ಪುಟ:ನಿರ್ಮಲೆ.djvu/೧೧೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦೨ ನಿರ್ಮಲೆ ದುರ್ಮ:-ಓಹೋ ! ಈಗ * ಪ್ರಿಯಮಿತ್ರ, ' ಉಪಕಾರ, ಕೃತ ಜ್ಞತ ! ಒಂದು ಗಳಿಗೆಗೆ ಮುಂಚೆ, ೧೯ ಮುಗ್ದಾಳ ! ನಾಯಿ !! ಕೃತಘ್ರ !! ಹೊಟ್ಟೆಯನ್ನು ತಿವಿದು ಕೊಂದುಹಾಕುತ್ತೇನೆ !?” ಎನ್ನು ತಿದ್ದಿಯಲ್ಲಾ ? ನಿಮ್ಮ ಜಗಳದ ಹದವು ನನಗೆ ಒಗ್ಗದು, ಆದರೆ, ನೀನು ಬೆದರಿಸಿದಂತೆ ನನ್ನ ಹೊಟ್ಟೆಯನ್ನು ತಿವಿದೇ ಹಾಕಿ, ನಾನು ಸತ್ತೇಹೋಗಿದ್ದರೆ, ನೀನು ಗಲ್ಲಿಗೆ ಏರಿಸುವವನಿಗೆ ' ಸಲಾಂ' ಮಾಡಬೇಕಾಗಿತ್ತಲ್ಲವೊ ? ಪ್ರಿಯ: - ಮಿತ್ರನೆ, ನಿನ್ನ ಆಕ್ಷೇಪಣೆಗಳೆಲ್ಲವೂ ಸರಿಯಾಗಿಯೇ ಇವೆ, ನಾನು ಮೊದಲು ಕಮಲೆಯ ಕಷ್ಟವನ್ನು ನೀಗಿಸಬೇಕು, ಮುದು ಕಿಯನ್ನು ನೀನು ಕಾಪಾಡಿಕೊಂಡರೆ, ಹುಡುಗಿಯನ್ನು ನಾನು ನೋಡಿ ಕೊಳ್ಳುವೆನು, - (ಹೊರಡುವನು ) ದುರ್ಮ:-ಆಗಲಿ, ಹೆದರಬೇಡ. ಅದೊ, ನಮ್ಮ ತೆಯು ಬರುತ್ತಿರು ವಳು, ಓಡು ಇದೇ ಸಮಯ, ಕೆಳದ ಕೆಸರು ಮೆತ್ತಿಕೊಂಡು ಬರುತ್ತಿ ರುವ ಅವಳು ಎಷ್ಟು ರಮ್ಯವಾಗಿರುವಳು ! ನಿನಗೆ ಇದೇ ಸಮಯ, ಹೊರಡು! ಕಮಲೆಯನ್ನು ಎತ್ತಿಕೊಂಡು ಓಡು. [ಚಂಡಿಯು ಬರುವಳು] ಚಂಡಿ:-ದುರ್ಮತಿ, ನಾನು ಸತ್ತೆನು, ಮೈ, ಮೂಳೆಗಳೆಲ್ಲವೂ ಮುರಿದು ಹೋಗಿವೆ. ಪ್ರಾಣವು ಮಾತ್ರ ಇನ್ನೂ ಹೋಗಿಲ್ಲ, ಉಳಿದ ದುರವಸ್ಥೆಗಳೆಲ್ಲವೂ ಪ್ರಾಪ್ತವಾದುವು. ನಾನು ಇನ್ನು ಬದುಕಲಾರೆ. ಕೊನೆ ಯಸಲ ಬೇಲಿಯ ಮೇಲೆ ಬಿದ್ದಾಗ ನನ್ನ ಪರಿಣಾಮವು ಆಗಿಹೋಗಬೇಕಾಗಿತ್ತು, - ದುರ್ಮ:-ಅತ್ತೆ, ನಾನೇನುಮಾಡಲಿ ? ಅದೆಲ್ಲವೂ ನಿನ್ನ ಕಾಲ್ಯದ ಫಲ, ಅರಿಯದ ದಾರಿಯಲ್ಲಿ ರಾತ್ರಿಯೆಲ್ಲಾ ಪ್ರಯಾಣವಳಡಬೇಕೆಂದರೆ ಹೇಗೆ ಸಾಧ್ಯ! - ಚಂಡಿ:-ನಾನೇಕೆ ಅವಳೊಡನೆ ಬಂದೆನು ? ನಿನ್ನೊಡನೆಯೇ ಕಳಿಸಿ ನಾನು ಮನೆಯಲ್ಲಿಯೇ ಇದ್ದಿದ್ದರೆ ಚೆನ್ನಾಗಿತ್ತು. ಈ ಅನಾಹುತಗಳೊಂದೂ