ಪುಟ:ನಿರ್ಮಲೆ.djvu/೪೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ನಿರ್ಮಲೆ ೩೧ ರಾಮ:ಹಾಗಾದರೆ ರಾಜಕೀಯ ವಿಚಾರದಲ್ಲಿ ನಿಮಗೆ ವಿಶೇಷ ಅಕ್ಕರೆಯಿರುವಂತೆ ಕಾಣುವುದಿಲ್ಲ. ದೇವ:- ನನಗೇನೋ ಸ್ವಲ್ಪವೂ ಅಕ್ಕರೆಯಿಲ್ಲ. ಪೂರ್ವದಲ್ಲಿ ನಾನು ರಾಜ್ಯಾಡಳಿತಕ್ಕೆ ಸಂಬಂಧಪಟ್ಟ ವಿಷಯಗಳಲ್ಲಿ ಬಹಳ ಹೊಡೆದಾ ಡುತ್ತಿದ್ದೆನು. ದಿನೇದಿನೇ ಕೆಡುತ್ತಾ ಬರುವ ರಾಜ್ಯ ಕ್ರಮಕ್ಕೆ ನಾನೊಬ್ಬನೇ ಹೊಡೆದಾಡಬೇಕಾಯಿತಲ್ಲದೆ, ಸ್ಥಿತಿಯೇನೋ ಅಭಿವೃದ್ಧಿಗೆ ಬರುವಂತೆ ಕಂಡು ಬರಲಿಲ್ಲ, ಆದುದರಿಂದ ಅದರ ಹಣೆಯಲ್ಲಿ ಬರದಂತೆ ಆಗಲೆಂದು ಎಲ್ಲವನ್ನೂ ಬಿಟ್ಟು ದೂರವಾದೆನು, ಅಂದಿನಿಂದ, ಹೈದರಾಲಿ, ಅಲ್ಲೇರ್ಖಾ, ಇವರುಗಳ ರಗಳೆಯನ್ನು ಕೇಳುವುದೇ ಇಲ್ಲ, ನನಗೆ ಇನ್ನೇನಾಗಬೇಕು, ಸ್ವಾಮಿ ? - ಪ್ರಿಯ:-ಉಪ್ಪರಿಗೆಯಮೇಲೆ ಉಂಡು, ಕೆಳಗೆ ಕುಡಿದು, ಒಳಗೆ ಮಿತ್ರರನ್ನು ಸತ್ಕರಿಸು, ಹೊರಗೆ ಅವರನ್ನು ಸಂತೋಷ ಪಡಿಸುತ್ತ, ನೀನೂ ಸಂತೋಷವಾಗಿ ಸಡಗರದಿಂದ ಜೀವಿಸುವೆಯಲ್ಲವೆ ? ದೇವ:ಸಡಗರವೇನೋ ಹೆಚ್ಚೇ ! ನಮ್ಮ ಮನೆಯ ಹಜಾರದಲ್ಲಿ ಪ್ರತಿದಿನವೂ, ಈ ಊರಿನಲ್ಲಿ ನಡೆಯುವ ಜಗಳಗಳ ಪಂಚಾಯಿತಿಯು ಇದ್ದೇ ಇರುವುದು, ಅರ್ಧ ಅಥವಾ ಮೂರುಪಾಲು ವ್ಯಾಜ್ಯಗಳನ್ನೆಲ್ಲಾ ನಾನೇ ತೀರ್ಮಾನಿಸುವೆನು. ರಾಮ: ನಿಮಗೆ ತರ್ಕಜ್ಞಾನವು ಚೆನ್ನಾಗಿರುವಂತಿದೆ ! ದೇವ:-ಅಹುದು, ತತ್ವಜ್ಞಾನವಿದೆ. ರಾಮ:-(ಸ್ವಗತ) -ಭೋಜನಶಾಲಾಧ್ಯಕ್ಷನಿಗೂ ತತ್ವಜ್ಞಾನವಿರು ವುದೆಂದು ಕೇಳಿದುದು ಈಗಳೇ ! ಪ್ರಿಯ:-ಅನುಭವಸ್ತ್ರನಾದ ಸೇನಾನಾಯಕನಂತೆ ನೀನು ಪ್ರಾಯಶಃ ಅವರ ಮೇಲೆ ನಾಲ್ಕ ಕಡೆಯಿಂದ ಬೀಳುವಿ, ಅವರಿಗೆ ನ್ಯಾಯಜ್ಞಾನವಿ ದ್ದರೆ, ತತ್ವಜ್ಞಾನದಿಂದ ಇದಿರಿಸುವಿ, ಅವರಿಗೇ ತತ್ವಜ್ಞಾನವಿದ್ದರೆ ಆಗೇನು ಮಾಡುವಿ? ತತ್ವಜ್ಞನೆ ! ನಿನಗೆ ಆಯಸ್ಸು ಹೆಚ್ಚಲಿ.