ಪುಟ:ನಿರ್ಮಲೆ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೧...? ಸಿರ್Jಲೆ ದಿವ ದೇವ:-ನಿನ್ನ ಅರಗಿಣಿ ದುರ್ಮತಿಯು ಪ್ರಾಪ್ತ ವಯಸ್ಕನಾದಮೇ ಲೆ ಕಮಲೆಯನ್ನು ಮದುವೆಯಾಗುವುದಿಲ್ಲ ವೆಂದರೆ, ನ್ಯಾಯವಾಗಿ ಜವಾ? ಹಿರಿಯೆಲ್ಲವೂ ಅವಳದೇ ಆಗುವುದೆಂದು ನಿನಗೆ ತಿಳಿಯದೆ ? : ಚಂಡಿ :-ದುರ್ಮತಿಯು ಇನ್ನೂ ಪ್ರಾಪ್ತ ವಯಸ್ಕ ನಾಗಿಲ್ಲವಷ್ಟೆ. ಅವನು ಒಲ್ಲೆನೆನ್ನು ವವರೆಗೂ ಕಮಲೆಯು ಸುಮ್ಮನಿರಬೇಕಲ್ಲವೊ ? (ಪ್ರಿಯಸೇನನೂ, ಕಮಲಾವತಿಯೂ ಬರುವರು.) ಚಂಡಿ:--ಓಹೋ! ಅವರು ಹಿಂದಿರುಗಿಬಂದರು. ಇನ್ನೇನು ಮಾಡ ಲಿ ? ಮತ್ತೇನು ಗತಿ ? ಪ್ರಿಯ :-(ದೇವದತ್ತನನ್ನು ಕುರಿತು) ನಿಮ್ಮ ಸೊಸೆಯಾದ ಕಮಲೆ ಯೊಡನೆ ನಾನು ಓಡಿಹೋಗಲು ಪ್ರಯತ್ನ ಪಟ್ಟುದಕ್ಕಾಗಿ ಕ್ಷಮೆವೇಡುವೆನು. ಅದಕ್ಕಾಗಿ ನನಗುಂಟಾಗಿರುವ ನಾಚುಕೆಯೇ ಶಿಕ್ಷೆಯಾಗಲಿ ! ಧರ್ಮಬುದ್ದಿಗೆ ಮಿಂಚಿದ ಕಾರುಣ್ಯವನ್ನು ನಮ್ಮ ಮೇಲೆ ಈಗ ನೀವು ತೋರಬೇಕು, ಅದನ್ನು ಬೇಡುವುದಕ್ಕಾಗಿಯೇ ಈಗ ಬಂದಿರುವೆನು. ಇವಳ ತಂದೆಯ ಅನುಮತಿ ಯಂತೆ ಇವಳನ್ನು ಪ್ರೀತಿಸಲಾರಂಭಿಸಿದೆನು, ಕರ್ತವ್ಯಜ್ಞಾನದಿಂದಲೇ ನಮ್ಮ ಪ್ರಣಯವು ಅಂಕುರಿಸಿತು. ಕಮ:-ನನ್ನ ತಂದೆಯು ಗತಿಸಿದಾಗಿನಿಂದಲೂ ಅವನ ಮನೋಗತ ದಂತೆ ಆಚರಿಸಿ, ತೊಂದರೆಯನ್ನು ನಿವಾರಿಸಿಕೊಂಡಿರುವೆನು, ಚಿತ್ತಚಾಂಚಿ ಲ್ಯದಿಂದ ನಾನೊಂದು ಸಾರಿ, ಐಶ್ವರ್ಯವನ್ನು ಬಿಟ್ಟು ನನ್ನನ್ನು ಒಪ್ಪಿದವ ನೊಡನೆ ಓಡಿಹೋಗಲು ಪ್ರಯತ್ನ ಪಟ್ಟೆನು, ಈಗ ಆ ಚಿತ್ತಚಾಂಚಲ್ಯವಿಲ್ಲ. ನನ್ನ ಜವಾಹಿರಿಯನ್ನು ದಯವಿಟ್ಟು ಕೊಡಿಸಬೇಕೆಂದು ಬೇಡುವೆನು, ಚಂಡಿ:- ಈಗಣ ಕಾಲದ ಎಲ್ಲ ಕಥೆಯ ಪುಸ್ತಕಗಳಂತೆಯೇ ಇವೆ ಲ್ಲವೂ ಕೊನೆಗಂಡವು. ಹಾ! ಹಾ! (ಅಸಹ್ಯದಿಂದ) ಹಿ! ಹಿ!! ದೇವ:- ಹೇಗಾದರೇನು ? ಅವರ ಆಸ್ತಿಯನ್ನು ಅವರೇ ತೆಗೆದು ಕೊ೦ಡು ಹೋಗಲು ಬಂದಿರುವರು. ನನಗೆ ಅದೇ ಸಂತೋಷ, ದುರ್ಮತಿ