ಪುಟ:ನಿರ್ಮಲೆ.djvu/೧೦೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೯೭ ನೆಲೆಸಿರುವುದೆಂಬುದಕ್ಕೆ ಯಾವ ಆಧಾರವೂ ಇಲ್ಲವಾಗಿದೆ. ನಾವಿಬ್ಬರೂ ಒಂದೇ ಒಂದುಬಾರಿ ಒಬ್ಬರನ್ನೊಬ್ಬರು ನೋಡಿದ್ದೆವು, ಆಗಣ ನಮ್ಮ ಸಂ. ಭಾಷಣೆಯು ಸ್ವಾರಸ್ಯವಿಲ್ಲದೆಯೂ ವಿನಯಪೂರ್ವಕವಾಗಿಯೂ ಲೋಕಮ ಕ್ಯಾದಾನುಸಾರವಾಗಿಯೇ ಇದ್ದು ದು, ಮತ್ತೇನು ವಿಶೇಷವೂ ನಡೆಯಲಿಲ್ಲ. ದೇವ:... (ಸ್ವಗತ) ಲೋಕಮರಾದಾನುಸಾರವಾದ ಇವನ ವಿನ ಯವನ್ನು ತಡೆಯಲಾಗುವುದಿಲ್ಲ. ಪಿಜ:-ನೀನು ಅವಳ ಕಯ್ದಿಡಿದು ನಿನ್ನೆ ವ್ಯಾಮೋಹವನ್ನು ಆವಾ ಗಲೂ ತೋರ್ಪಡಿಸಿಲ್ಲವೆ ? - ರಾಮ:. - ಸ್ವರ್ಗ ಸಾಕ್ಷಿಯಾಗಿಯೂ ಇಲ್ಲ, ನಿಮ್ಮಪ್ಪಣೆಯಮೇರೆ ಇಲ್ಲಿಗೆ ಬಂದೆನು, ಒಂದು ಬಾರಿ ಮಾತ್ರ ಆ ಕೆಯನ್ನು ಪ್ರೇಮವ್ಯಾಮೋಹಗ ಇಲ್ಲದೆಯೇ ನೋಡಿದನು, ಸ್ವಲ್ಪವೂ ವ್ಯಸನಪಡದೆ ಅವಳನ್ನು ಬಿಟ್ಟು ಬಂದೆನು, ನನ್ನ ವಿಧೇಯಕೆ ಯ ವಿಷಯದಲ್ಲಿ ಇದಕ್ಕಿಂತಲೂ ಹೆಚ್ಚಾದ ನಿದರ್ಶನಗಳನ್ನು ಕೋರುವುದಿಲ್ಲ ವೆಂದು ನಂಬಿರುವೆನು, ಇಷ್ಟು ಅವಮಾನ ವನ್ನು ಅನುಭವಿಸಿರುವ ಈ ಮನೆಯನ್ನು ಈಗಲಾದರೂ ಬಿಡಲು ನಿಮ್ಮ ಆಕ್ಷೇ ನಸೆಯೇನೂ ಇರಲಾರದೆಂದು ನಂಬಿರುವೆನು.(ಹೊರಡುವನು) ವಿಜ.. ಅವನ ಭಾವವನ್ನು ನೋಡಿದರೆ, ಸಂಗತಿಗಳೆಲ್ಲವೂ ಆಶ್ಚತ್ಯ ವಾಗಿ ಕಾಣುವುವು. ದೇವ-ಅವನ ಧೈಲ್ಯವನ್ನೂ ನಟನೆಯನ್ನೂ ನೋಡಿದರೆ ನನಗೂ ಆಶ್ಚರವಾಗುವುದು, ವಿಜ:- ಅವನು ಎಂದಿಗೂ ಸತ್ಯವಂತನು. ಅವನ ಪ್ರಮಾಣಿಕ ತೆಯ ವಿಷಯದಲ್ಲಿ ನಾನು ನನ್ನ ಪ್ರಾಣವನ್ನಾ ದರೂ ಪಣವಿಡುವೆನು. ದೇವ:-ನಿರಲೆಯು ಇತ್ತ ಬರುತ್ತಿರುವಳು, ಅವಳ ಪ್ರಮಾಣ ಕತೆಯ ವಿಷಯದಲ್ಲಿ ನನ್ನ ಪ್ರಾಣವನ್ನು ನಾನೂ ಧೈಲ್ಯವಾಗಿ ಪಣವಿಡು ವೆನು.