ಪುಟ:ನಿರ್ಮಲೆ.djvu/೧೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ದುರ್ಮ:--ಅತ್ತೆ, ಈಗ ವಿರಾಮವಿಲ್ಲ, ಬಹಳ ಅವಸರದಲ್ಲಿ ರುವೆನು. ಚ೦ಡಿ:.ನಿನ್ನ ನ್ನು ನೋಡಿದರೆ, ಭಯವಾಗುವುದು. ಈ ರಾತ್ರಿ ಹೊರಗೆ ಎಷ ಮಂಜು ಸುರಿಯುತ್ತಿರುವುದು ? ನೋಡು, ಛಳಿಯಲ್ಲಿ ಹೊರಗೆ ಹೋಗಬೇಡ. ದುರ್ಮ: ... ನಾನು ಖಂಡಿತವಾಗಿಯ. ಹೋಗಲೇಬೇಕು, ಆನಂದ ಮಂದಿರದಲ್ಲಿ ಎಲ್ಲರೂ ನನ್ನ ಆಗಮನವನ್ನು ನಿರೀಕ್ಷಿಸಿಕೊಂಡಿರುವರು, ಅಲ್ಲಿ ಈದಿನ ಏನೋ ಒ೦ದುತಮಾಷೆಯು ನಡೆಯುವುದಂತೆ! ದೇವ: -- ಸರಿ! ಸರಿ!! ಸುರಾಗೃಹ ನನಗೆ ಗೊತ್ತು, ಕೇವಲ ನೀಚರ, ಕುತ್ತಿತರ ಸ್ನೇಹ. ದುರ್ವ: -..ನನ್ನ ಅತ್ರರು ನೀಚರಲ್ಲ, ಅಬ್ದಾರಿ ಇಲಾಖೆಗೆ ಸೇರಿದ ಮತಿ ಹೀನ, ಅಶ್ವ ವೈದ್ಯಸಿಪುಣನಾದ ದುಷ್ಟ ಒದ್ದಿ, ಗಾಯನ ನಿಪುಣ ನಾದ ಅವಿವೇಕಶಿಖಾಮಣಿ, ಕುಂಬಾರರ ಗುಂಪಿಗೆ ಒಡೆಯನಾದ ಕುಟಿಲ ಬುದ್ದಿ ಮೊದಲಾದ ನನ್ನ ಆಪ್ತರು ಕು ತರೋ ? ಚೆ೦ಡಿ:-ಇದೊಂದು ದಿನ ಅವರಿಗೆ ಆಶಾಭಂಗವಾದರೇನು? ದುರ್ಮ:-ಅವರಿಗೆ ಆಶಾಭಂಗವಾದರೆ ಚಿಂತೆಯಿಲ್ಲ, ಆದರೆ ನನಗೆ ಆಶಾಭಂಗವಾಗುವುದನ್ನು ನಾನು ಸಹಿಸಲಾರೆನು. - ಚ೦ದಿà:-(ಅವನ ಕಿಯ್ಯನ್ನು ಹಿಡಿದು) ಈದಿನ ಎಲ್ಲಿಗೂ ನೀನು ಹೋಗಕೂಡದು. ದುರ್ಮ:-- ನಾನು ಹೋಗಲೇಬೇಕು. ತಿಳಿಯಿತೆ ? ಚ೦ಡಿ; -ನೀನು ಖಂಡಿತವಾಗಿಯ ಹೋಗಕೂಡದು, ದುರ್ಮ...... ಸರಿ. ಆಗ ! ಯಾರು ಬಲಿಷ್ಠರೋ ಪರೀಕ್ಷಿಸುವ (ಅವಳನ್ನು ಎಳೆದುಕೊಂಡು ಓದುವನು) ದೇವ:-(ಸ್ವಗತ) ಅದೋ ! ಅವರಿಬ್ಬರೂ ಒಬ್ಬರಿಂದೊಬ್ಬರು