ಪುಟ:ನಿರ್ಮಲೆ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧೦ ನಿರ್ಮಲೆ ರಾಮ:-ದೇವರೇ ! ಐಶ್ವರ್ಯವನ್ನು ನಾನು ಯಾವಾಗಲೂ ತುಚ್ಛ ವಾಗೆಣಿಸಿರುವೆನು, ನಿನ್ನ ರೂಪನ್ನು ನೋಡಿದರೆ, ಆರಿಗೆ ತಾನೇ ಮನೋವಿ ಕಾರವಾಗದಿರುವುದು ? ನಿನ್ನೊಡನೆ ಮಾತನಾಡಿದುದರಿಂದ, ನನ್ನ ವಿದ್ಯೆ, ಬುದ್ದಿ, ಸಂಪತ್ತುಗಳೆಲ್ಲವೂ ಪ್ರಕಾಶವನ್ನು ಪಡೆದಿವೆ ಮೊದಲು ಮೊದಲು, ಒರಟುಸ್ವಭಾವವಾಗಿ ಕಂಡುಬಂದುದೆಲ್ಲ ವೂ ನಾಗರಿಕತೆಯಿಂದ ಜನಿಸಿದ ಸರಳಸ್ವಭಾವವೆಂದು ಈಗ ವ್ಯಕ್ತವಾಯಿತು, ಹೆಂಗಸರು ಮುಂದಾಳುಗಳಾ ಗಿರಬಹುದೇ, ಎಂದು ಮೊದಲು ಹುಟ್ಟಿದ್ದ ಅನುಮಾನವು ಈಗ ಮಾಯವಾ ಯಿತು, ನಿನ್ನ ಮುಂದಾಳುತನವು ಧೈಯ್ಯದಿಂದ ಕೂಡಿದ ನಿಷ್ಕ ಲಂಕಭಾವ ವೆಂದೂ ಪಾತಿವ್ರತ್ಯವು ಶ್ರೇಷ್ಟವಾದುದೆಂದು ನಿನಗೆ ತಿಳಿದಿರುವದೆಂದೂ ಈಗ ಸ್ಪಷ್ಟವಾಯಿತು. ವಿಜ:-(ಮರೆಯಲ್ಲಿಯೆ?) ಇದೇನು ಚೋದ್ಯ ! ಅವನಾಡುವ ಮಾತು ಗಳು ಆಶ್ಚರ್ಯಕರವಾಗಿವೆ. ದೇವ:--ನಾನು ಮೊದಲೇ ಹೇಳಲಿಲ್ಲ ವೆ! ಸದ್ದು! ರಾಮ:-ಎಲೌ ರಮಜೀ, ನಾನು ಇಲ್ಲೇ ನಿಲ್ಲ ಬೇಕೆಂದು ನಿಶ್ಚಿ ಸಿರುವೆನು, ನನ್ನ ತಂದೆಯ ವಿವೇಕ ವಿಚ೧ರದಲ್ಲಿ ನನಗೆ ಮತ್ಯಾದೆಯುಂಟು. ನಿನ್ನನ್ನು ನೋಡಿದರೆ, ಅವನು ತನ್ನ ಸಮ್ಮತಿಯನ್ನು ಕೊಡುವನೆಂಬ ನಂಬುಗೆ ' ಯಿಂದ ಧೈತ್ಯವಾಗಿರುವೆನು. - ನಿಮ್ಮ :-ರಾಮವರ್ಮರೆ, ನಾನು ತಮ್ಮನ್ನು ತಡೆಯಲೊಲ್ಲೆನು. ಇಲ್ಲ, ನಿಜವಾಗಿಯೂ ತಡೆಯಲಾರೆನು, ಮುಂದೆ ಪರಿತಾಪಪಡಲು ಲೇಶ ವಾದರೂ ಅವಕಾಶವಿದ್ದರೆ, ಈ ಬಾಂಧವ್ಯಕ್ಕೆ ಅವಕಾಶವನ್ನು ಕೊಡೆನು. ಏನೋ, ನಿಮಗುಂಟಾಗಿರುವ ಅರೆಗಳಿಗೆಯ ವ್ಯಾಮೋಹವನ್ನು ನಂಬಿ, ಆ ಅನುಕೂಲವಾದ ಸಮಯದಲ್ಲೇ, ಮುಂದೆ ನಿಮಗೆ ಲಜ್ಜೆಯುಂಟಾಗುವಂತೆ ಮಾಡುವ ಕೀಳು ಬುದ್ದಿಯು ನನ್ನಲ್ಲಿಲ್ಲ. ನಿಮ್ಮ ಸುಖವನ್ನು ತಗ್ಗಿಸಿ, ನನ್ನ ಸುಖವನ್ನು ಹೆಚ್ಚಿಸಿಕೊಳ್ಳುವುದರಲ್ಲಿ ನನಗೆ ಸುಖವುಂಟೆ ?