ಪುಟ:ನಿರ್ಮಲೆ.djvu/೧೧೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೬ ನಿರ್ಮಲೆ ಅಯ್ಯೋ, ನನ್ನ ಮಾತುಗಳನ್ನಾಲಿಸಿ ! ಅವನನ್ನು ಬಿಡಿ ! ದೇವ:-(ಭ್ರಮೆಯಿಂದ) ಇದೇನು ! ಇವಳು ನನ್ನ ಹೆಂಡತಿಯಲ್ಲ ವೆ ? ಎಲ್ಲಿಂದಬಂದಳು ? ಇವಳು ಹೇಳುತ್ತಿರುವುದಾದರೂ ಏನು ? ಚಂಡಿ:-(ನಮಸ್ಕರಿಸಿ) ದರೋಡೆಕೋರರಲ್ಲಿ ಶ್ರೇಷ್ಠರಾದವರೆ ! ದಯವಿಡಿರಿ, ನಮ್ಮಲ್ಲಿರುವ ಹಣ, ಒಡವೆ, ಗಡಿಯಾರ ಅಂಗಿ, ಬಟ್ಟೆ, ರುಮಾಲುಗಳೆಲ್ಲವನ್ನೂ ಸ್ವೀಕರಿಸಿ ನಮ್ಮನ್ನು ಬಿಟ್ಟು ಬಿಡಿರಿ, ನಮ್ಮನ್ನು ದಯ ಎಟ್ಟು ಪ್ರಾಣಸಹಿತ ಬಿಟ್ಟು ಬಿಡಿರಿ ನಾವು ದೇವರಾಣೆಗೂ ಸರ್ಕಾರದವರಿಗೆ ತಿಳಿಸುವುದಿಲ್ಲ. ದೇವ:-ಸಿನಗೆ ಹುಚ್ಚು ಹಿಡಿದಿರಬೇಕು. ಸ೦ಡಿ ! ನಾನಾರು ? ದೇವ ದತ್ತನಲ್ಲ ವೆ ? ನಿನ್ನ ಗಂಡನಲ್ಲವೆ ? ಚಂಡಿ:- ಅಯ್ಯೋ ! ಇದೇನು ? ಭಯ ಪೀಡಿತಳಾದ ನನಗೆ ಕಣ್ಣ ಕಾಣಿಸಲೇ ಇಲ್ಲ. ಪ್ರಿಯನೆ, ಈ ವೇಳೆಯಲ್ಲಿ ಮನೆಯನ್ನು ಬಿಟ್ಟು ಇಷ್ಟು ದೂರ ಬರುವಿಯೆಂದು ಆರು ತಿಳಿದಿದ್ದರು ? ಊಹಿಸಲಾದರೂ ಊಹಿಸಬಹು ದೆ ? ನೀವೇಕೆ ನಮ್ಮ ಹಿಂದೆ ಬಂದಿರಿ ? ದೇವಚಂಡಿ, ನಿನಗೆ ನಿಜವಾಗಿಯೂ ಹುಚ್ಚು ಹಿಡಿದಿರಬೇಕು ನಾವಿರುವುದು ಮನೆಯಿಂದ ನಲವತ್ತುಗಜ ದೂರ ಸಹಾ ಇಲ್ಲ, ಇದು ಬಹು ದೂರವೆ? (ದುರ್ಮತಿಯನ್ನು ನೋಡಿ) ಇದೂ ಒಂದು ಸಿನ್ನ ಕುಚೇಷ್ಟೆಯೋ? ದುರಾರ್ಗ ಪ್ರವರ್ತಕನೆ ! ಅಯೋಗ್ಯನೆ !! ಚಿಃ ! ( ಚಂಡಿಯನ್ನು ಕುರಿತು) ಮನೆಯಬಾಗಿಲುಗುರುತಿಲ್ಲ ವೆ? ಮನೆಯ ಮುಂದಣ ಆ ಆಲದಮರವನ್ನು ನೋಡಿದರೆ ಇದು ಮನೆಯ ಸುತ್ತಣ ಪ್ರದೇಶವೆಂದು ತಿಳಿಯುವುದಿಲ್ಲವೆ? ಚೆ೦ಡಿ:-ಇಂದು ನಾನು ಬದುಕಿ ಬಂದುದೇ ಕಷ್ಟ (ದುರ್ಮತಿಯ ನ್ನು ಕುರಿತು) ಪಾಪಿ ! ನಿನ್ನ ಉಪಕಾರವೆಲ್ಲವೂ ಇಂತಹುದೇ ! ನಾಯಿ ! ನಿಸಗೆ ಈಗ ಬುದ್ಧಿಯನ್ನು ಕಲಿಸದೆಬಿಡೆನು ! ನೋಡು !! , ದುರ್ಮ:-ಅತ್ತೆ, ನೀನೇ ನನ್ನ ನ್ನು ಹಾಳುಮಾಡಿರುವಿಯೆಂದು