ಪುಟ:ನಿರ್ಮಲೆ.djvu/೨೫

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೬ ನಿರ್ಮಲೆ ದುರ್ಮ:-ನೀವು ಬಂದ ದಾರಿಯ ಗೊತ್ತಿಲ್ಲ ವೊ ? ಪ್ರಿಯ:ಇಲ್ಲ ವಯ್ಯ ! ನೀನು ದಯವಿಟ್ಟು ತಿಳಿಸುವುದಾದರೆ... ದುರ್ಮ :- ಇದೇನು, ಸ್ವಾಮಿ ? ನೀವು ಎಲ್ಲಿಂದ ಬಂದಿರೋ, ಎಲ್ಲಿಗೆ ಹೋಗುವಿರೊ, ಎಂಬುದೇ ನಿಮಗೇ ಗೊತ್ತಿಲ್ಲವಾದರೆ, ನಾನು ಮೊದಲು ತಿಳಿಸತಕ್ಕುದು ಒಂದೇ ಒಂದು ವಿಶೇಷ ವಿಷಯವಿದೆ ! ಏನೆನ್ನು ವಿರೊ ? ನಿಮಗೆ ದಾರಿಯು ತಪ್ಪಿ ಹೋಗಿ ದಿಮೆಯು ಹಿಡಿದಿರುವುದು, ಸರಿಯೊ ? ತಿಳಿಯಿತೊ ? ರಾಮ:- ಇದನ್ನು ಹೇಳಲು ನಿಮ್ಮಂತಹ ಸರ್ವಜ್ಞರೇ ಆಗಬೇಕೊ : ದುರ್ಮ:-ಸ್ವಾಮಿ : ನೀವು ಎಲ್ಲಿಂದ ಬಂದಿರೆಂದು ಪ್ರಶ್ನೆ ಮಾಡ ಬಹುದೊ ? ಪ್ರಿಯ:- ನಾವು ಹೋಗಬೇಕಾಗಿರುವ ಮಾರ್ಗವನ್ನು ತೋರಿಸಲು ಈ ಪ್ರಶ್ನೆ ಯು ಆವಶ್ಯಕವಿಲ್ಲ. ದುರ್ಮ:-ಆಗ್ರಹವು ಬೇಡಿ, ಸ್ವಾಮಿ ! ಒಂದು ಪ್ರಶ್ನೆಗೆ ಬದಲು ಇನ್ನೊಂದನ್ನು ಕೇಳುವುದೂ ನ್ಯಾಯವಲ್ಲವೆ ? ಸ್ವಾಮಿ ! ದೇವದತ್ತ ನೆಂಬವನು, ಪೂರೈಕಾಲದ ಪದ್ಧತಿಯನ್ನೇ ಆಚರಿಸುವ ವೃದ್ದನಲ್ಲವೆ ? ವಿಚಿ ತ್ರವಾದ ನಡತೆ, ವಿಕಾರಮುಖ, ಅಲ್ಲವೆ ? ಅವನಿಗೊಬ್ಬಳು ಕುರೂಪಿ ಮಗಳೂ ಸುಂದರನಾದ ಸೋದರಳಿಯನೊಬ್ಬನೂ, ಇರುವರಲ್ಲ ಸ್ವಾಮಿ! ಪ್ರಿಯ:ನಾವು ಅವರನ್ನು ನೋಡಿಲ್ಲ, ಅವನ ಕುಟುಂಬದಲ್ಲಿ ನೀನು ಹೇಳುವಂತೆ ಇಬ್ಬರಿರುವರು. ದುರ್ಮ:- ಅವನ ಮಗಳು, ಉದ್ದಕ್ಕೆ, ಅವಲಕ್ಷಣವಾಗಿ ತೆಳ್ಳಗೆ ಇರುವ ಹರಟೆಯ ಮಲ್ಲಿಯಲ್ಲವೆ ? ಅಳಿಯನು, ಬಹುಸುಂದರಾಕಾರನೂ ಮನೋಹರನೂ, ಯೋಗ್ಯನೂ ಆಗಿ, ಸಲ್ವರಿಗೂ ಮುದ್ದು ಗೆಳಯನಾಗಿರು ವನು. ಅಲ್ಲವೊ ? ರಾಮ, ನಮಗೆ ತಿಳಿದುಬಂದಿರುವುದೇ ಬೇರೊಂದುರೀತಿ, ಮಗಳು