ಪುಟ:ನಿರ್ಮಲೆ.djvu/೩೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೨೨ ನಿರ್ಮಲೆ ಚಂಡ:-ಹಾಗಾದರೆ, ಸಾಮಿ ! ಮಗ್ಗಲಲ್ಲಿರುವ ಓಣಿಗೆ ಹೋಗಿ ಒಂದು ರೊಟ್ಟಿಯನ್ನು ತಿಂದು ಹಸಿವನ್ನು ಕಳೆದುಕೊಂಡು ಬರುವೆನು. ದೇವ:--ನೀನು ಯಾವಾಗಲೂ ಹರಟೆಯಮಲ್ಲ ! ಇರಲಿ, ನಾನು ಭೋಜನಕಾಲದಲ್ಲಿ ಏನಾದರೊಂದು ಕಥೆಯನ್ನು ಹೇಳಿದರೆ, ಇಲ್ಲ ವೆ, ತಮಾ ಷೆಯಾಗಿ ಮಾತನಾಡಿದರೆ, ನಮ್ಮಂತೆಯೇ ನೀವೂ ಕೇಕೇ ಹಾಕಿಕೊಂಡು ನಗಬಾರದು. ಚಂಡ:-ಹಾಗಾದರೆ, ಸ್ವಾಮಿ ! ದಯವಿಟ್ಟು ಆ ಗಂಗೆಯ ಕಥೆ ಯನ್ನು ಮಾತ್ರ ಹೇಳಬೇಡಿರಿ, ದೇವರಾಣೆ ! ನೀವೇನಾದರೂ, ಆ ಕಥೆ ಯನ್ನು ಹೇಳಿದರೆ, ನಾನು ನಗದೆ ಇರಲು ಆಗುವುದೇ ಇಲ್ಲ, ನಾವು ಇಪ್ಪತ್ತು ವರ್ಷಗಳಿಂದಲೂ ಆ ಕಥೆಯನ್ನು ಕೇಳಿ ಕೇಳಿ, ಬೇಕಾದಷ್ಟು ನಕ್ಕು ನಕ್ಕು ಸಾಕಾಗಿದ್ದರೂ, ಅದನ್ನು ನೆನೆಸಿಕೊಂಡಾಗಲೆಲ್ಲಾ ನಗುವು ಬರುವುದು. ಹಾ! ಹಾ! (ನಗುವನು. ) ಆ ದೇವ - ಹಾ ! ಹಾ ! ಹಾ ! ಆ ಕಥೆಯು ಬಹು ಸ್ವಾರಸ್ಯವಾ ಗಿದೆಯಲ್ಲವೆ ? ಹೋಗಲಿ, ಅದೊಂದಕ್ಕೆ ಮಾತ್ರ ನೀನು ನಗಬಹುದು. ಇನ್ನೇನು ? ಆದರೂ ನೀನು ಬಹಳ ಎಚ್ಚರಿಕೆಯಿಂದಿರಬೇಕು, ಮರೆಯ ಬೇಡ, ಒಳ್ಳೆಯದು, ಎಲ್ಲಿ ? ನಮ್ಮ ಅತಿಥಿಗಳಲ್ಲಿ ಯಾರಾದರೊಬ್ಬರು, ಒಂದು ಬಟ್ಟಲು ಪಾನಕವನ್ನು ಅಪೇಕ್ಷಿಸುವರೆಂದು ಊಹಿಸುವ ! (ಚಂಡ ನನ್ನು ನೋಡಿ) ಒಂದು ಬಟ್ಟಲು ಪಾನಕವನ್ನು ಕೊಡುವಿರಾ ? (ಚೆ ೦ಡನು ಸುಮ್ಮನೆ ನಿಂತಲ್ಲೇ ನಿಂತಿರುವನು) ಹೂ, ಅದೇಕೆ, ಚಲಿಸದೆ ಸುಮ್ಮನಿರುವೆ ? - ಚಂಡ:-ಇದು ನಕಲಿಯ ವಿಷಯ ! ನಿಜವಾಗಿ ಎಲ್ಲರೂ ಊಟ ಕ್ಕೆ ಕುಳಿತುಕೊಳ್ಳಲಿ, ಆಗ ನಾನು ಪಾದರಸದಂತೆ, ಸಿಂಹದಂತೆ, ಧೈತ್ಯ ವಾಗಿ ಓಡಾಡುವೆನು, ಹೆದರುವುದೇ ಇಲ್ಲ : ದೇವ: ಏನು, ಯಾರೂ ಚಲಿಸುವ ಹಾಗಿಲ್ಲ ವೋ ? ೧ನೆಯ ಸೇವಕ:-ನಾನು ಈ ಸ್ಥಳವನ್ನು ಬಿಟ್ಟು ಹೊರಡಕೂಡದಷ್ಟೆ?