ಪುಟ:ನಿರ್ಮಲೆ.djvu/೨೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೧೯ ಅಧ ಕ್ಷ:- ರಹಸ್ಯವಾಗಿ) ದುರ್ಮತಿಯೆ, ನಿಮ್ಮ ಮಾವನ ಮನೆಗೆ ಇವರನ್ನು ಅದು ಭೋಜನಶಾಲೆಯೆಂಬ ಭ್ರಾಂತಿಯನ್ನು ಹುಟ್ಟಿಸಿ. ಕಳುಹಿಸುವೆಯೇನು ? ದುರ್ಮ:-ಹೊ೦, ಹುಚ್ಚಾ, ಕೂಗಬೇಡ, ಅವರೇ ಗುಟ್ಟನ್ನು ಗೊತ್ತುಮಾಡಿಕೊಳ್ಳಲಿ, (ಪ್ರಯಾಣಿಕರನ್ನು ಕುರಿತು) ನೀವು ನೇರವಾಗಿ ರಸ್ತೆ ಯಲ್ಲಿ ಹೋದರೆ, ರಸ್ತೆಯ ಪಕ್ಕದಲ್ಲಿ ಹಳೆ ಕಟ್ಟಡವೊಂದು ಸಿಕ್ಕುವುದು. ಜಿಂಕೆಯತಲೆ, ಕೋಡುಗಳು, ಮನೆಯಮೆಲಿದೆ ಬೋರ್ಡು' ಇಲ್ಲ, ಅದೇ ಆ ಭೋಜನಶಾಲೆಗೆ ಗುರುತು, ಅ೦ಗಳಕ್ಕೆ ಗಾಡಿಯನ್ನು ಹೊಡಿಸಿ ಬಹುದು. ಒಂದು ಕೂಗನ್ನು ಹಾಕಿದರೆ ಪ್ರಿಯ:-ಅಯ್ಯಾ ! ನಿನಗೆ ನಾವು ಕೃತಜ್ಞರಾಗಿರುವೆವು. ಇನ್ನು ಸೇವಕರು ದಾರಿಯನ್ನು ತಪ್ಪಿಸಿಕೊಂಡು ಹೋಗುವಂತಿಲ್ಲವಲ್ಲವಷ್ಟೆ ? ದುರ್ಮ:-ಇನ್ನು ಆ ಸಂಭವವಿಲ್ಲ. ನಾನು ಹೇಳುವುದನ್ನು ಕೇಳಿರಿ. ಸುಖನಿವಾಸದ ಅಧ್ಯಕ್ಷನು ಹಣವಂತನು. ಈಗ ಆ ಕೆಲಸವನ್ನು ಬಿಟ್ಟು ಬಿಡುವುದರಲ್ಲಿರುವನು. ನಮ್ಮಂತೆಯೇ ಗಣ್ಯವೆನಿಸಿಕೊಳ್ಳಲು, ಬಹಳ ಆಶ ಪಡುತ್ತಿರುವನು, ಹಿ ! ಹಿ !! ನಿಮ್ಮ ಸರಿಸಮಾನನಂತೆ, ನಿಮ್ಮ ಜತೆಯಲ್ಲೇ ಇರಲು ಪ್ರಯತ್ನಿ ಸುವನು. ನೀವು ಅವನ ಹರಟೆಯನ್ನೆ ಕೇಳುತ್ತ ಕುಳಿ ತರ, ತನ್ನ ತಾಯಿಯು ಶ್ರೀಮಂತಳಾಗಿದ್ದಳೆಂದೂ ತನ್ನ ಚಿಕ್ಕಪ್ಪನು ನ್ಯಾಯಾ ಧೀಶನಾಗಿದ್ದನೆಂದೂ ಹೇಳಿಕೊಳ್ಳಲು ಮೊದಲು ಮಾಡುವನು. ಅಧ್ಯಕ್ಷ: ಅಹುದು, ಬಲು ತಂಟೆಯ ಮುದುಕ, ಆದರೂ, ಈ ಸುತ್ತಿನಲ್ಲಿ ಅವನಷ್ಟು ಉತ್ತಮವಾದ ಭೋಜನಶಾಲೆಯನ್ನಿಟ್ಟಿರುವನು ಇನ್ನೂ ೬ನಿಲ್ಲ. ಅವನಲ್ಲಿರುವಂತಹ ದ್ರಾಕ್ಷಾರಸ ಮತ್ತು ತಿಂಡಿಗಳು, ಮತ್ತೊ ೬ನಲ್ಲಿ ಇಲ್ಲವೇ ಇಲ್ಲ.

  • ರಾಮ:-ನಮಗೆ ಬೇಕಾದ ಸೌಕಠ್ಯಗಳನ್ನು ಒದಗಿಸಿ ಕೊಟ್ಟರೆ ಸಾಕು, ಅವನ ರಗಳೆಯು ನಮಗೇಕೆ ? ನಾವು ಬಲಕ್ಕೆ ತಿರುಗಬೇಕೆಂದು