ಪುಟ:ನಿರ್ಮಲೆ.djvu/೧೨೨

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೧೧೩ - ದೇವ :- ಸರಿ, ಸರಿ, ನೀನು ಹೋಗುವುದೆಲ್ಲಿಗೆ? ಇದೆಲ್ಲವೂ ಒಂದು ಭ್ರಾಂತಿವಿಲಾಸವಾಗಿ ಪರಿಣಮಿಸಿತು. ನನಗೆ ಪರಮಾನಂದವಾಯಿತು, ನೀನು ಖಂಡಿತವಾಗಿಯೂ ಹೋಗಕೂಡದು. ನಿಮ್ಮಲೆಯು ನಿಜವಾಗಿಯೂ ನಿನ್ನನ್ನು ನನ್ನಿ ಸುವಳು, ನಿಮ್ಮಿ, ಅವನನ್ನು ಕ್ಷಮಿಸುವುದಿಲ್ಲವೋ ? ನಾವೆ ೪೭ ನಿಜವಾಗಿಯೂ ನಿನ್ನನ್ನು ಮನ್ನಿಸುವೆವು, ರಾಮವರ್ಮನೆ, ಮನ ಸಿನಲ್ಲಿ ದೃಶ್ಯವನ್ನು ತಾಳು, (ನಿರಲೆಯು ರಾಮವರ್ಮನನ್ನು ಕರೆದುಕೊಂಡು ಒಂದು ಭಾಗಕ್ಕೆ ಹೋಗುವಳು) | (ಚಂಡಿಯು ದುರ್ಮತಿಯೊಡನೆ ಬರುವಳು.) ಚಂಡಿ: ಹಾಗೊ ? ಅವರು ಹೊರಟು ಹೋದರೂ ? ಹೋದರೆ ಹೋಗಲಿ, ಚಿಂತೆಯಿಲ್ಲ. ದೇವ:ಆರು ? ಆರು ? ಚಂಡಿ :-ಆ ಅವಿಧೇಯಳಾದ ಕಮಲೆ, ಅವಳ ಪ್ರಿಯನಾದ ಪ್ರಿಯ ಸೇನ, ರಾಮವರ್ಮನೊಡನೆ ಬಂದ ಗೃಹಸ್ಥನು ಅವಳೊಡನೆ ಓಡಿಹೋ ದನು. ವಿಜಯ :- ಏನು, ಪ್ರಿಯಸೇನನೇ ! ಹುಡುಗಿಯ ಪುಣ್ಯವು ಶ್ರೇಷ್ಠ ವಾದುದೇ ಸದಿ, ಪ್ರಿಯಸೇನನಂತಹ ಯೋಗ್ಯರು ಅತಿ ವಿರಳ ! ದೇವ :-ಹಾಗಾದರೆ, ಈ ಸಂಬಂಧವೂ ಚನ್ನಾಗಿ ಆದಂತೆಯೇ ಆಯಿತು. ನನಗೆ ಅದೂ ಒಂದು ಸಂತೋಷದ ವಿಷಯ. ಸರಿ ! ಚ೦ದಿ:--ಕಮಲೆಯು ಹೋದರೆ ಹೋಗಲಿ, ಅವಳ ಜವಾಹಿರಿಯು ಇಲ್ಲೇ ಇದೆ. ಅವಳು ಹೋದ ವ್ಯಸನವನ್ನು ಜವಾಹಿರಿಯನ್ನು ನೋಡಿ ಕೊಂಡಿರುವುದರಿಂದ ಕಳೆದುಕೊಳ್ಳಬಹುದು, ದೇವಃ-ಪ್ರಿಯೆ, ನಿನಗೆ ಧನಪಿಶಾಚವು ಹಿಡಿದಿರಬಹುದು, ಚಂಡಿ:- ನನ್ನ ಪಾಡು ! ಅದರಿಂದ ನಿಮಗೇನು ? 15