ಪುಟ:ನಿರ್ಮಲೆ.djvu/೨೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೧೭ ಸುಶೀಲೆ, ಸುಂದು ಎಂದೂ, ಅಳಿಯನು ವಿಕಾರ ಸ್ವರೂಪನೆಂದೂ ಅವನ ಅತ್ತೆಯಿಂದಲೇ ಅವನು ಹಾಳಾಗಿರುವರೆಂದೂ ಕೇಳಿರುವೆವು. ದುರ್ಮ:-ಹ, ಹೂಂ!! ಹಾಗಾದರೆ, ಸ್ವಾಮಿ, ನೀವು ಈ ರಾತ್ರಿ ದೇವದತ್ತನ ಮನೆಯನ್ನು ಸೇರುವದಿಲ್ಲ ಎಂದು ನನಗೆ ಧೈಠ್ಯವುಂಟು. ಪ್ರಿಯ:-ಗ್ರಹಚಾರವೆ ? ದುರ್ಮ:-ಅವನ ಮನೆಯ ಮಾರ್ಗವು ಬಹಳದೂರ.ಹಳ್ಳ, ಕೊಳ್ಳ, ಗುಡ್ಡ, ಹಾಳುರಸ್ತೆ, ಕಳ್ಳಕಾಕರಿ ಅವಾಂತರವೂ ಹೆಚ್ಚು ; ಇಂತಹ ರಾತ್ರೆ ಯಲ್ಲಿ ಸಂಚರಿಸುವಂತೆ ಇಲ್ಲವೇ ಇಲ್ಲ, ಅಧ್ಯಕ್ಷನೆ ! ಇವರಿಗೆ ದೇವದ ತನ ಮನೆಯ ದಾರಿಯನ್ನು ಹೇಳು ! ( ಅಧ್ಯಕ್ಷನನ್ನು ನೋಡಿ ಕಣ್ಣನ್ನು ಮಿಟಕಿಸಿ) ಕರಿಕಲ್ಲು ಕುಂಟೆಯ ದೇವದನಮನೆ ತಿಳಿಯಿತೊ ? ಅಧ್ಯಕ್ಷ:-ದೇವದತ್ತನಮನೆಯೆ ? ಸರಿ ! ಸರಿ !! ಸ್ವಾಮಿ ! ನೀವೆ ಲೈ ? ಅದೆಲ್ಲೋ ? ಸಂಬಂಧವೇ ಇಲ್ಲ, ನೀವು ಬೆಟ್ಟದ ತಪ್ಪಲಿಗೆ ಬಂದಿ ರಲ್ಲಾ.ಆಗಲೇ ಡೊಂಕು ಓಣಿಗೆ ಅಡ್ಡವಾಗಿ ಹೋಗಬೇಕಾಗಿತ್ತು. - ರಾಮ;-ಡೊಂಕು ಓಣಿಗೆ ಅಡ್ಡವಾಗಿಯೆ ? ಅಧ್ಯಕ್ಷ: ಅಹುದು, ಅನಂತರ ನೀವು ನಾಲ್ಕು ರಸ್ತೆಗಳೂ ಕೂಡುವ ಸ್ಥಳದವರೆಗೂ ನೇರವಾಗಿ ಹೋಗಬೇಕಾಗಿತ್ತು, ರಾಮ:ನಾಲ್ಕು ರಸ್ತೆಯ ಕೂಡುವಲ್ಲಿಗೇ ? ಅಧ್ಯಕ್ಷ: ಅಹುದು, ಆದರೆ ನೀವು ಅವುಗಳಲ್ಲಿ ಒಂದರಲ್ಲೇ ಪ್ರಯಾಣಮಾಡಬೇಕಾಗಿತ್ತು. ರಾಮ:-ನಿನಗೆ ವಿನೋದವಾಗಿದೆ. ಆದರೆ ನಮಗೆ. ... .. ದುರ್ಮ:ಇಲ್ಲ, ಸ್ವಾಮಿ ! ಆ ಚೌಕಕ್ಕೆ ಹೋಗಿ, ಅನಂತರ ಬಲಕ್ಕೆ ಇದ್ದು, ಎಡಮಗ್ಗಲಿಗೇ ಹೋಗುತ್ತ, ಕೋಡಿಕಲ್ಲಿನ ಗುಡಿಯವ ರೆಗೂ ಪ್ರಯಾಣಮಾಡಬೇಕು, ಅಲ್ಲಿಂದ ಗಾಡಿಯಚಕ್ರದ ಗುರುತನ್ನೆ ಹಿಡಿದು, ದೈವದ ದಿಣ್ಣೆಯ ಹೊಲದವರೆಗೂ ಹೋಗಿ, ಅಲ್ಲಿ ಜ್ಞಾಪಕವಾಗಿ,