ಪುಟ:ನಿರ್ಮಲೆ.djvu/೧೦೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೯೮ 'ನಿರ್ಮಲೆ (ನಿಲ್ಮಲೆಯು ಬರುವಳು.) ದೇವ:-ನಿರಲಿ, ನನ್ನ ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನು ಕೊಡು, ಮುಚ್ಚುಮರೆಮಾಡಬೇಡ, ಸುಳ್ಳಾಡದಿರು, ರಾಮವರ್ಮನು ನಿನ್ನಲ್ಲಿ ವ್ಯಾಮೋಹವನ್ನೂ ಪ್ರೀತಿಯನ್ನೂ ಯಾವ ರೀತಿಯಲ್ಲಿಯಾದರೂ ಪ್ರಕಾಶ ಪಡಿಸಿರುವನೊ ? - ನಿರ:- ಈ ಪ್ರಶ್ನೆ ಗಳನ್ನು ಒಮ್ಮಿಂದೊಮ್ಮೆ ಕೇಳುವಿರಿ, ಅನಿರೀಕ್ಷ ಜೀಯವಾದ ಪ್ರಶ್ನೆಗೆ ಉತ್ತರವನ್ನು ಕೊಡುವುದು ಯಾರಿಗಾದರೂ ಕಷ್ಟವ ಲ್ಲವೆ ? ಸತ್ಯವನ್ನಾಡಬೇಕೆಂದು ಪ್ರಾರ್ಥಿಸುವಿರಾದುದರಿಂದ ರಾಮವರ್ಮರು ಪ್ರೀತಿಯನ್ನು ಪ್ರಕಾಶಪಡಿಸಿರುವರೆಂದು ಒಪ್ಪಿಕೊಳ್ಳುವೆನು. - ದೇವ:-(ವಿಜಯಪಾಲನನ್ನು ನೋಡಿ) ನೋಡಿದಿಯೋ ? ವಿಜಯ:-ಒಂದಾವರ್ತಿಗಿಂತಲೂ ಹೆಚ್ಚಾಗಿ ನಿಮ್ಮಿಬ್ಬರಿಗೂ ಭೇಟಿ ಯಾಗಿಲ್ಲವೊ ? ನಿರ:-ಅನೇಕಾವರ್ತಿ ಆಗಿದೆ. ದೇವ:- (ವಿಜಯಪಾಲನನ್ನು ಕುರಿತು) ಕೇಳಿದಿಯೋ ? ವಿಜ:-ರಾಮವರ್ಮನು ವ್ಯಾಮೋಹವನ್ನು ಹೊರಪಡಿಸಿರುವನೋ ? ಒಪ್ಪಿ ಕೊಂಡನೆಂಬುದನ್ನು ಸೂಚಿಸಿದನೋ ? ನಿಮ್ಮ:-..ಎಂದೆಂದಿಗೂ ಚ್ಯುತಿಯಿಲ್ಲದ ವ್ಯಾಮೋಹವನ್ನು ಹೊರಸ ಡಿಸಿರುವರು. ನಾನು ನಿಜವನ್ನೇ ಹೇಳುತಿರುವೆನು. ವಿಜ:-ಪ್ರಣಯದ ಸಂಭಾಷಣೆಯೇನಾದರೂ ನಡೆಯಿತೇ ? ನಿಮ್ಮ:-ವಿಶೇಷವಾಗಿಯೇ ನಡೆಯಿತು. ವಿಜ: -ಆಶ್ಚ ರ ವೇಸರಿ ! ಇದಷ್ಟನ್ನೂ ಲೋಕಮತ್ಯಾದಾನುಸಾರ ವಾಗಿಯೇ ಹೇಳಿಕೊಂಡನೋ ? ನಿರ:-ಆಹಾ ! ನಿಸ್ಸಂಶಯವಾಗಿಯೂ ಹಾಗೆಯೇ ಸರಿ. ದೇವ:- ಮಿತ್ರನೆ ! ನಿನಗೆ ಸಮಾಧಾನವಾಯಿತೆ ?