ಪುಟ:ನಿರ್ಮಲೆ.djvu/೨೯

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨ ನಿರ್ಮಲೆ ಹೇಳಿದೆಯಲ್ಲವೆ ? ದುರ್ಮ: ಇಲ್ಲ, ನೇರವಾಗಿ ಹೊರಡಿರಿ, ಸ್ವಾಮಿ ! ನಾನೇ ಸ್ವಲ್ಪ ದೂರ ಮಾರ್ಗವನ್ನು ತೋರಿಸುವೆನು, (ಅಧ್ಯಕ್ಷನನ್ನು ನೋಡಿ) ಹೂಂ ಹೂಂ ! (ಅವರ ಸಂಗಡ ಹೋಗುವರು.) ಅಧ್ಯಕ್ಷ-ಆಹಾ ! ಎಂತಹ ಮಧುರ , ವಿನೋದವೂ, ಮೃದು ವೂ, ಆದ ಹೃದಯ ! ಮನೆಹಾಳ ! ದುರ್ಮಾರ್ಗ ! ನೀಂತೆ !! ಪಾಪಿ !! (ತೆರಳುವರು) ಎರಡನೆಯ ಅಂಕ [ದೇವದತ್ತನಮನೆದೇವದತ್ತನು ಮೂರುನಾಲ್ಕು ಮಂದಿ ಮಂಕರಾದ ಸೇವಕರೊಡನೆ ಬರುವನು. ದೇವ:-ಭೋಜನಕಾಲದಲ್ಲಿ ನೀವು ಏನೇನನ್ನು ಮಾಡಬೇಕೆಂದ ನಾನು ಈ ಮೊದಲೇ, ಮೂರು ದಿನಗಳಿಂದಲೂ, ಹೇಳಿಕೊಡುತ್ತಲಿದ್ದ ರೂ ಚೆನ್ನಾಗಿ ತಿಳಿದುಕೊಳ್ಳಲಿಲ್ಲ ಎಲ್ಲ ? ನೀವು ಇರಬೇಕಾದ ಸ್ಥಳ, ಮಾಡಬೇ ಕಾದ ಉದ್ಯೋಗ, ಎಲ್ಲವೂ ತಿಳಿದಿರುವುದೊ ? ಮನೆಯನ್ನು ಬಿಟ್ಟು ಅಡ್ಡಾ ಡದಿದ್ದರೂ, ಮನೆಗೆ ದೊಡ್ಡವರು ಬಂದಾಗ ಯಾವರೀತಿ ನಡೆಯಬೇಕೆಂ ಬುದು, ನಿಮಗೆ ಚೆನ್ನಾಗಿ ಅನುಭವವಿರುವಂತೆ ತೋರಡಿಸುವಿರಲ್ಲವೆ ? ಎಲ್ಲ ರೂ:-ಓ ! ಓಹೋ!! ದೇವ:--ನೀವು, ನಾನುಮುಂದೆ ತಾನುಮುಂದೆ ಎಂದು, ಓಡಿಬಂದು ಬಾಯಿ ಬಿಟ್ಟು ಕೊಂಡು ನಿಂತಿರಬಾರದು, ಅಧವಾ ಬೆದರಿದ ಮೊಲಗಳು ಹೊಲದಲ್ಲಿ ಓಡುವಂತೆ ಓಡಲೂ ಬಾರದು. ಎಲ್ಲ ರೂ:-ಇಲ್ಲ! ಇಲ್ಲ !! ದೇವ:-ಚಂಡಗುಪ್ತನೆ! ನಿನ್ನನ್ನು ಹೊಲದ ಕೆಲಸದಿಂದ ತಪ್ಪಿಸಿ ಇಲ್ಲಿಗೆ ಕರೆತಂದಿರುವೆನು, ನಿನಗೇ ಮನೆಯ ಪಾರುಪತ್ಯವನ್ನು ಕೊಟ್ಟಿರುತ್ತೇನೆ. ನೀನು ಯಾವಾಗಲೂ ನನ್ನ ಮಗ್ಗಲಿನಲ್ಲೇ ಇರಬೇಕು, ಉಳುವ ಕೆಲಸದಲ್ಲಿದ್ದ