ಪುಟ:ನಿರ್ಮಲೆ.djvu/೪೧

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


49 ನಿರ್ಮಲೆ ದೇವ;ಬಹಳಸೊಗಸು, ಬಹು ಸಂತೋಷವಾಯಿತು. ನೀನು ಸೇನಾನಾಯಕನೆಂದು ಹೇಳಲು, ನನಗೆ ಬೆಲ್ಲ ಗಡಯುದ್ದದಲ್ಲಿ ಸೇನಾನಾಯ ಕನಾಗಿದ್ದ ಪ್ರತಾಪವರ್ಮನ ನೆನಪು ಬರುವುದು, ಆ ಯುದ್ಧವನ್ನು ವರ್ಣಿ ಸುವೆನು ಕೇಳಿರಿ. ರಾಮ:-ಆ ಯುದ್ಧವನ್ನು ವರ್ಣಿಸುವುದು ಹಾಗಿರಲಿ, ತತ್ವಜ್ಞ ರಾದ ತಮ್ಮ ಮನೆಯಲ್ಲಿ ಈಗ ಕೈಗೂ ಬಾಯಿಗೂ ಯುದ್ಧವನ್ನು ನಡೆಯಿ ಸಲು ಏನೇನು ಸಾಮಗ್ರಿಗಳು ಸಿದ್ಧವಾಗಿವೆ ? ದೇವ:-ಭೋಜನವೋ ? (ಸ್ವಗತಂ) ನನ್ನ ಮನೆಗೆ ಬಂದ ಇವರು ನನ್ನ ನೇ ಹೀಗೆ ಕೇಳುವುದು ಬಲುಚೆನ್ನಾಗಿದೆ ? ರಾಮ: ಅಹುದು, ನನಗೆ ಹಸಿವು ಹೆಚ್ಚು, ಎರಡೇ ಹೊತ್ತಿನ ಊಟವನ್ನು ಈಗ ಒಂದೇವೇಳೆ ಮಾಡುವ ನಂಬಿಕೆ ಇದೆ. ದೇವ: - -(ಸ್ವಗತ) ಇಂತಹ ಲಜ್ಜೆಯಿಲ್ಲದ ನಾಯಿಗಳನ್ನು ನಾನೆಲ್ಲಿ ಯ ನೋಡಿಲ್ಲ. (ರಾಮವರ್ಮನನ್ನು ನೋಡಿ) ಊಟದ ವಿಚಾರವು ನನಗೆ ತಿಳಿಯದು, ಅದನ್ನು ನನ್ನ ಹೆಂಡತಿಯೂ ಅವಳ ಸೇವಕಳೂ ನೋಡಿಕೊ ಳ್ಳುವರು, ಈ ವಿಷಯಕ್ಕೆ ಸಂಬಂಧಪಟ್ಟ ಸರ್ವಸ್ವಾತಂತ್ರ ವನ್ನೂ ನಾನು ಅವರಿಗೇ ವಹಿಸಿಬಿಟ್ಟಿರುವೆನು. ರಾಮ:-ಹೂ ! ಹೂ ! ಹಾಗೊ ? ದೇವ:-ಅಹುದು, ಅವರೇ ಊಟಕ್ಕೆ ಏನೇನನ್ನು ಸಿದ್ಧಗೊಳಿಸ ಬೇಕೆಂದು ಯೋಚಿಸುತ್ತಿರಬಹುದು. ರಾಮ:ಹಾಗಾದರೆ ಅವರಿಗೆ ಕೆಲವು ಸಲಹೆಗಳನ್ನು ಕೊಡಲು ನಾನು ತಮ್ಮ ಅನುಮತಿಯನ್ನು ಕೇಳಿಕೊಳ್ಳುವೆನು. ಅದೇ ನನ್ನ ಪದ್ಧ ತಿಯು, ಪ್ರಯಾಣಕಾಲದಲ್ಲಿ ಊಟದ ಏರ್ಪಾಡುಗಳನ್ನು ನಾನೇ ಮಾಡಿ ಕೊಳ್ಳುವೆನು, ಎಲ್ಲಿ, ಅಡುಗೆಯವರನ್ನು ಬರಮಾಡಿರಿ, ಆಕ್ಷೇಪಣೆ ಎನೂ ಇರಲಾರದಷ್ಟೆ?