ಪುಟ:ನಿರ್ಮಲೆ.djvu/೧೦೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೯೨ ನಿರ್ಮಲೆ ಸೇನನೆ, ನೀನು ದಯವಿಟ್ಟು ನನ್ನಿ ಸು. ನಾನು ಮುಂಗೋಪಿಯೆಂಬುದನ್ನು ನೀನು ಬಲ್ಲೆ. ನನ್ನನ್ನು ಈಗ ಸಿಬ್ಬೆಬ್ಬಿಸಬೇಡ. ಸೇವಕ:-ತಾಯಿ, ಹೊರಡಿ, ಹೊತ್ತಾಯಿತು, ಕಮ:-ಪ್ರಿಯನೆ, ನಾನು ಆಲೋಚಿಸಿರುವಂತೆ, ಇಲ್ಲ, ದೃಢ ವಾಗಿಯೂ ನಂಬಿರುವಂತೆ, ನಿನಗೆ ನನ್ನಲ್ಲಿ ಪ್ರೇಮಾಭಿಮಾನಗಳು ಇರುವು ದಾದರೆ, ಇನ್ನು ಮೂರುವರ್ಷಗಳ ಕಾಲ ಸ್ಥಿರಸಂಕಲ್ಪದಿಂದಿದ್ದರೆ, ಆಗ, ನಮ್ಮ ಸುಖವು ಕೈಸೇರುವುದು, ಮತ್ತು ಚಂಡಿ:-(ಒಳಗೆ, ಘಟ್ಟಿಯಾಗಿ ಕೂಗುವಳು) ಎಲೆ! ಕಮಲೇ!! ಎಲೇ ! ಕಮಲೇ!! ಎಲ್ಲಡಗಿರುವೆ, ಬೇಗ ಬಾ, ಹೊತ್ತಾಯಿತು. ಸೇವಕ:-ತಾಯಿ, ಹೊರಡಿ, ಹೊರಡಿ. ಕಮ: ಬಂದೆನು. ಪ್ರಿಯನೆ, ದೃಢಚಿತ್ತನಾಗಿರು. ಸ್ಥಿ ರಸಂ ಕಲ್ಪವನ್ನು ಮರೆಯದಿರು, (ಸೇವಕನೂ ಕಮಲಾವತಿಯೂ ಹೊರಡುವರು) ಪ್ರಿಯ: ದೇವರೇ, ಇದನ್ನು ಹೇಗೆ ಸಹಿಸಲಿ ? ಇನ್ನೆನು ಕಯ್ಕೆ ರಿತೆಂದು ನಂಬಿದ್ದ ಸೌಖ್ಯವು ದೂರ ಸಾಗಿತಲ್ಲಾ ? ಕೈಗೆ ಬಂದ ತುತ್ತು ಬಾಯಿಗೆ ಬಾರದೆ ಹೋಯಿತಲ್ಲಾ ! ಹಾ ! ಹಾ!! ರಾಮ:-ದುರ್ಮತಿ, ನೋಡಿದೆಯೋ ? ನಿನ್ನ ಚೇಷ್ಟೆಯಫಲ ? ನಿನಗೆ ಹಾಸ್ಯ, ನಮಗಾದರೆ, ಪ್ರಾಣಸಂಕಟ, ಅವರಿಗಾದರೂ ಆಶಾ ಭಂಗ, ಇಷ್ಟೇ ಅಲ್ಲ, ಇನ್ನೂ ವಿವಿಧ ಗೋಳು ! ದುರ್ಮ:--ಭಲಾ ಭಲಾ, ಅದೇ ಸೊಗಸಾದ ಉಪಾಯ, ಹೋ, ರಸವತ್ತಾದ ಉಪಾಯ. ಎಲಾ ಮಂಕರಾ, ಹಿಗ್ಗಿ ಹೋಗಿರಿ, ನಾನು ಹೇಳುವುದನ್ನು ಕೇಳಿ, ಯಾರಲ್ಲಿ ? ನನ್ನ ಪಾದರಕ್ಷೆಗಳನ್ನು ತೆಗೆದುಕೊಂಡು ಬನ್ನಿ, ಪ್ರಿಯಸೇನನೆ, ಇನ್ನೆರಡು ಘಂಟೆಗಳನ್ನು ಬಿಟ್ಟು ಕೊಂಡು ನೀನ್ನ ತೋಟದಬಳಿಗೆ ಬಂದಿರು, ನೀವು ದುರ್ಮತಿಯು ಕೆಟ್ಟವನೆಂದು ತಿಳಿದಿರ ಬಹುದು, ಆದರೆ ನಾನು ಅಂತಹನಲ್ಲ, ದುರ್ಮತಿಯು ಸಾಧುವೂ