ಪುಟ:ನಿರ್ಮಲೆ.djvu/೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ | ೨೩ ೬ ನೆಯ ಸೇವಕ:- ಅದು ನನ್ನ ಕೆಲಸವಲ್ಲವಲ್ಲ ? ೩ ನೆಯ ಸೇವಕ:-ಅದೇನೆ, ನನ್ನ ಕೆಲಸವಲ್ಲವೇ ಅಲ್ಲ. ಚಂಡ: ಸರಿ, ಅದು ಖಂಡಿತವಾಗಿಯೂ ನನ್ನ ಕೆಲಸವಲ್ಲ. ದೇವ -ಎಲೋ, ಮುಗ್ಧಾಳರಾ ! ನಿಮ್ಮ ಕೆಲಸವೇ ನಿಮಗೆ ತಿಳಿ ಯದೆ ಹೊಡೆದಾಡುತ್ತಿರುವಿರಾ ? ಸರಿ! ಭೋಜನಕ್ಕೆ ಕುಳಿತವರು ಉಪವಾಸ ಮಾಡಬೇಕಾಗುವುದು ! ಅದೇನು ? ಅಂಗಳಕ್ಕೆ ಗಾಡಿಯು ಬಂದಂತಿದೆ. ಗಾಂಪರಾ : ನಿಮ್ಮ ನಿಮ್ಮ ಕೆಲಸಕ್ಕೆ ನೀವು ಹೊರಡಿರಿ, ನಾನು ಹೋಗಿ ಬಾಗಿಲಿನಲ್ಲಿ ನನ್ನ ಬತ್ರನ ಮಗನನ್ನೂ ಅವನ ಸ್ನೇಹಿತನನ್ನೂ ಇದಿ ರ್ಗೊ೦ಡು ಕರೆತರುವೆನು. (ದೇವದತ್ತನು ಹೊರಟುಹೋಗುವನು) ಚಂಡ:-ಭಗವಂತನಾಣೆ ! ನನ್ನ ಕೆಲಸವೇನೆಂಬುದೇ ನನಗೆ ಮರೆ ತುಹೋಯಿತು. ೧ ನೇ-ನನ್ನ ಆ ಹಾಳು ಜಾಗವು ಯಾವದಪ್ಪಾ ? ೨ ನೇ:-ನನ್ನ ಕೆಲಸವೇನು ? ಎಲ್ಲೆಲ್ಲೂ ಇರಬೇಕಾದುದಲ್ಲವೆ? ಸು, ಸರಿ, ನನಗೆ ಇಷ್ಟ ಬಂದಲ್ಲಿ ಇರುವೆನು. [ಸೇವಕರು ಹೆದರಿದವರಂತೆ ಸಿಕ್ಕು ಸಿಕ್ಕಲ್ಲಿಗೆ ದಿಕ್ಕೆಟ್ಟು ಓಡಿಹೋಗುವರು, ಒಬ್ಬ ಸೇವಕನು ಕಯ್ಯಲ್ಲಿ ಲಾಂದ್ರವನ್ನು ಹಿಡಿದು, ರಾಮವರ್ಮ, ಪ್ರಿಯಸೇನ ರೂಟನೆ ಬರುವನು } ಸಂಗಡ ಬಂದ ಸೇವಕನು:- ಸ್ವಾಮಿ ! ಹೀಗೆ ದಯಮಾಡಬೇಕು. ಪ್ರಿಯ:- ಈ ದಿನದ ರಗಳೆಗಳು ಕೊನೆಗೊಂಡಂತಾಯಿತು. ಈಗ ಲಾದರೂ ಸುಖಪ್ರಾಪ್ತಿಯಾಗಬಹುದಲ್ಲವೆ ? ರಾಮವರ್ಮನೆ ! ಈ ಭೂ ಜನ ಶಾಲೆಯು ಬಹಳ ಚೊಕ್ಕಟವಾಗಿದೆ. ಹಳೆಯದಾದರೇನು ? ಮನ ಸ್ಥಿಗೆ ಹರ್ಷವನ್ನು ಕೊಡುತ್ತಿದೆ. ರಾಮ:-ಇದೇ, ದೊಡ್ಡ ದೊಡ್ಡ ಮಂದಿರಗಳ ಗತಿ ? ಆಡಂಬರ