ಪುಟ:ನಿರ್ಮಲೆ.djvu/೧೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲ ನಾಶವಾಗಿ ಹೋಗುವರು. ಬುದ್ದಿ, ವಿವೇಚನಾಶಕ್ತಿಗಳು ಹಾಳಾಗುತ್ತಿರು ವುದು ಕಾಲಮಹಿಮೆಯಿಂದಲೋ ? ಅದೇ, ನನ್ನ ಕುವು ನಿಮ್ಮಲೆಯನ್ನೂ ಕೆಡಿಸು ತಿದೆಯೋ? ಅವಳೂ ಎಲ್ಲರಂತೆಯೇ ಆಗುತ್ತಿರುವಳು. ಅವಳು ಪಟ್ಟಣದಲ್ಲಿ ದ್ದುದು ಒಂದೆರಡು ವರುಷಗಳೇ ! ಅಷ್ಟಕ್ಕೇ ಎಷ್ಟು ಆಡಂಬರ, ಎಷ್ಟು ಚಾ ತುರ್, ಉಡುಗೆತೊಡುಗೆಗಳಲ್ಲಿ ಎಷ್ಟು ವಿಚಿತ್ರಗಳನ್ನು ಕಲಿತಿರುವಳು? ಅಬ್ಬಾ! [ನಿರ್ಮಲೆಯು ಬರುವಳು] ದೇವ:-(ಪ್ರಕಾಶಂ)ನಿರಲೆ, ಇದೇನು ವೇಷವನ್ನು ಹಾಕಿಕೊಂಡಿ ರುವೆ? ಎಷ್ಟೊಂದು ರೇಷ್ಮೆಯನ್ನು ನಿನ್ನ ಉಡುಪಿಗೆ ಸೇರಿಸಿರುವೆ? ಡಾಂಭಿ ಕರು ದಂಡವಾಗಿ ತಮ್ಮ ಉಡುಪಿಗೆ ಸೇರಿಸಿಕೊಳ್ಳುವ ಹೆಚ್ಚು ಬಟ್ಟೆಯಲ್ಲಿ ಬಡವರಿಗೂ ದೀನರಿಗೂ ಸಾಕಾದಷ್ಟು ಉಡುಗೆಯನ್ನು ಒದಗಿಸಬಹುದಲ್ಲವೆ? ಎಷ್ಟು ಹೇಳಿದರೇನು ? ಈ ಕಾಲದ ಹುಚ್ಚರಿಗೆ ತಿಳಿವಳಿಕೆಯು ಎಂದಿಗೆ ಬರುವುದೋ ? ನಿರೆಲೆ --ಪಿತನೆ ! ಪ್ರಾತಃಕಾಲದಲ್ಲಿ ಅತಿಥಿ ಅಭ್ಯಾಗತರೊಡನೆ ವಿನೋದವಾಗಿರಲೂ ಮನನೊಪ್ಪುವಂತೆ ಉಡುಗೆತೊಡುಗೆಗಳನ್ನು ಧರಿಸಲೂ ನೀನೇ ಅನುಮತಿಯನ್ನು ಕೊಟ್ಟಿಲ್ಲವೆ? ಸಂಧ್ಯಾ ಕಾಲದಲ್ಲಿ ನಿನ್ನ ಇಷ್ಟಾನು ಸಾರವಾಗಿ ಆಡಂಬರವಿಲ್ಲದೆ ಸಾಮಾನ್ಯವಾದ ಉಡುಪನ್ನು ನಾನು ಧರಿ ಸುವನಲ್ಲವೆ? ದೇವ:--ಮರೆತೆನು ನಿಜ ನಿಜ, ಈ ಒಪ್ಪಂದವು ಚೆನ್ನಾಗಿ ನೆನ ಪಿರಲಿ, ಈ ದಿನ ಸಾಯಂಕಾಲದಲ್ಲೇ ನಿನ್ನ ವಿಧೇಯತೆಯನ್ನು ಪರೀಕ್ಷಿಸಲು -ಅವಕಾಶವು ದೊರೆವುದೆಂದು ತೋರುತ್ತದೆ. ನಿಮ್ಮಲೆ:ಪಿತನೆ! ನಿನ್ನ ಅಭಿಪ್ರಾಯವು ನನಗೆ ನಿಜವಾಗಿಯೂ ತಿಳಿ ಯಲಿಲ್ಲ. ದೇವ:-ನಿನ್ನೊ ಡನೆ ಮರೆಮಾಚಬೇಕೆ? ಯಾರಿಗೆ ನಿನ್ನ ನ್ನು ಕೊಟ್ಟು ವಿವಾಹಮಾಡಬೇಕೆಂದಿರುವೆನೊ, ಆತನು ಈ ಸಾಯಂಕಾಲ ಇಲ್ಲಿಗೆ ಬರು