ಪುಟ:ನಿರ್ಮಲೆ.djvu/೩೪

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ ೨೫ ರಾಮ:-ಅವರು ನಮ್ಮವರಷ್ಟೆ ? ಪ್ರಿಯ: ಮಾನಿಷ್ಟರಾದ ಕುಲಸ್ತ್ರೀಯರ ಸಮುದಾಯಲ್ಲಿ, ಅದೇಕೆ ನೀನು ಹುಚ್ಚು ಹುಚ್ಚಾಗಿ ಬೆದರಿ ನಡುಗುವಿ ? ಅವರ ಕಣ್ಣೆದುರಿನಿಂದ ತಪ್ಪಿಸಿ ಕೊಂಡು ಓಡಲು ಸರ್ವಪ್ರಯತ್ನವನ್ನೂ ಮಾಡುವಂತೆ ಕಾಣಿಸುವೆಯಲ್ಲವೆ ? ಅದೇಕೆ ? ರಾಮ: ಏತಕ್ಕೆಂದು ಹೇಳಲಿ ? ಅವರೆದುರಿಗೆ ಇರುವುದು ನನಗೆ ಹಿತಕರವಾಗಿರುವುದಿಲ್ಲ, ಆದುದರಿಂದಲೇ ಓಡಿಹೋಗಲು ಪ್ರಯತ್ನ ಪಡು ತೇನೆ. ಸ್ತ್ರೀಸಮಹದಲ್ಲಿ ಮನವನ್ನು ತ್ಯಜಿಸಬೇಕೆಂದು ಎಷ್ಟೆಷ್ಟೋ ಪ್ರಯತ್ನ ಪಡುತ್ತೇನೆ. ಎಷ್ಟೋ ದೃಢಸಂಕಲ್ಪ ಮಾಡುತ್ತೇನೆ, ಆದರೆ ಸ್ತ್ರೀಯೊಬ್ಬಳ ಕಡೆಗಣ್ಣಿನ ನೋಟವು ನನ್ನ ಮೇಲೆ ಬಿದ್ದರೆ, ನನ್ನ ಸಂಕಲ್ಪವು ಹಾರಿಹೋಗುವುದು ; ಬಾಯಿಂದ ಮಾತೇ ಹೊರಡುವುದಿಲ್ಲ. ಪೋಕರಿ ಯಾದವನು ವಿನಯಸಂಪನ್ನ ನಂತೆ ನಟಿಸಬಹುದು, ವಿನಯಸಂಪನ್ನನು ಪೋಕರಿಯಂತೆ ನಟಿಸಲು ಬಹಳ ಕಷ್ಟವಲ್ಲವೆ ? ಅದು ಎಂದಿಗೂ ಸಾಧ್ಯ ವಲ್ಲ ವೆಂದು ನನಗೆ ತೋರುವುದು. ಪ್ರಿಯ:-ಭೋಜನಶಾಲೆಯ ಚಾಕರಳೊಡನೆಯೂ, ಮುಸುರೆಯ ನ್ನು ತೊಳೆಯುವಳೊಡನೆಯ, ಕೋಣನಮು೦ದೆ ಕಿನ್ನರಿ ಬಾರಸಿದರು. ಎನ್ನುವಂತೆ, ಏನೇನೊ ಸೊಗಸೂ ಸ್ವಾರಸ್ಯವೂ ಆದ ವಿಷಯಗಳನ್ನು ಹೇಳುವಿಯಲ್ಲವೆ ? ಅದರಲ್ಲಿ ಅರ್ಧಭಾಗವನ್ನಾ ದರೂ, ಘನತೆಯುಳ್ಳ ಸ್ತ್ರೀ ಯರೊಡನೆ ಹೇಳಿದರೆ.... ... .. - ರಾಮ:-ಅದೇ ನನ್ನ ಕಯ್ಯಲ್ಲಾಗದ ಕಾರ್ಯವು, ಅವರನ್ನು ಕಂಡೊಡನೆಯೇ ನನಗೆ ರಕ್ತಚಲನೆಯು ನಿಧಾನವಾಗುವುದು, ಧೂಮ ಕೇತು ಜ್ವಾಲಾಮುಖಿಗಳೊಡನೆಯಾದರೂ ಮಾತನಾಡುವೆನು, ಅಲಂಕೃತ ೪ಾಗಿ ಶೋಭಿಸುವ ಸಭ್ಯಸ್ತ್ರೀಯೊಡನೆ ಒಂದು ಮಾತನ್ನೂ ಆಡಲಾರೆನು.