ಪುಟ:ನಿರ್ಮಲೆ.djvu/೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೨ ನಿರ್ಮಲೆ ಡುವುದು ಎಲ್ಲರಿಗೂ ಸಂತೋಷವನ್ನು ಂಟುಮಾಡಬಹುದು, ಅದೊ ! ನಮ್ಮತ್ತೆಯು ಕೂಗುವಂತಿದೆ. ತೋಟದಲ್ಲಿ ಸ್ವಲ್ಪ ಸುತ್ತಾಡಿಬರಬೇಕು. ನಮ್ಮ ಕೆಲಸಕಾರಗಳು ಬಹಳ ಅವ್ಯವಸ್ಥೆಯಲ್ಲಿರುವುವು, ಈ ಬಿಕ್ಕಟ್ಟಿನಲ್ಲಿ ಧೈಲ್ಯವನ್ನವಲಂಬಿಸುವುದೇ ಅತ್ಯಾವಶ್ಯಕವಲ್ಲವೆ ? ನಿಮ್ಮ:ದೇವರು ನಮಗೆ ಮಂಗಳವನ್ನು ೦ಟುಮಾಡಬೇಕು. [ಒಂದು ಸುರಾಪಾನಗೃಹ, ಕೆಲವು ಶಬಚರು ಪಾನಮಾಡುತ್ತ, ಹೊಗೆಬತ್ತಿಯನ್ನು ಸೇದುತ್ತ ಕುಳಿತಿರುವರು ಎಲ್ಲರಿಗಿಂತಲೂ ಎತ್ತರವಾದ ಪ್ರದೇಶದಲ್ಲಿ ದುರ್ಮತಿಯು ಕಯ್ಯಲ್ಲೊಂದು ಕೊಡತಿಯನ್ನು ಹಿಡಿದು ಕುಳಿತಿರುವನು] ಎಲ್ಲರೂ: ಜಯ ಜಯ! ವಿಜಯ! ಶೂರನೆ! ಜಯ! ಒಬ್ಬನು:ಎಲ್ಲಿ? ಸಾಕು! ಸದ್ದು ಮಾಡಬೇಡಿರಿ, ನಮ್ಮ ಯಜ ಮಾನರು ಹಾಡುತ್ತಾರೆ ಸ್ವಲ್ಪ ಸುಮ್ಮನಿರಿ, ಎಲ್ಲ ರೂ:-ಓಹೋ! ಹಾಡು! ಹಾಡು!! ದುರ್ಮ:ಹಾಡುವುದಕ್ಕೆ ನನಗೆ ಬರುವುದಿಲ್ಲ. ನಾನು ಈ ಆನಂದ ಮಂದಿರದಮೇಲೆ ಒಂದು ಸ್ವಾರಸ್ಯವಾದ ಉಪನ್ಯಾಸವನ್ನು ಬಹಳ ಆಲೋ ಚಿಸಿ ಸಿದ್ಧಪಡಿಸಿರುವೆನು, ಕೇಳಿರಿ! ವ್ಯಾಕರಣ, ವಾಕ್ಯ, ಸ್ವರ, ವ್ಯಂಜನಗಳ ಗೋಳನ್ನು ಕಟ್ಟಿ ಕೊಂಡು ಹಾಳು ಉಪಾಧ್ಯಾಯರು ಒದ್ದಾಡಲಿ! ಬಹಳಸೊಗಸಾದ ದ್ರಾಕ್ಷಾರಸವೇ ಮಾನವನಿಗೆ, ವಿಶೇಷ ಜಾಣೆಯನ್ನು ಕೊಡುವುದೆಂದು ನನ್ನ ಸಿದ್ದಾಂತವು. ಇಂದ್ರ, ಚಂದ್ರ, ದೇವೇಂದ್ರ, ಅಗ್ನಿ, ಇವರು ಹಾಳಾದರು; ಇವರ ತಲೆಯ ಮೇಲೆ ಕುಪ್ಪೆಬೀಳಲಿ! ಆನಂದಮಂದಿರದ ಶೂರರಿಗೆ ಈಪಾಡೊಂದೂ ಬೇಡ ! ಏನನ್ನು ಹೇಳುವಿರಿ? ಹಾ! ಹಾ! ಹಾ!! ಪಾನವು ದಷ್ಯವೆಂದು ಬೋಧಿಸು ವವನು ಪೂರ್ಣವಾಗಿಯೂ ಪಾನಮಾಡಿರಬೇಕು, ಇದೇ ನನ್ನ ಮತವು.