ಪುಟ:ನಿರ್ಮಲೆ.djvu/೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೪ ನಿರ್ಮಲೆ ದಿಂದ ಯಜಮಾನನು ದರಿದ್ರನಾದರೆ, ಕೊನೆಗೆ ಆ ಮನೆಯು ಪ್ರಯಾ ಬೇಕರಿಂದ ತೆರಿಗೆಯನ್ನು ತೆಗೆದುಕೊಳ್ಳುವ ಬಡಭೋಜನಶಾಲೆಯಾಗುವುದು. ಪ್ರಿಯ:-ಅಹುದು, ಈ ಶೃಂಗಾರಗಳಿಗೆಲ್ಲಾ ನಾವು ತಾನೆ ದುಡ್ಡನ್ನು ತೆರಬೇಕು ಎಷ್ಟೋ ಭೋಜನಶಾಲೆಗಳನ್ನು ನಾನು ನೋಡಿ ರುವೆನು, ಬಿಳಿಯಕಲ್ಲಿನ ಮೇಜಾಗಳು, ಸೋಫಾಗಳು, ತಸ್ಸಿರುಗಳು, ಕುರ್ಚಿಗಳು, ಏನೇನೋ ಇರುವುವು. ಅದೆಲ್ಲಾ ನಮಗೆ ಉಪಯೋಗ ವಿಲ್ಲದಿದ್ದರೂ ನಾವು ಕೊಡಬೇಕಾಗುವ ಹಣವು ಮಾತ್ರ ಬಹಳ ಹೆಜ್ಜೆ ಆಗುವುದು, ರಾಮ:-ಪ್ರಿಯಸೇನ ! ಪ್ರಯಾಣಿಕರು ಎಲ್ಲಿಗೆ ಹೋದರೂ ದಂಡ ವನ್ನು ತೆರಲೇಬೇಕು, ಭೇದವೇನೆಂದರೆ, ಉತ್ತಮವಾದ ಭೋಜನಶಾಲೆ ಗಳಲ್ಲಿ ದುಡ್ಡನ್ನು ತೆಗೆದುಕೊಂಡರೂ, ಒಳ್ಳೆಯ ಪದಾರ್ಥಗಳನ್ನು ಕೊಡು ತಾರೆ, ಕಷ್ಟವಿಲ್ಲ. ಕೆಟ್ಟ ಸ್ಥಳಗಳಲ್ಲಿ ದುಡ್ಡನ್ನು ತೆಗೆದುಕೊಂಡರೂ ಹೊಟ್ಟೆಗೆ ಹಾಕದೆ ಕಳುಹಿಸುತ್ತಾರೆ. ಅಷ್ಟೇ ತಾರತಮ್ಯವು. - ಪ್ರಿಯ:-ನೀನು ಭೋಜನಶಾಲೆಗಳಲ್ಲಿಯೇ ಬಳೆದವನು. ಆದರೂ. ನನಗೊಂದು ವಿಷಯವು ಪರಮಾಶ್ಚರವಾಗಿದೆ ನಿನಗೆ ಜಾಣೆಯೂ, ಬೇಕಾ ದಷ್ಟು ಅವಕಾಶವೂ ಇದ್ದರೂ ನೀನೇಕೆ ಸ್ತ್ರೀಸಮುದಾಯದಲ್ಲಿ ಧೈಯ್ಯಹೀನ ನಾಗಿ ವರ್ತಿಸುವಿ ? - ರಾಮ:- ಅದೇ ನನಗೆ ಬರುವ ಗೋಳು, ನೀನೇ ಹೇಳು ? ನಾನು 'ಕಾಲೇಜು, ತಪ್ಪಿದರೆ, ಭೋಜನಶಾಲೆ, ಇವುಗಳಲ್ಲೇ ಬಳೆದಿರುತ್ತೇನೆ. ನನಗೆ ಸುಂದರಿಯರಾದ ಸ್ತ್ರೀಯರಲ್ಲಿ ವಿಶೇಷ ಬಳಿಕೆಗೆ ಅವಕಾಶವೇ ಇಲ್ಲ. ನನ್ನ ತಾಯಿಯಲ್ಲದೆ, ಬೇರೊಬ್ಬ ಗೌರವಸ್ಥಳಾದ ಸ್ತ್ರೀಯೊಡನೆ ನಾನು ಎಂದೂ ಇರಲಿಲ್ಲ, ನನಗೆ ಧೈರ್ಯವು ಹೇಗೆ ಬಂದೀತು ? ಇನ್ನೊ ಂದು ಬಗೆಯ ಸ್ತ್ರೀಯರಲ್ಲಿ ನಿನಗೆ ತಿಳಿದಿದೆಯಷ್ಟೆ ? ಪ್ರಿಯ:-ಆ ಜನರಲ್ಲಿ ಓಹೋ! ಹೊ! ನಿನ್ನ ಹಾವಳಿಯೇ ಹಾವಳಿ