ಪುಟ:ನಿರ್ಮಲೆ.djvu/೧೦೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


( ನಿರ್ಮಲೆ - ರಾಮ :- ನಮ್ಮಿಬ್ಬರ ನಡತೆಯಲ್ಲಿ ಏನೂ ವಿಶೇಷ ವಿಷಯವಿಲ್ಲ. ನಿಮ್ಮಲೆಯೊಡನೆ ನಾನು ಗಾಂಭೀರ ಮತ್ಯಾದೆಗಳಿ೦ದ ಮಾತನಾಡಿದೆನು. ನನ್ನ ದುಷ್ಟರ್ತನವನ್ನು ಮನೆಯವರಲ್ಲರಲ್ಲೂ ಒಂದೇ ರೀತಿಯಾಗಿ ಆಚರಿಸಿ ರುವೆನೆಂದು ತಿಳಿದಿರಬಹುದು, ಹಾಗೆ ಆಲೋಚಿಸಬಾರದು. ದೇವ :-ದುಷ್ಟರ್ತನವೆ! ನನ್ನ ಅಭಿಪ್ರಾಯವು ಆರೀತಿಯಾದುದಲ್ಲ. ದುಷ್ಟರ್ತನವಲ್ಲ. ಸರಸವಾಡುವುದು ಹುಡುಗಿಯರ ಸ್ವಭಾವವು, ನಿಲ್ಮಲೆಯು ನಿಜವಾಗಿಯೂ ನಿನ್ನ ಮೇಲೆ ಚಾಡಿಯನ್ನು ಹೇಳಿಲ್ಲ. ರಾಮ ;- ಅದಕ್ಕೆ ನಾನೂ ಅವಕಾಶವನ್ನು ಕೊಟ್ಟಿಲ್ಲ. ದೇವ :-ವಿನಯವು ಒಂದು ಸದ್ದು ಣವೇ ಸರಿ ! ಆದರೆ, ಈಗ ಇದು ಅತಿವಿನಯವಾಯಿತು. ಅತಿವಿನಯಂ .... ...... ನೀನು ಮರೆಮಾಚದೆ ಸತ್ಯವನ್ನೆ ಆಡಿದರೆ ನಿನ್ನ ೬೦ದೆಗೂ ನನಗೂ ಬಹಳ ಸಂತೋಷವಾಗು ವುದು, ರಾಮ :-ನನ್ನಾಣೆ ! ದೇವರಾಣೆಗೂ ನಾನು ಏನೂ, ....... ದೇವ :-ನಿರಲೆಗೆ ನಿನ್ನಲ್ಲಿ ಅಸಡ್ಡೆ ಯಿಲ್ಲ, ನೀನೂ ಅವಳನ್ನು ಮೆಚ್ಚು ವಿಯಷ್ಟೆ? ರಾಮ :-ಗ್ರಹಚಾರವೇಸರಿ, ದೇವರಾಣೆ, ನಾನು.......... ದೇವ :- ನಿಮ್ಮಿಬ್ಬರಿಗೂ ಈ ಕ್ಷಣವೇ ವಿವಾಹವು ನಡೆಯಬಾ ರದೇಕೆ ? ರಾಮ :-ನಾನು ಹೇಳುವುದನ್ನು ಕೇಳಬಾರದೇಕೆ? ದೇವ :-.ವಿಜಯಪಾಲನೆ, ನಿನಗೂ ಒಪ್ಪಿತವಷ್ಟೆ ? ನನಗೆ ಮಹದಾ ನಂದವುಂಟಾಗಿದೆ, ನಾವು ಇನ್ನು ತಡಮಾಡಬಾರದು. ಶುಭಸ್ಯ ಶೀಘ್ರ ....... ..'ಎಂದಿಲ್ಲ ವೆ? ರಾಮ: ನನ್ನ ಮಾತನ್ನು ಕೇಳುವುದೂ ಇಲ್ಲವೆ ? ಭಗವಂತನಾ ಣೆಗೂ ನಿಮ್ಮಲೆಯಮೇಲೆ ನನ್ನ ಪ್ರೇಮವಾಗಲಿ, ನನ್ನಲ್ಲಿ ಅವಳ ಪ್ರೀತಿಯಾಗಲಿ