ಪುಟ:ನಿರ್ಮಲೆ.djvu/೧೧೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೦ ನಿರ್ಮಲ - ಪ್ರಿಯ:--ದೇವದತ್ತನಿಗೆ ಸಂಕಟಗಳನ್ನು ಪರಿಹರಿಸಬೇಕೆಂಬ ಬುದ್ದಿ ಯು ಹುಟ್ಟಿದರೂ ಶಕ್ತಿಯು ಇಲ್ಲವಲ್ಲ ? ಅವನೇನು ಮಾಡಬಲ್ಲ ನು ? ಕಮ:- ಅವನ ಆಜ್ಞೆಯನ್ನು ಚಂಡಿಯು ನೆರವೇರಿಸುವಳು. ಅದೇ ನನಗಿರುವ ಆಶೆ ! ಪ್ರಿಯ:--- ನನಗೇನೊ ನಿರಾಶೆಯು ಪೂರ್ಣವಾಗಿರುವುದು, ನೀನು ಹಟಮಾಡುವುದರಿಂದ, ನನಗೆ ಇಷ್ಟವಿಲ್ಲದಿದ್ದರೂ ನಿನ್ನ ಮಾತಿನಂತೆ ನಡೆ ಯಲು ಸಿದ್ಧನಾಗಿರುವೆನು. (ತೆರಳುವರು) II. [ದೇವದತ್ತನ ಮನೆಯಲ್ಲಿ ವಿಶಾಲವಾದೊಂದು ಹಜಾರ, ವಿಜಯಪಾಲತೂ ನಿಮ್ಮಲೆಯೂ ಬರುವರು. ] ವಿಜಯ:-ಎಂತಹ ದುರವಸ್ಥೆಯು ಬಂದೊದಗಿತು ? ನೀನು ಹೇಳುವುದೆಲ್ಲವೂ ನಿಜವಾದರೆ, ನನ್ನ ಮಗನು ತಪ್ಪಿತಸ್ಥ ನೇಸರಿ, ನನ್ನ ಮಗ ನು ಹೇಳುವುದು ನಿಜವಾದರೆ, ನಾನು ಯಾರನ್ನು ಸೊಸೆಯನ್ನಾಗಿ ಮಾಡಿ ಕೊಳ್ಳಲು ಆಶೆಯುಂಟೋ, ಅವಳನ್ನು ಕಳೆದುಕೊಳ್ಳಬೇಕಾಗುವುದು. ನಿಮ್ಮ :- ನಿಮ್ಮ ಮೆಚ್ಚಿಗೆಯನ್ನು ಸಂಪಾದಿಸಿದುದೇ ನನಗೊಂದು ಹೆಮ್ಮೆ ಯಾಗಿದೆ. ಅದಕ್ಕೆ ನಾನು ಅರ್ಹಳೆಂದು ಈಗಲೇ ತೋರಿಸುವೆನು. ನಾನು ಮೊದಲೇ ಹೇಳಿದಂತೆ ನೀವು ಮರೆಯಲ್ಲಿರಿ, ಎಲ್ಲವನ್ನೂ ಅವರ ಬಾಯಿಂದಲೇ ಕೇಳಬಹುದು. ಇದೋ, ಅವರೇ ಬರುತ್ತಿರುವರು. ವಿಜ:- ದೇವದತ್ತನನ್ನೂ ಕರೆದುಕೊಂಡುಬಂದು ಮರೆಯಾಗಿರು (ಹೊರಡುವನು) (ರಾಮವರ್ಮನು ಬರುವನು) ರಾಮ :-ನಾನು ಹೊರಡಲು ಸಿದ್ಧನಾಗಿದ್ದರೂ, ಒಂದುಸಾರಿ ನಿನ್ನ ಅನುಮತಿಯನ್ನು ಪಡೆದು ಹೋಗಲು ಬಂದೆನು, ಅಗಲಿಕೆಯ ಸಂಕ ವೆನು.