ಪುಟ:ನಿರ್ಮಲೆ.djvu/೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೮ ನಿರ್ಮಲೆ ಶ ಮರೆಯಬೇಡಿ, ಮೊದಲು ಬಲಕ್ಕೂ, ಆಮೇಲೆ ಎಡಕ, ಆನಂತರ ಹಿಂದಕ್ಕೂ, ಪುನಃ ಬಲಕ್ಕೂ ಎಡಕ್ಕೂ ತಿರುಗಿ ಹಳೇ ಕಾರ್ಖಾನೆಯು ಸಿಕ್ಕುವವರಿಗೂ ಪ್ರಯಾ...... ರಾಮ: ಅಯ್ಯೋ ! ತಮಾಷೆಯೆ ? ಗ್ರಹಚಾರವೇಸರಿ, ಇಷ್ಟು ಶ್ರಮಪಟ್ಟರೆ, ದಕ್ಷಿಣಮೇರುವನ್ನು ಕಂಡುಹಿಡಿಯಬಹುದು. ಪ್ರಿಯ'-ರಾಮವರ್ಮನೆ ! ಮುಂದೇನುಗತಿ ? ರಾಮ:- ಈ ಮಂದಿರದ ಅಧ್ಯಕ್ಷನು ನಮಗೆ ಈ ರಾತ್ರಿ ಇಲ್ಲಿಯೇ ಇರಲು ಅವಕಾಶವನ್ನು ಕೊಟ್ಟ ರೂ, ನಮಗೆ ಬೇಕಾದ ಆನುಕೂಲ್ಯಗಳೆ ಲ್ಲವೂ ದೊರೆವಂತೆ ತೋರುವುದಿಲ್ಲ. ಅಧ್ಯಕ್ಷ:- ಸ್ವಾಮಿ ! ಈ ಮಂದಿರದಲ್ಲಿ ಈಗ ಒಂದೇ ಒಂದು ಕೋಣೆಯು ಬರಿದಾಗಿದೆ. ದುರ್ಮ:-ಆ ಹೊಸಬರು ಅಲ್ಲಿರುವರೆಂದು ನನಗೆ ನೆನಪ್ರ, (ಒಂದು ಘಳಿಗೆ ಸುಮ್ಮನಿದ್ದು) ಸರಿ, ಸರಿ, ನನಗೆ ಒಂದುಮಾರ್ಗವು ಸರಿಯಾಗಿ ರುವಂತೆ ಕಾಣುವುದು, ಇವರಿಗೆ ನಿನ್ನ ಪತ್ನಿ ಯು ಒಲೆಯಹತ್ತಿರ ಸ್ಥಳ ವನ್ನು ಕೊಡಲಾರಳೆ ? ಅಲ್ಲಿ ಮೂರುಕುರ್ಚಿ, ಒಂದುಸೀಸೆ - ರಾಮ:-ಪ್ರಿಯಸೇನ ! ಒಲೆಯ ಬಳಿಯಲ್ಲಿ ಮಲಗುವುದು-ಥ ! ಸರ್ವಾಸಹ್ಯ ! : ಪ್ರಿಯ:-ನಿನ್ನ ಮೂರುಕುರ್ಚಿ, ಸೀಸೆಗಳಿಗೆ, ಬೆ೦ಕಿಬೀಳಲಿ, ನಮಗೆ ಸರಿಯಾದ ಉತ್ತರವನ್ನು ಕೊಡು' ದುರ್ಮ:ಹಾಗೆ ? ಸರಿ, ಹಾಗಾದರೆ, ಆಲೋಚಿಸುವ ! ನೀವು ಒಂದು ಮೈಲಿದೂರ ನಡೆದು ಕ್ಷೇಮವಾಗಿ ಸುಖನಿವಾಸ' ಕ್ಕೇಕೆ ಹೋಗಬಾರದು ? ಆ ಗುಡ್ಡದ ಮೇಲಿರುವ ಸುಖನಿವಾಸ, ಈ ಸುತ್ತಿನಲ್ಲಿ ಅಂತಹ ಪ್ರಸಿದ್ದಿ ಯನ್ನು ಹೊಂದಿರುವ ಭೋಜನಶಾಲೆಯು ಬೇರೊಂದಿಲ್ಲ. ಪಿ ಗು:-ಹಾಗಾದರೆ, ಈ ದಿನದ ರಗಳೆಯು ಕೊನೆಗಾಣುವಂತಿದೆ.