ಪುಟ:ನಿರ್ಮಲೆ.djvu/೧೧೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೧೦೭ ಈ ಊರಿನವರೆಲ್ಲರೂ ಹೇಳುವರು, ಅದರ ಫಲವನ್ನು ನೀನೇ ಅನುಭವಿಸ ಬೇಕು. ಚಂಡಿ:- ನಿನ್ನ ನ್ನು ಈಗ ಹಾಳುಮಾಡೇ ಮಾಡುವೆನು, ಪಾಪಿ ! ದೇವ:-ದುರ್ಮ ತಿಯು ಹೇಳಿದುದರಲ್ಲಿ ಒಂದು ನೀತಿಯಿದೆ. (ದುರ್ಮತಿಯನ್ನು ಅಟ್ಟಿ ಕೊಂಡು ಚಂಡಿಯು ಓಡಿಹೋಗುವಳು, ದೇವದತ್ತ ನೂ ಹೋಗುವನು) (ಪ್ರಿಯಸೇನ ಕಮಲಾವತಿಯರು ಬರುವರು) - ಪ್ರಿಯ:-ಕಮಲೆ, ನಿಧಾನಮಾಡುವಿಯೇಕೆ ತಡಮಾಡಿದರೆ ಪ್ರತಿ ಕ್ಷಣವೂ ಕೇಡುಬರುವುದು, ನೀನು ಸ್ವಲ್ಮಧ್ಯೆ ರಮಾಡಿದರೆ, ನಾವು ಓಡಿ ಹೋಗಬಹುದು, ಆಗ ನಿಮ್ಮ ಕೈಯ ಕೋಪಕ್ಕೆ ಪಾತ್ರರಾಗಬೇಕಾದುದಿಲ್ಲ. ಕಮ:-ಧೈಲ್ಯವೆ ! ಅಸಾಧ್ಯವೇ ಸರಿ ! ಈಗ ಅನುಭವಿಸಿದ ಕಷ್ಟ ಪರಂ ಪರೆಗಳಿಂದ ನನಗೆ ಬುದ್ದಿಯೇ ಓಡುವುದಿಲ್ಲ, ಇನ್ನು ಹೊಸಗಂಡಾಂತರಗ ಳನ್ನ ನುಭವಿಸಲು ನಾನು ಧೈಲ್ಯಮಾಡಲಾರೆನು, ಎರಡು ಮೂರು ವರುಷಗಳ ನಂತರ ನಿಜವಾಗಿಯೂ ಸುಖವು ನಮ್ಮ ಕಬ್ಬೇರುವುದು. ಕಾಲ ತಡಮಾಡುವುದು ಬಹು ಹಿಂಸಕ ರವು, ಪ್ರಾಣೇಶ್ವರಿ !! ನಮ್ಮ ಸುಖವು ಇಂದಿನಿಂದಲೇ ಮೊದಲಾಗಲಿ ! ಆಸ್ತಿಯು ಹಾಳಾದರೂ ಆಗಲಿ ; ಪ್ರೀತಿಯ ಸಂತುಷ್ಟಿ ಯ ಚಕ್ರಾಧೀಶ್ವ ರನ ಸಂಪತ್ತಿಗಿಂತಲೂ ಶ್ರೇಷ್ಟವಾದುವಲ್ಲವೆ ? ನನ್ನ ಮಾತನ್ನು ಕೇಳು ! ಕಮ:-ಅದಾಗದು ! ನಾನು ಈಗ ವಿವೇಕಿಯಾಗಿರುವೆನು, ಆದರೆ ಆಜ್ಞೆಯನ್ನು ಉಲ್ಲಂಘಿಸೆನು. ವ್ಯಾಮೋಹಾತಿಶಯದಿಂದ ಉತ್ಸಾಹದಲ್ಲಿ ರುವ ಸಮಯದಲ್ಲಿ ನಾವು ಸಂಪತ್ತನ್ನು ಧಿಕ್ಕರಿಸಬಹುದು ; ಆದರೆ, ಹಾಗೆ ಮಾಡುವುದರಿಂದ ಕೊನೆಗೆ ದುಃಖಾನುಭವವನ್ನು ಮಾಡಬೇಕೆಂಬುದುನಿಜ. ಒಂದು ಬಾರಿ ದೇವದತ್ತನನ್ನೇ ಬೇಡಿಕೊಳ್ಳುವೆನು, ಅವನ ನ್ಯಾಯಪ್ರಿಯ ಬುದ್ದಿ ಯ ಕಾರುಣ್ಯಹೃದಯವೂ ನನ್ನ ಸಂಕಟಗಳನ್ನೆಲ್ಲ ಪರಿಹರಿಸಬಲ್ಲುದು. ೩ ೧