ಪುಟ:ನಿರ್ಮಲೆ.djvu/೨೩

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೪ ನಿರ್ಮಲೆ ಒಬ್ಬನು:-ಇವನ ತಂದೆಯಂತಹವರನ್ನು ನಾನು ನೋಡಿಯೇ ಇಲ್ಲ . ಅವನ ಕಾಲದಲ್ಲಿ, ನಾಯಿ, ಕುದುರೆ, ಸೂಳೆಯರಿಗೆ ಕೊರತೆಯೇ ಇರಲಿಲ್ಲ. ದುರ್ಮ:-ನನಗೂ ವಯಸ್ಸು ಬಂದು * ಆಸ್ತಿಯು ನನ್ನ ಸ್ವಾ ಧೀನಕ್ಕೆ ಬರಲಿ ! ನಮ್ಮಪ್ಪನಿಗೆ ತಕ್ಕ ಮಗನೆನಿಸಿಕೊಳ್ಳದಿದ್ದರೆ, ನನ್ನ ಮಾ ತೇಕೆ ? ಹು ! ಎಲ್ಲರೂ ಪಾನಮಾಡಿರಿ ! ನಿಮಗೇನೂ ಧನವ್ಯಯವಿಲ್ಲ ವಷ್ಟೆ ? ಎಲ್ಲಿ ? ಎಲ್ಲರೂ ಆನಂದದಿಂದ ಪಾನಮಾಡಿ ಸುಖಿಗಳಾಗಿರಿ. (ಎಲ್ಲರೂ ಕುಡಿಯುವರು) [ಪಾನಗೃಹಾಧ್ಯಕ್ಷನು ಬರುವನ್ನು] , ಅಧ್ಯಕ್ಷ'-ಹೊರಗೆ ಇಬ್ಬರು ದೊಡ್ಡ ಮನುಷ್ಯರು ಟಪಾಲಗಾಡಿ ಯಲ್ಲಿ ಒಂದಿರುವರು, ಕಾಡಿನಲ್ಲಿ ಅವರಿಗೆ ದಾರಿಯು ತಪ್ಪಿರುವುದು. ಅವರು ದೇವದತ್ತನ ಎಚಾರವಾಗಿ ಏನನ್ನೂ ಮಾತನಾಡುವಂತೆ ತೋ ರುವುದು. ದುರ್ಮ:- ಓಹೋ ! ಅವರಲ್ಲೊಬ್ಬನು ನಮ್ಮ ನಿರ್ಮಲೆಯನ್ನು ಮದುವೆಯಾಗಲು ಬರಬೇಕಾಗಿರುವ ವರಸಿರಬಹುದು, ಅವರೇನು ಪಟ್ಟಣ ವಾಸಿಗಳಂತೆ ತೋರುವರೋ ? ಅಧ್ಯಕ್ಷ:-ಅಹುದು, ಚಂದ್ರನಗರದವರಾಗಿದ್ದರೂ ಆಗಿರಬಹುದು. - ದುರ್ಮ:- ಅವರನ್ನು ಒಳಕ್ಕೆ ಕರೆ, ಕಣ್ಣು ಮಿಟಿಕಿಸುವುದರೊಳಗೆ ಅವರನ್ನು ಸರಿಪಡಿಸುವೆನು, (ಅಧ್ಯಕ್ಷನು ಹೊರಟುಹೋಗುವನು. ) (ಸ್ನೇಹಿ ತರ ಕಡೆಗೆ ತಿರುಗಿ) ಮಿತ್ರರೆ ! ಅವರು ನಮ್ಮ ಸಮಾಜಕ್ಕೆ ಸೇರಲು ಯೋ ಗ್ಯರಲ್ಲ ವಾದಕಾರಣ, ನೀವು ಹೊರಗೆ ನಡೆಯಿರಿ, ನಾನು ನಿಂಬೆಯಹಣ್ಣಿನ ಹೋಳನ್ನು ಹಿಸುಕಿ, ರಸವನ್ನು ತೆಗೆಯುವಷ್ಟು ಕಾಲದೊಳಗಾಗಿ ನಿಮ್ಮ ಜತೆಯನ್ನು ಸೇರುವೆನು. (ಗುಂಪು ತೆರಳುವುದು.) - ದುರ್ಮ:-(ಸಗತಂ) ನನ್ನ ಮಾವನು ಆರುತಿಂಗಳೊಳಗೆ ನನಗೆ ನಾಯಿ, ತೋಳ, ಕೋಣ ಎಂದು ಏನೇನನ್ನೊ ನಾಮಕರಣಮಾಡಿರುವನು.