ಪುಟ:ನಿರ್ಮಲೆ.djvu/೧೦೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೪೯ ವಿಡಿ: ಮಾತನಾಡುವಾಗ ಅವನ ನಡತೆಯು ಹೇಗಿತ್ತು ? ನಿಮ್ಮ:-ಪ್ರಣಯಿಗಳಂತೆ, ನನ್ನ ರೂಪನ್ನು ಅವರು ಹೊಗಳಿದರು. ನಾನು ಸತ್ವಜ್ಞಳೆಂದೂ ತಾವು ಕೇವಲ ಅಲ್ಪಜ್ಞರೆಂದೂ ಹೇಳಿದರು, ತಮ್ಮ ವ್ಯಾಮೋಹವನ್ನು ಪ್ರಕಾಶಪಡಿಸಿ, ಸಂಕಟದಿಂದ ಮಾತನಾಡುತ್ತ ಉನ್ಮತ್ತ ರಂತೆ ವರ್ತಿಸಿದರು. ವಿಜ:-ಈಗ ನನಗೆ ಎಲ್ಲವೂ ಪೂರ್ತಿಯಾಗಿ ತಿಳಿಯಿತು, ರಾಮ ವರ್ಮನು ಸ್ತ್ರೀಸಮೂಹದಲ್ಲಿ ವಿನಯವಂತನಾಗಿಯ ಭಯಗ್ರಸ್ತನಾಗಿಯೂ ಇರುವನೆಂಬುದನ್ನು ಬಲ್ಲೆನು, ಈ ಉನ್ಮಾದಾವಸ್ಥೆ ಯ ನಡತೆಗಳು ಅವನ ಸ್ವಭಾವಕ್ಕೆ ಬಹುದೂರವಾದುವು. ಇವೊಂದನ್ನೂ ನಾನು ನಂಬಲಾರೆನು. ನಿಮ್ಮ :-ನಾನು ನಿಮ್ಮ ಕಣ್ಣೆದುರಿಗೇ ನನ್ನ ಪ್ರಣಯದ ಪ್ರಮಾಣೀ ಕತೆಯನ್ನು ನಿದರ್ಶನಕ್ಕೆ ತಾರದಿದ್ದರೆ, ನನ್ನ ಮಾತೇಕೆ ? ಇನ್ನೊಂದು ಗಳಿಗೆ ಬಿಟ್ಟು, ನೀವಿಬ್ಬರೂ ಇಲ್ಲಿಯೇ ಇರಿ, ರಾಮವರ್ಮರೇ ವ್ಯಾಮೋಹವನ್ನು ಪ್ರಕಾಶಪಡಿಸುವುದನ್ನು ನೀವೇ ನೋಡುವಿರಿ. ವಿಜ:-ಸಮ್ಮತ, ನಿನ್ನ ವರ್ಣನೆಯಂತೆ ಅವನು ಇರುವುದಾದರೆ, ಇಂದಿಗೇ ನನ್ನ ಪುತ್ರ ಸುಖವು ಕೊನೆಗಾಣುವುದರಲ್ಲಿ ಸಂಶಯವಿಲ್ಲ. (ಹೊರಡುವನು) ನಿಮ್ಮ:-(ಸ್ವಗತ) ನನ್ನ ವರ್ಣನೆಯಂತೆ ಅವನು ಇರದಿದ್ದರೆ, ನನ್ನ ಸುಖಕ್ಕೆ ಮೊದಲಾಗುವುದಿಲ್ಲ ವಾದಕಾರಣ, ಅವನು ಹಾಗೆಯೇ ಇರಲಿ. (ಹೊರಟುಹೋಗುವರು) [ಮನೆಯ ಹೊರಭಾಗದ ವಿಶಾಲವಾದ ತೋಟ, ಪ್ರಿಯಸೇನನು ಬರುವನು] ಪ್ರಿಯ:-ನಾನೆಂತಹ ಮೂಢನು ! ಆ ಪೋಲಿಯ ಮಾತನ್ನು ನಂಬಿ ಇಲ್ಲಿಗೆ ಬರಬಹುದೆ ? ನನ್ನನ್ನು ಕಾಡಿಸುವುದೂ ಅವನಿಗೊಂದು ವಿಧವಾದ ವಿನೋದವಾಗಿರಬಹುದು, ಗೊತ್ತಾದಕಾಲದಲ್ಲಿ ಕೆಲಸಮಾಡಲು ಅವನಿಗೆ ತುಬರುವುದು ? ನಾನು ನಿಜವಾಗಿಯೂ ಇನ್ನು ಕಾದಿರಲಾರೆನು. ಇದೇನು ?