ಪುಟ:ನಿರ್ಮಲೆ.djvu/೧೧೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೧೦೫ ಚಂಡಿ:- -(ಹಿಂಭಾಗದಲ್ಲಿ) ಅಯ್ಯೋ ! ಅವನು ದುರ್ಮತಿಗೆ ಅಪಾಯ ವನ್ನು ೦ಟುಮಾಡದಿರುವನೆ ? ಆಯ್ಯೋ ! ಅಯ್ಯೋ !! ದೇವ:-ಇಲ್ಲಿ ಯಾರೋ ಮಾತನಾಡುವಂತ ಚನ್ನಾಗಿ ಕೇಳಿಸಿತು. ಅವರಾರು ? ' ದುರ್ಮ:- ಯಾರೂ ಇಲ್ಲ, ಇರುವವನು ನಾನೊಬ್ಬನೇ, ಮೂರು ಘ೦ಟೆಗೆ ನಲವತ್ತು ಮೈಲಿ, ಬಹುವೇಗವೆಂದು ಅನ್ನು ಕೊಳ್ಳುತಿದ್ದೆನು, ಹುಂ! ನಿಶ್ಚಯವಾಗಿಯೂ ನಾನೇ ! ಹೂ೦! ರಾತ್ರಿಯೆಲ್ಲಾ ಮ೦ಜುಗಾಳಿಯಲ್ಲಿ ತಿರುಗಿ ಸ್ವಲ್ಪ ನೆಗಡಿಯಾಗಿದೆ, ಒಳಗೆ ಹೋಗುವ, ಹೂಂ ! ಹೂಂ!! ದೇವ:-ನೀನೇ ಪ್ರಶ್ನೆ ಮಾಡಿಕೊಂಡು ನೀನೇ ಉತ್ತರವನ್ನು ಹೇಳಿ ಕೊಳ್ಳುತಿದ್ದೆಯೋ ? ನನಗೆ ಇಬ್ಬರಧ್ವನಿಯು ಚೆನ್ನಾಗಿ ಕೇಳಿಬಂತು. ( ಗಟ್ಟಿಯಾಗಿ) ಇನ್ನೊ ಬ್ಬರನ್ನು ತೋರುವಿಯೊ ? ಇಲ್ಲವೊ ? ನಾನು ಕಂಡು ಹಿಡಿದೇಹಿಡಿಯುವೆನು. ಚಂಡಿ:- (ಹಿಂಭಾಗದಲ್ಲಿ) ನನ್ನ ನ್ನು ಹುಡುಕಿಕೊಂಡು ಬರುತ್ತಿರು ವನು, ಅಯ್ಯೋ ! ಅಯ್ಯೋ!! ದುರ್ಮ:- ನಾನು ನಿಜವನ್ನೇ ಹೇಳಿದರೂ, ನೀನು ಹುಡುಕಲೇ ಬೇಕೆ? ಹುಂ! ದೇವರಾಣೆ ! ಸತ್ಯವನ್ನೇ ಹೇಳುವೆನು, ಹೂಂ ! ನಿಧಾನಿಸು. ಎಲ್ಲವನ್ನೂ ಹೇಳುವೆನು. ಹo! ಹೂಂ!! (ದೇವದತ್ತನು ಮುಂದುವರಿ ವನು, ಅವನನ್ನು ದುರ್ಮತಿಯು ತಡೆಯುವನು) - ದೇವ:-ನನ್ನ ನ್ನು ತಡೆಯಬೇಡ, ನಾನು ನೋಡಲೇಬೇಕು, ನಿನ್ನ ಮ ತನ್ನು ನಾನು ನಂಬುವುದು ನಿರರ್ಥಕವು, (ಅವನನ್ನು ತಳ್ಳುವನು) ಚಂಡಿ: -(ಓಡಿಬಂದು) ದೇವರೇ ! ಅಯ್ಯೋ ! ನನ್ನ ಅಳಿಯ ಮುದ್ದು ದುರ್ಮತಿಯನ್ನು ಕೊಲ್ಲಬೇಡಿ, ಮಹಾಶಯರೆ ! ಧರ್ಮಿಷ್ಠರೆ !! ನಿಮ್ಮ ಆಗ್ರಹವನ್ನು ನನ್ನ ಮೇಲೆ ತೋರಿಸಿ, ಇಷ್ಟವಿದ್ದರೆ ನನ್ನ ಪ್ರಾಣ, ಧನಗಳನ್ನು ತೆಗೆದುಕೊಳ್ಳಿ ! ಆ ಹುಡುಗನ ಗೋಜಿಗೆ ಹೋಗಬೇಡಿರಪ್ಪಾ ! 14