ಪುಟ:ನಿರ್ಮಲೆ.djvu/೩೮

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ನಿರ್ಮಲೆ 9 ಕರನ್ನು ಬರಮಾಡಿ, ಸೈನ್ಯದಲ್ಲಿ ಸುಮಾರು ೫,೦೦೦ ಜನರಿದ್ದರು-ಏನು... ಪ್ರಿಯ:-( ರಾಮವರ್ಮನಿಗೆ) ಆಗದು. ಅದು ನಿನಗೆ ಚೆನ್ನಾಗಿ ಒಪ್ಪುವುದಿಲ್ಲ. ದೇವ: – ಚಿಃ ! ನಾನು ಹೇಳುವುದನ್ನೇ ಕೇಳುವುದಿಲ್ಲ ವಲ್ಲ ! ಸ್ವಾಮಿ ಇಲ್ಲಿ ಕೇಳಿರಿ, ನಾನು ಹೇಳುತ್ತಿದ್ದಂತೆ ಸುಮಾರು ೫,೦೦೦ ಜನರಿದ್ದ ಸೈನ್ಯವೆಲ್ಲವನ್ನೂ ಬರಮಾಡಿ.. ರಾಮ: -(ದೇವನ ಮಾತನ್ನು ಲಕ್ಷಿಸದೆ, ಪ್ರಿಯಸೇನನನ್ನು ಕುರಿತು) ಹುಡುಗಿಯರು, ಒಳ್ಳೆ ಬಟ್ಟೆಯನ್ನು ಹಾಕಿಕೊಂಡಿರುವರನ್ನು ಕಂಡರೆ......... ದೇವ:-ಚಿ!! ನಾನು ಹೇಳುವುದನ್ನು ಕೇಳುವುದೇ ಇಲ್ಲವೆ ! (ಗಟ್ಟಿ ಯಾಗಿ) ಸೈನ್ಯದಲ್ಲಿ ಸುಮಾರು ೫,೦೦೦ ಜನರಿದ್ದರು, ಮದ್ದು ಗುಂಡು ಗಳೂ ಫಿರಂಗಿಯೂ ಇದ್ದುವು. ಉಳಿದ ಸಾಮಗ್ರಿಗಳೂ ಬಹಳವಾ ಗಿದ್ದುವು, ವೀರವರ್ಮನು ಬಲಸೇನನನ್ನು ನೋಡಿ, ಬಲಸೇನನು ಆರೆಂಬುದು ತಮಗೆ ತಿಳಿದೇ ಇರಬಹುದು. ಆ8! ಬಲಸೇನನೆ! ಏನು ಹೇಳಲಿ ? ಅಷ್ಟು ಸೈನ್ಯವಿದ್ದರೂ ಅದರಿಂದ ಒಂದು ತೊಟ್ಟು ರಕ್ತವಾದರೂ ಕೆಳಗೆ ಬೀಳದಂತೆ, ನಡೆಯಿಸಿಕೊಂಡು ಹೋಗದಿದ್ದರೆ ನನಗೆ ಬೇರೆ ಹೆಸರನ್ನು ಇಡಿಹಾಗೆಶ... ರಾಮ:- ದೇವದತ್ತನನ್ನು ಕುರಿತು) ನನಗೊ೦ದು ಬಟ್ಟಲು ಷರ ಬತ್ತನ್ನು ದಯವಿಟ್ಟು ಕೊಡಿ, ನಾವು ತಮ್ಮ ಮುತ್ತಿಗೆಯ ವಿವರವನ್ನು ಆಮೇಲೆ ಕೇಳುವೆವು. ದೇವಷರಬತ್ತೆ ! (ಸ್ವಗತ೦) ಎಂತಹ ವಿಚಿತ್ರ. ಇಂತಹ ವಿನ ಯಸಂಪನ್ನ ನನ್ನು ಕಂಡೇ ಇರಲಿಲ್ಲ. ರಾಮ;-ಅಹುದು, ನಾವು ದಣಿದು ಬಂದಿರುವದರಿಂದ ಷರಬತ್ತು ಬಹಳ ಹಿತಕರವಾಗಿರುತ್ತೆ, ಇದು ಸ್ವಚ್ಛಾವಿಹಾರದ ಸುಖನಿವಾಸವಷ್ಟೆ ! ದೇವ:-(ತೆಗೆದುಕೊಂಡುಬಂದು) ಸ್ವೀಕರಿಸಿ.