ಪುಟ:ನಿರ್ಮಲೆ.djvu/೧೦೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ F೪ ವಿಜ:-ಹುಡುಗಿಯರೂ, ಹುಡುಗರೂ, ಸ್ವಶಕ್ತಿಯನ್ನು ಹೊಗಳಿ ಕೊಳ್ಳುವುದು ವಾಡಿಕೆಯಲ್ಲವೆ ? ದೇವ:- ಅವಳ ಕಯ್ಯನ್ನು ಅವನು ಹಿಡಿದುಕೊಂಡಿದ್ದನ್ನು ನಾನೇ ನೋಡಿದೆನು. ಇನ್ನೇನು ಹೇಳಲಿ ? ಇದೋ, ರಾಮವರ್ಮನೇ ಬರುತ್ತಿರುವನು. ನಿನ್ನ : ರೆ' ಗಳೆಲ್ಲಾ ಇನ್ನು ಕೊನೆಗಾಣುವುವು. [ ರಾಮವರ್ಮನು ಬರುವನು] - ರಾಮ:- ನನ್ನ ವಿಚಿತ್ರವಾದ ಅವಿಧೇಯತೆಯ ನಡತೆಗಾಗಿ ಮತ್ತೆ ಮತ್ತೆ ನಿಮ್ಮನ್ನು ಕ್ಷಮೆ ಬೇಡುವೆನು, ನನ್ನ ವರ್ತನವನ್ನೂ ಅಹಂಕಾ ರವನ್ನೂ ನೆನೆಸಿಕೊಂಡರೆ ನನಗೇ ನಾಚಿಕೆಯಾಗಿದೆ. ದೇವ:- ಅದೇನು ಪ್ರಮಾದವಿಷಯ ? ಮರೆತುಬಿಡು. ಅದಕ್ಕೆ ಇಷ್ಟೊಂದು ಆಲೋಚನೆ ಮಾಡಲೇಕೆ? ನಿಮ್ಮಲೆಯೊಡನೆ ಒಂದು ಘಳಿಗೆ ನಗುತ ವಿನೋದವಾಗಿದ್ದರೆ, ಎಲ್ಲವೂ ಮರೆತುಹೋಗುವುದು, ನಿಮ್ಮಲೆಗೆ ನಿನ್ನ ಲ್ಲೂ, ನಿನಗೆ ನಿಮ್ಮಲೆಯಲ್ಲೂ ಮತ್ತಷ್ಟು ಪ್ರೇಮವು ಹೆಚ್ಚಲೂ ಮಾರ್ಗವಾಗುವುದು. ರಾಮ:-ಅವಳ ಮೆಚ್ಚಿಗೆಯೇ ನನಗೆ ಹೆಮ್ಮೆಯೆಂದು ತಿಳಿದೆನು. ದೇವ :- ಮೆಚ್ಚಿಗೆ' ! ಚಿಕಿ! ಅದು ಕೇವಲ ಸಣ್ಣ ಪದ. ನನ್ನ ಕಣ್ಣು ಗಳನ್ನು ನಾನು ಒಪ್ಪುವುದಾದರೆ, ನಿಮ್ಮಿಬ್ಬರ ಸಂಬಂಧವೂ ಮೆಚ್ಚಿಗೆ ಯನ್ನು ದಾಟಿ ಬಹುದೂರ ಹೋಗಿರುವುದೆನ್ನ ಬಹುದು, ನಾನು ಹೇಳುವುದು ತಿಳಿಯಿತಷ್ಟೆ ? ರಾಮ :-ಸತ್ಯವಾಗಿಯ ನನಗಂತಹ ಪುಣ್ಯವು ಪ್ರಾಪ್ತವಾಗಿಲ್ಲ. ದೇವ :-ಸಾಕು, ಸಾಕು, ನನಗೂ ಇಂತಹ ಆಟಗಳು ಬರುವುವು. ಯಾವುದಕ್ಕೆ ಏನು ಅರ್ಥವೆಂಬುದನ್ನೂ -ಅರ್ಥಮಾಡುವುದನ್ನೂ ನಾನು ಚನ್ನಾ ಗಿಬಲ್ಲೆನು, ನಿಮ್ಮಿಬ್ಬರ ನಡವಳಿಕೆಯನ್ನೂ ಚೆನ್ನಾಗಿ ನಾನೇ ನೋಡಿ ದೆನು ಇನ್ನೂ ನಿಜವಲ್ಲವೋ ?