ಪುಟ:ನಿರ್ಮಲೆ.djvu/೧೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೪೩ ನಿರ್ಮಲೆ ಯೋಗ್ಯನೂ ಎಂದು ನಿಮಗೆ ತಿಳಿದುಬರುವುದು ತಿಳಿದುಬಂದರೆ ಸರಿ ? ಇಲ್ಲವಾದರೆ ನನ್ನ ಕುದುರೆಗಳನ್ನೂ ಕಲಾಮಣಿಯನ್ನೂ ಎಲ್ಲ ವನ್ನೂ ಅಪ ಹರಿಸಿಕೊಂಡು ಹೋಗಿ, ಎಲ್ಲಿ ? ನನ್ನ ಪಾದರಕ್ಷೆಗಳನ್ನು ತೆಗೆದುಕೊಂಡು ಬನ್ನಿ, ಹೊತ್ತಾಯಿತು; ಹೊರಡುವೆನು, (ಎಲ್ಲರೂ ಹೊರಟುಹೋಗುವರು.) ಐದನೆಯ ಅ೦ ಕೆ. [ದೇವದತ್ತನ ಮನೆಯ ಪಡಸಾಲೆ, ಪ್ರಿಯಸೇನನೂ ಸೇವಕನೂ ಪ್ರವೇಶಿಸುವರು ) ಪ್ರಿಯಸೇನ:-ಆ ಮುದುಕಿಯ ಕಮಲಾವತಿಯ ಗಾಡಿಯಲ್ಲಿ ಕುಳಿತು ಪ್ರಯಾಣಮಾಡಿದುದನ್ನು ನೀನು ನೋಡಿದೆಯಾ ? ಸೇವಕ:-ಅಹುದು, ಮಹಾಸ್ವಾಮಿ, ಅವರಿಬ್ಬರೂ ಒಂದುಗಾಡಿ ಯಲ್ಲಿ ಕುಳಿತಿದ್ದರು, ನಮ್ಮ ದುರ್ಮತಿಯು ಒಂದು ಕುದುರೆಯಮೇಲೆ ಹತ್ತಿ ಅವರ ಸಂಗಡಲೇ ಪ್ರಯಾಣಮಾಡುತ್ತಿದ್ದನು. ಅವರು ಇಷ್ಟು ಹೊತ್ತಿಗೆ ಪ್ರಾಯಶಃ ಮೂವತ್ತು ಮೈಲಿ ಪ್ರಯಾಣ ಮಾಡಿರಬಹುದು, - ಪ್ರಿಯ:- ನನ್ನ ಆಶಯಲ್ಲ ವೂ ಕೊನೆಗಂಡಂತಾಯಿತು, ಮತ್ತೇನು ? ಸೇವ:-ವಿಜಯಪಾಲರು ಬಂದಿರುವರು. ರಾಮವರ್ಮನ ಭ್ರಮೆ ಯನ್ನು ತಿಳಿದು ದೇವದತ್ತ ಮತ್ತು ವಿಜಯಪಾಲರಿಬ್ಬರೂ ಒಂದು ಘಂಟೆಯಿಂದಲೂ ನಗುತ್ತಿರುವರು. ಅವರೂ ಇತ್ತ ಬರುತ್ತಿರುವರು, ಪ್ರಿಯ:-ನಾನು ಅವರ ಕಣ್ಣಿಗೆ ಕಾಣಿಸಿಕೊಳ್ಳಬಾರದು, ದುರ್ಮ ತಿಯು ತೋಟದಬಳಿ ಬಂದಿರೆಂದು ಹೇಳಿರುವನು, ಅವನಮಾತಿನಲ್ಲಿ ನಂಬುಗೆ ಯಿಲ್ಲದಿದ್ದರೂ ದುರಾಶೆಯು ನನ್ನನ್ನು ಕಾಡುತ್ತಿರುವುದು, ನಾನು ಅಲ್ಲಿಗೆ