ಪುಟ:ನಿರ್ಮಲೆ.djvu/೩೭

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ළු ನಿರ್ಮಳೆ ಬೆಳಗಾದ ಕೂಡಲೇ ಈ ಕೊಳಕು ಬಟ್ಟೆಯನ್ನು ತೆಗೆದುಹಾಕಬೇಕು ನನಗೆ ಇದರಿಂದ ಬಹಳ ನಾಚು ಕೆಯಾಗುವುದು. ದೇವ:-(ಸ್ವಗತ)ಇವನೇ ರಾಮವರ್ಮನಿರಬಹುದು, (ಪ್ರಕಾಶ೦) ರಾಮರ್ಮನೆ, ನೀನು ಇಲ್ಲಿ , ಸರ್ವಸ್ವತಂತ್ರವನ್ನೂ ವಹಿಸಿ ಇರಬಹುದು. ನಿನ್ನ ಮನೆಯೆಂದೇ ಭಾವಿಸು. ಪ್ರಿಯ:-(ರಾಮವರ್ಮನಿಗೆ) ನೀನು ಹೇಳಿದುದೇಸರಿ, (ಮೊದ ಲೇಟು ಬಲವಾದರೆ, ಅರ್ಧಜಯ' ಎಂಬುದೇ ನಿಜ, ನಾನೂ ಬಿಳೀಜರ ತಾರಿಯಬಟ್ಟೆಯಿಂದಲೇ ಕಾರಾರಂಭಮಾಡುವೆನು. - ದೇವ-ರಾಮವರ್ಮ ಪ್ರಿಯಸೇನರೆ ! ನೀವು ಸ್ವಲ್ಪವೂ ಸಂಕೋ ಚಪಡಲಾಗದು, ಇದು ಸ್ವಚ್ಛಾವಿಹಾರದ ಸುಖನಿವಾಸವು, ಇಲ್ಲಿ ನಿಮ್ಮ ಮನವೊಪ್ಪುವಂತೆ ನೀವು ವರ್ತಿಸಬಹುದು' ರಾಮ:-(ಪ್ರಿಯಸೇನನಿಗೆ) ನಾವು ಮೊಟ್ಟ ಮೊದಲೇ ಕದನವನ್ನು ಭಯಂಕರವಾಗಿ ಆರಂಭಿಸಿದರೆ, ಕದನವು ಮುಗಿಯುವುದರೊಳಗಾಗಿ ಯುದ್ಧ ಸಾಮಗ್ರಿಗಳು ಮುಗಿಯಬಹುದು, ಗೆಲುವ ಸಂಭವವಿಲ್ಲದೆ ಓಡಿ ಹೋಗಬೇಕಾದರೆ, ಜರತಾರಿಯ ಉಡುಪು ಸಾಹಾಯ್ಯ ಮಾಡುವುದ ರಿಂದ ಅದನ್ನು ಹಾಗೆಯೆ ಕಾಪಾಡಿಟ್ಟಿರುತ್ತೇನೆ. ದೇವ:-ಏನು, ಏನು ? ಯುದ್ಧದಿಂದ ಓಡಿಹೋಗುವ ವಿಷಯ ವನ್ನು ಕುರಿತು ಮಾತನಾಡಿದಿರಲ್ಲ ನೆ ? ನಿಮ್ಮ ಮಾತನ್ನು ಕೇಳಿ ನನಗೆ, ನಾವು ದಿಂಬ ಕೋಟೆಯನ್ನು ಮುತ್ತಿಗೆ ಹಾಕಲು ಹೊರಟಾಗ, ಸೇನಾನಾಯಕ ನಾಗಿದ್ದ ವೀರವರ್ಮನ ವಿಷಯವು ನೆನಪಿಗೆ ಬಂತು. ಅವನು ಸೈನಿ ಕರನ್ನು ಬರಮಾಡಿ. ... ... .. ರಾಮ:-(ಪ್ರಿಯಸೇನನಿಗೆ) ನಾನೂ ಊದಾಬಣ್ಣದಂಗಿಯನ್ನು ತೊಟ್ಟರಾಗದೋ ? ದೇವನಾನು ಹೇಳುವುದನ್ನು ಕೇಳಿರಿ, ಅವನು ಮೊದಲು ಸೈನಿ