೇನನನ್ನು ನೋಡಿ) ಪ್ರಿಯ, ನನ್ನ ನ್ನು ಪರಿಹಾಸ ಕೈ ಗುರಿಮಾಡಿದುದು ನ್ಯಾಯವೆ ? ನನ್ನನ್ನು ನೋಡಿ ಪ್ರತಿಯೊಬ್ಬರೂ ನಗು ವರು. ಪ್ರಿಯ:ರಾಮ, ನೀನೇ ಆಲೋಚಿಸಿನೋಡು, ಭದ್ರವಾಗಿಟ್ಟಿ ರಲು ನಿನ್ನ ವಶಕ್ಕೆ ಕೊಟ್ಟಿದ್ದ ವಸ್ತುವನ್ನು ಮತ್ತೊಬ್ಬರಿಗೆ ಒಪ್ಪಿಸ ಬಹುದೆ ? ನೀನು ಯಾವಾಗಲೂ ಹೀಗೆ. ಕಮ:-ರಾಮವರ್ಮ ಪ್ರಿಯಸೇನರೆ, ನಿಷ್ಕಾರಣವಾಗಿ ವ್ಯಾಜ್ಯ ವಾಡಿ ನನ್ನ ಸಂಕಟವನ್ನು ಹೆಚ್ಚಿಸುವಿರೇಕೆ ? ನಿಮ್ಮ ದಮ್ಮಯ್ಯ ! ಸುಮ್ಮ (ಮತ್ತೆ ಸೇವಕನು ಬರುವನು) - ಸೇವ: ತಾಯಿ, ಇಗೊ, ನಿಮ್ಮಶಾಲು, ಹೊರಡಿ, ಒಡತಿಯು ರೇಗುತ್ತಿರುವಳು. (ಹೊರಟುಹೋಗುವನು) ಕಮ:-ಬಂದೆನು, (ಪ್ರಿಯಸೇನ ರಾಮವರ್ಮರನ್ನು ನೋಡಿ) ನಿಮ್ಮನ್ನು ಹೀಗೆ ಬಿಟ್ಟು ಹೋದರೆ ಹೆದರಿಕೆಯಿಂದ ನನ್ನ ಪ್ರಾಣವೇ ಹೋಗು ವುದು. (ಪ್ರನಃ ಸೇವಕನು ಅವಸರದಿಂದ ಬರುವನು.) ಸೇವ: ಕಮಲಾವತಿ, ನಿಮ್ಮ ವಸ್ತ್ರ, ಕೃಪೆಟ್ಟಿಗೆ, ಸೀರೆಗಳೆಲ್ಲ ವನ್ನೂ ತೆಗೆದುಕೊಂಡಿರುವೆನು, ಕುದುರೆಗಳನ್ನು ಹಿಡಿದು ನಿಲ್ಲಿಸಲಾರೆವು. ಯಜಮಾನಿಯ ಕೋಪವು ಹೆಚ್ಚುತಲಿರುವುದು, ಹೊರಡಿ, ಹೊರಡಿ. ಕಮ:-ರಾಮವರ್ಮನೆ, ಮುಂದೆ ನನ್ನ ನ್ನು ಇದಿರ್ಗೊಳ್ಳಲು ಕಾದಿ ರುವ ನಿರ್ಬಂಧಗಳು ನಿನಗೆ ತಿಳಿದುಬಂದರೆ, ಈಗ ನನ್ನ ಮೇಲಿರುವ ಕೋ ಪವು ಶಾಂತವಾಗಿ ದಯೆಯು ಹುಟ್ಟುವುದರಲ್ಲಿ ಸಂಶಯವಿಲ್ಲ. ರಾಮ:-ನನ್ನ ಭಾಗಕ್ಕೆ ಈಗ ಬಂದೊದಗಿರುವ ನೂರೆಂಟು ದುರ ವಸ್ಥೆಗಳಿಂದ ನಾನು ಕೇವಲ ಹುಚ್ಚನಾಗಿರುವೆನು, ನಾನೇನು ಮಾಡಬೇ ಕೆಂಬುದು ನನಗೆ ನಿಜವಾಗಿಯೂ ತಿಳಿಯದು, ಕಮಲೆ, ಕ್ಷಮಿಸು. ಪ್ರಿಯ